ನರೇಂದ್ರ ಮೋದಿ-ಹಫೀಜ್ ಸಯೀದ್ 
ವಿದೇಶ

ಪ್ರಧಾನಿ ಮೋದಿಯನ್ನು ಕೊಂದು, ಭಾರತವನ್ನು ವಿಭಜಿಸುತ್ತೇವೆ: ಉಗ್ರ ಹಫೀಜ್ ಸಯೀದ್ ಆಪ್ತ

ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಂದು ಭಾರತವನ್ನು ವಿಭಜನೆ ಮಾಡುತ್ತೇವೆ ಎಂದು 2008ರ ಮುಂಬೈ ದಾಳಿ ಮಾಸ್ಟರ್ ಮೈಂಡ್ ಹಾಗೂ ನಿಷೇಧಿತ...

ರಾವಲ್ ಕೋಟ್: ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಂದು ಭಾರತವನ್ನು ವಿಭಜನೆ ಮಾಡುತ್ತೇವೆ ಎಂದು 2008ರ ಮುಂಬೈ ದಾಳಿ ಮಾಸ್ಟರ್ ಮೈಂಡ್ ಹಾಗೂ ನಿಷೇಧಿತ ಜಮಾದ್-ಉದ್-ದವಾ ಮುಖ್ಯಸ್ಥ ಹಫೀಜ್ ಸಯೀದ್ ನ ಆಪ್ತ ಹಾಗೂ ಜೆಯುಡಿ ಸಂಚಾಲಕ ಬಶೀರ್ ಅಹ್ಮದ್ ಖರ್ಘಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾನೆ. 
ಭಾರತ ಮತ್ತು ಅಮೆರಿಕದಲ್ಲಿ ಇಸ್ಲಾಮಿನ ಬಾವುಟವನ್ನು ಸ್ಥಾಪಿಸುತ್ತೇವೆ. ಭಾರತದ ಪ್ರದಾನಿ ಮೋದಿಯನ್ನು ಹತ್ಯೆ ಮಾಡುತ್ತೇವೆ. ಭಾರತ ಹಾಗೂ ಇಸ್ರೇಲ್ ಅನ್ನು ವಿಭಜನೆ ಮಾಡುತ್ತೇವೆ. ಅತೀ ಹೆಚ್ಚು ಹುತಾತ್ಮರನ್ನು ಸೃಷ್ಟಿ ಮಾಡುತ್ತೇವೆ ಎಂದು ಹೇಳಿದ್ದಾನೆ. 
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಪೂಂಚ್ ಜಿಲ್ಲೆಯ ಮಸೀದಿಯೊಂದರಲ್ಲಿ ನಡೆದ ರಂಜಾನ್ ನ ಶುಕ್ರವಾರದ ನಮಾಜ್ ನ ಭಾಷಣದ ವೇಳೆ ಬಶೀರ್ ನಾಲಿಗೆ ಹರಿದು ಬಿಟ್ಟಿದ್ದಾನೆ. 
ರಂಜಾನ್ ಜಿಹಾದ್ ನ ತಿಂಗಳಾಗಿದ್ದು ಈ ತಿಂಗಳಿನಲ್ಲಿ ಹುತಾತ್ಮರಾದವರಿಗೆ ಸ್ವರ್ಗದ ಬಾಗಿಲು ತೆರೆದಿರುತ್ತದೆ. ನಮ್ಮ ಸೈನಿಕರು ಕಾಶ್ಮೀರದಲ್ಲಿ ಭಾರತದ ವಿರುದ್ಧ ಹೋರಾಟ ಮಾಡಿ ಜಿಹಾದ್ ಮಾಡುತ್ತಿದ್ದಾರೆ. ನಾವು ಕಾಶ್ಮೀರಕ್ಕೆ ಸ್ವತಂತ್ರ ಕೊಡಿಸಿ ಭಾರತವನ್ನು ನಾಶ ಮಾಡುತ್ತೇವೆ ಎಂದು ಹೇಳಿದ್ದಾನೆ. 
ಇದೇ ವೇಳೆ ಭಾರತದ ವಿರುದ್ಧದ ನಮ್ಮ ಹೋರಾಟಕ್ಕೆ ನೀವು ಬೆಂಬಲ ನೀಡಬೇಕು. ನಮಗೆ ಆಹಾರ ಧಾನ್ಯ ಹಾಗೂ ಹಣವನ್ನು ದಾನ ಮಾಡಬೇಕು. ಅಲ್ಲದೆ ಮಹಿಳೆಯರು ತಮ್ಮ ಮಕ್ಕಳನ್ನು ನಮಗೆ ಅರ್ಪಿಸಬೇಕೆಂದು ಅಂಗಲಾಚಿದ್ದಾನೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜೀನಾಮೆ ಬಗ್ಗೆ ಖುದ್ದು ಸುಳಿವು ನೀಡಿದ CM ಸಿದ್ದರಾಮಯ್ಯ; ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​!

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ಸಿಎಂ ಸಿದ್ದರಾಮಯ್ಯ ಪದತ್ಯಾಗ; ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಹತ್ವದ ಸಭೆ

Mysuru Rain: ಸಿಡಿಲು ಬಡಿದು ಬೆಂಗಳೂರಿನ ಟೆಕ್ಕಿ ಸಾವು

SCROLL FOR NEXT