ಜೇಮ್ಸ್ ಮ್ಯಾಟಿಸ್, ನರೇಂದ್ರ ಮೋದಿ 
ವಿದೇಶ

ಬೃಹತ್ ಸಾಲಗಳ ಅಪಾಯದ ವಾಸ್ತವತೆ ಹೇಳಿದ್ದಕ್ಕೆ ಪ್ರಧಾನಿ ಮೋದಿ ಬಗ್ಗೆ ಮ್ಯಾಟಿಸ್ ಪ್ರಶಂಸೆ

ಬೃಹತ್ ಸಾಲಗಳನ್ನು ಸ್ವೀಕರಿಸುವ ಅಪಾದಯ ಬಗ್ಗೆ ಎಚ್ಚರಿಕೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕ....

ವಾಷಿಂಗ್ಟನ್: ಬೃಹತ್ ಸಾಲಗಳನ್ನು ಸ್ವೀಕರಿಸುವ ಅಪಾದಯ ಬಗ್ಗೆ ಎಚ್ಚರಿಕೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ಅವರು ಪ್ರಶಂಸಿಸಿದ್ದು, ಅವರು ನಿಜವಾಗಿಯೂ ಉತ್ತಮವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೊಗಳಿದ್ದಾರೆ.
ಕಳೆದ ಶನಿವಾರ ಸಿಂಗಾಪುರದಲ್ಲಿ ನಡೆದ ಶಾಂಗ್ರಿಲಾ ಶೃಂಗ ಸಭೆಯಲ್ಲಿ ಪ್ರಧಾನಿ ಮೋದಿ ಉತ್ತಮ ವಿಚಾರವನ್ನು ಮಂಡಿಸಿದ್ದಾರೆ. ಸಾಲದ ಒತ್ತಡದಿಂದ ದೇಶಗಳು ತಮ್ಮ ಅಜೆಂಡಾವನ್ನೇ ಬದಲಿಸುವ ಒತ್ತಡಕ್ಕೆ ಸಿಲುಕುತ್ತವೆ ಎಂದು ಮ್ಯಾಟಿಸ್ ಅವರು ವರದಿಗಾರರಿಗೆ ತಿಳಿಸಿದ್ದಾರೆ.
ಭಾರತದ ಪ್ರಧಾನಿ ಮೋದಿಯವರ ಭಾಷಣವನ್ನು ನೆನಪಿಸಿಕೊಳ್ಳಲು ಬಯಸುತ್ತೇನೆ. ಅದು ಹಳೆ ತಲೆಮಾರಿನ ಜನ ಕೇಳುವಂತಹ ಭಾಷಣ. ಅವರು ನಿಜವಾಗಿಯೂ ದೊಡ್ಡ ವ್ಯಕ್ತಿ ಎಂದು ನಾನು ಭಾವಿಸಿದ್ದೇನೆ ಮತ್ತು ಬೃಹತ್ ಸಾಲಗಳ ಬಗ್ಗೆ ಅವರು ಪ್ರಸ್ತಾಪಿಸಿದ ವಿಷಯ ನನಗೆ ಇಷ್ಟವಾಯಿತು ಎಂದು ಮ್ಯಾಟಿಸ್ ತಿಳಿಸಿದ್ದಾರೆ.
ನಾನು ನನ್ನ ಕೋಣೆಗೆ ಮರಳಿದ ನಂತರ ಆ ರಾತ್ರಿ ಯೋಚಿಸುತ್ತಿದ್ದೆ, ಮತ್ತೊಂದು ದೇಶದಿಂದ ಬೃಹತ್ ಸಾಲ ಪಡೆದರೆ, ನೀವು ನಿಮ್ಮ ಸಾರ್ವಭೌಮತ್ವವನ್ನು ಕಳೆದುಕೊಳ್ಳಬಹುದು ಮತ್ತು ನಿಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳಬಹುದು ಎಂದು ಅಮೆರಿಕ ರಕ್ಷಣಾ ಕಾರ್ಯದರ್ಶಿ ಎಚ್ಚರಿಕೆ ನೀಡಿದ್ದಾರೆ.
ಕಳೆದ ಶನಿವಾರ ಶಾಂಗ್ರಿಲಾ ಶೃಂಗ ಸಭೆಯಲ್ಲಿ ಪ್ರಧಾನ ಭಾಷಣ ಮಾಡಿದ್ದ ಪ್ರಧಾನಿ ಮೋದಿ, ಇತರೆ ದೇಶಗಳಿಗೆ ಬೃಹತ್ ಸಾಲ ನೀಡುವ ಸರ್ಕಾರಗಳನ್ನು ಕಟುವಾಗಿ ಟೀಕಿಸಿದ್ದರು. ಈ ಮೂಲಕ ಪಾಕಿಸ್ತಾನ ಮತ್ತು ಶ್ರೀಲಂಕಾಗೆ ಬೃಹತ್ ಸಾಲಗಳನ್ನು ನೀಡುತ್ತಿರುವ ಚೀನಾಗೆ ಟಾಂಗ್ ನೀಡಿದ್ದರು. ಅಲ್ಲದೆ ಬೃಹತ್ ಸಾಲವೊಂದು ಹೇಗೆ ದೇಶಕ್ಕೆ ಹೊರೆಯಾಗುತ್ತದೆ ಮತ್ತು ಸಾಲದ ಮೊತ್ತ ಹೆಚ್ಚಿದಂತೆ ಮತ್ತೊಂದು ದೇಶಕ್ಕೂ ಯಾವ ರೀತಿ ತೊಂದರೆಯಾಗುತ್ತದೆ ಎನ್ನುವುದನ್ನು ಮೋದಿ ತಮ್ಮ ಭಾಷಣದಲ್ಲಿ ವಿವರಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

ಬಾಲಿವುಡ್ ನಟ ನಾನಾ ಪಾಟೇಕರ್ ನಿಧನಕ್ಕೆ ಬಿಗ್ ಟ್ವಿಸ್ಟ್: ಅಸಹಜ ಸಾವು ಕೇಸ್ ದಾಖಲಿಸಿದ ಗೋವಾ ಪೊಲೀಸರು!

ರೈಲಿನಲ್ಲಿ 'ನನ್ನ ಸುತ್ತಲೂ ಬರೀ ಪುರುಷರೇ ಇದ್ದಾರೆ': ಆಂಧ್ರದಲ್ಲಿ ಶವವಾಗಿ ಪತ್ತೆಯಾದ ಡ್ಯಾನ್ಸರ್‌ ಕೊನೆಯ ಸಂದೇಶ!

ಬೇಕಾದರೆ ನನ್ನ ವಿರುದ್ಧವೂ ಫಾರ್ಮ್‌ - 7 ಸಲ್ಲಿಸಿ: ಕಾಂಗ್ರೆಸ್'ಗೆ BJP ಸಂಸದ ಯದುವೀರ್ ಒಡೆಯರ್ ಸವಾಲು