ವಿದೇಶ

ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯಿಂದ ಅಮೆರಿಕ ಹೊರಕ್ಕೆ

Manjula VN
ವಾಷಿಂಗ್ಟನ್: ದೇಶದೊಳಗೆ ಅಕ್ರಮವಾಗಿ ನುಸುಳುವ ಕುಟುಂಬಗಳಿಂದ ಅವರ ಮಕ್ಕಳನ್ನು ಪ್ರತ್ಯೇಕಿಸುವ ಅಮೆರಿಕಾ ಸರ್ಕಾರದ ನಿಲುವನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥೆ ಟೀಕಿಸಿದ ಹಿನ್ನಲೆಯಲ್ಲಿ, ಅಂತರಾಷ್ಟ್ರೀಯ ಮಾನವ ಹಕ್ಕುಗಳ ಮಂಡಳಿಯಿಂದ ಹೊರ ಹೋಗಲು ಡೊನಾಲ್ಡ್ ಟ್ರಂಪ್ ಆಡಳಿತ ನಿರ್ಧರಿಸಿದೆ ಎಂದು ತಿಳಿದುಬಂದಿದೆ. 
ಅಮೆರಿಕಾದ ಕಾಲ ಮಾನದ ಪ್ರಕಾರ ಮಂಗಳವಾರ (ಭಾರತೀಯ ಕಾಲಮಾನ ಬುಧವಾರ ಬೆಳಿಗ್ಗೆ) ನಡೆಯಲಿರುವ ಮಾನವ ಹಕ್ಕುಗಳ ಮಂಡಳಿಯಲ್ಲಿ ಅಮೆರಿಕಾದ ವಿದೇಶಾಂಗ ಸಚಿವ ಮೈಕ್ ಪೊಂಪೆ ಮತ್ತು ವಿಶ್ವಸಂಸ್ಥೆಗೆ ಅಮೆರಿಕದ ಪ್ರತಿನಿಧಿ ನಿಕ್ಕಿ ಹ್ಯಾಲೆಯವರು ಜಂಟಿಯಾಗಿ ಈ ಘೋಷಣೆ ಮಾಡಲಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. 
ಇಸ್ರೇಲ್ ಬಗ್ಗೆ ಪಕ್ಷಪಾತ ಧೋರಣೆ ಅನುಸರಿಸುವ ಮಾನವ ಹಕ್ಕುಗಳ ಮಂಡಳಿಯಿಂದ ಹೊರಹೋಗುವುದಾಗಿ ಹ್ಯಾಲೆ ಅವರು ಕಳೆದ ವರ್ಷವಷ್ಟೇ ಗುಟುರು ಹಾಕಿದ್ದರು. 
SCROLL FOR NEXT