ವಿದೇಶ

ಅಮೆರಿಕದ ಸಕರುಗಳ ಮೇಲೆ ಶೇ.100 ರಷ್ಟು ಸುಂಕ: ಭಾರತದ ವಿರುದ್ಧ ಟ್ರಂಪ್ ಅಸಮಾಧಾನ

Srinivas Rao BV
ವಾಷಿಂಗ್ ಟನ್: ಭಾರತವೂ ಸೇರಿದಂತೆ ಅಮೆರಿಕದ ಕೆಲವು ಸರಕುಗಳ ಮೇಲೆ ಶೇ.100 ರಷ್ಟು ಸುಂಕ ವಿಧಿಸುತ್ತಿರುವ ವಿಶ್ವದ ಟಾಪ್ ಆರ್ಥಿಕತೆ ಹೊಂದಿರುವ ದೇಶಗಳ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
ಕೆನಡಾದಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿರುವ ಟ್ರಂಪ್, ಅಮೆರಿಕವನ್ನು ದೋಚುತ್ತಿರುವ ರಾಷ್ಟ್ರಗಳೊಂದಿಗಿನ ವ್ಯಾಪಾರ ಸಂಬಂಧಗಳನ್ನು ಸ್ಥಗಿತಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದು, ಅಮೆರಿಕ ಪಿಗ್ಗಿ ಬ್ಯಾಂಕ್ ಆಗಿದ್ದು ಎಲ್ಲರೂ ನಮ್ಮನ್ನು ದೋಚುತ್ತಿದ್ದಾರೆ. ಸರಕುಗಳ ಮೇಲಿನ ಸುಂಕಕ್ಕೆ ಸಂಬಂಧಿಸಿದಂತೆ ತಮ್ಮ ಆರೋಪ ಅಭಿವೃದ್ಧಿ ಹೊಂದಿರುವ ಆರ್ಥಿಕತೆಗೆ ಮಾತ್ರ ಸೀಮಿತವಲ್ಲ ಎಂದು ಹೇಳಿದ್ದಾರೆ. 
ಭಾರತವೂ ಅಮೆರಿಕದ ಕೆಲವು ಸರಕುಗಳ ಮೇಲೆ ಶೇ.100 ರಷ್ಟು ಸುಂಕ ವಿಧಿಸುತ್ತದೆ, ಆದರೆ ನಾವು ಕೆಲವು ಸರಕುಗಳಿಗೆ ದರ ವಿಧಿಸುವುದಿಲ್ಲ, ನಾವು ಹಾಗೆ ಮಾಡಲೂ ಸಾಧ್ಯವಿಲ್ಲ, ಭಾರತದಂತೆಯೇ ಹಲವು ರಾಷ್ಟ್ರಗಳು ಅಮೆರಿಕಾ ಸರಕುಗಳ ಮೇಲೆ ಶೇ.100 ರಷ್ಟು ಸುಂಕ ವಿಧಿಸುತ್ತಿವೆ ಎಂದು ಟ್ರಂಪ್ ಹೇಳಿದ್ದಾರೆ. 
ಹಾರ್ಲೇ ಡೇವಿಡ್ ಸನ್ ಬೈಕ್ ಗಳ ಮೇಲೆ ಅತಿ ಹೆಚ್ಚು ಆಮದು ಸುಂಕ ವಿಧಿಸುತ್ತಿರುವ ಭಾರತದ ಕ್ರಮವನ್ನು ಟ್ರಂಪ್ ಹಲವು ಬಾರಿ ಪ್ರಶ್ನಿಸಿದ್ದಾರೆ. ಅಂತೆಯೇ ಭಾರತೀಯ ಬೈಕ್ ಗಳ ಮೇಲೆ ಅಮೆರಿಕವೂ ಹೆಚ್ಚು ಸುಂಕ ವಿಧಿಸುವ ಎಚ್ಚರಿಕೆ ವಿಧಿಸಿದರು. 
SCROLL FOR NEXT