ಸ್ಟೀಫನ್ ಹಾಕಿಂಗ್ 
ವಿದೇಶ

ಕಪ್ಪು ಕುಳಿಗಳ ರಹಸ್ಯ ಬೇಧಿಸಿದ್ದ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಇನ್ನಿಲ್ಲ

ವಿಶ್ವ ವಿಖ್ಯಾತ ಭೌತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಇಂದು (ಬುಧವಾರ) ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ...

ಲಂಡನ್: ವಿಶ್ವ ವಿಖ್ಯಾತ ಭೌತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಇಂದು (ಬುಧವಾರ) ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ.
"ಅವರೊಬ್ಬ ಮಹಾನ್ ವಿಜ್ಞಾನಿ  ಅವರು ಮಾಡಿರುವ ಕೆಲಸಗಳ ಮೂಲಕ ಅವರು ಅನೇಕ ವರ್ಷಗಳ ಕಾಲ ಬದುಕುತ್ತಾರೆ." ಹಾಕಿಂಗ್ ಮಕ್ಕಳಾದ ಲೂಸಿ, ರಾಬರ್ಟ್ ಮತ್ತು ಟಿಮ್ ಹೇಳಿದ್ದಾರೆ.
ಆಧುನಿಕ ಕಾಲದ ಪ್ರಸಿದ್ಧ ಸೈದ್ಧಾಂತಿಕ ಭೌತಶಾಸ್ತ್ರಜ್ಞರಾಗಿದ್ದ ಹಾಕಿಂಗ್  ಬಾಹ್ಯಾಕಾಶ , ಕಪ್ಪು ಕುಳಿಗಳ ರಹಸ್ಯದ ಬಗೆಗೆ ಬರೆದ ’ಎ ಬ್ರೀಫ್ ಹಿಸ್ಟರಿ ಆಫ್ ಟೈಮ್’ ವಿಶ್ವದ ಅತಿ ಹೆಚ್ಚು ಮಾರಾಟಕಂಡ ಪುಸ್ತಕಗಳಲ್ಲಿ ಒಂದಾಗಿದೆ. ಹಾಕಿಂಗ್ ಅವರು ಆಲ್ಬರ್ಟ್ ಐನ್ಸ್ಟೈನ್ ನಂತರ ಜಗತ್ತು ಕಂಡ ಅತ್ಯಂತ ಪ್ರಸಿದ್ದ ವಿಜ್ಞಾನಿ ಎನಿಸಿದ್ದರು.
ಹಾಕಿಂಗ್ ಅವರು ಸ್ನಾಯುವಿಗೆ ಸಂಬಂಧಿಸಿದ ತೀವ್ರತರದ ನರಕೋಶದ ಕಾಯಿಲೆಗೆ ತುತ್ತಾಗಿದ್ದರು. ಅವರಿಗೆ ಇಪ್ಪತ್ತೊಂದು ವರ್ಷವಾಗಿದ್ದಾಗ ಅವರಿಗೆ 'ಅಮಿಯೊಟ್ರೋಫಿಕ್ ಲ್ಯಾಟರಲ್ ಸ್ಕ್ಲೆರಾಸಿಸ್‌'ನ (ಅಥವಾ ALS) ಇರುವುದು ಪತ್ತೆಯಾಗಿತ್ತು. ಇದೊಂದು ಅಪರೂಪದ ರೋಗವಾಗಿದ್ದು ಸಂಪೂರ್ಣವಾಗಿ ಪಾರ್ಶ್ವವಾಯುವಿಗೆ ಒಳಪಟ್ಟ ಸ್ಥಿತಿಯಾದ ಇದು ನರ-ಸ್ನಾಯು ಕ್ಷಯ ರೋಗವಾಗಿದೆ.
1985 ರಲ್ಲಿ ಹಾಕಿಂಗ್ ತೀವ್ರವಾದ ನ್ಯುಮೋನಿಯ ಆಘಾತಕ್ಕೆ ಒಳಗಾದರು.ಆದರೂ ಅವರು ತಮ್ಮ ವೈಜ್ಞಾನಿಕ ಕೆಲಸವನ್ನು ಮುಂದುವರೆಸಿದರು. ದೂರದರ್ಶನ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಅಲ್ಲದೆ ಹಾಕಿಂಗ್ ಎರಡನೇ ಬಾರಿಗೆ ವಿವಾಹವಾಗಿದ್ದರು.
ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರದ ಲ್ಯೂಕಾಶಿಯಾದ ಪ್ರಾಧ್ಯಾಪಕರಾಗಿ ಐಸಾಕ್ ನ್ಯೂಟನ್ ನ ಉತ್ತರಾಧಿಕಾರಿಗಳಲ್ಲಿ ಒಬ್ಬರಾಗಿ,ಹಾಕಿಂಗ್ ಗುರುತಿಸಿಕೊಂಡಿದ್ದರು."ಏಕೀಕೃತ ಸಿದ್ಧಾಂತ" ಎಂಬ ಭೌತಶಾಸ್ತ್ರದ ಮಹತ್ವದ ಸಿದ್ದಾಂತವನ್ನು ಬೆಳೆಸುವಲ್ಲಿ ಹಾಕಿಂಗ್ ನಿರತರಾಗಿದ್ದರು. ಈ ಸಿದ್ದಾಂತವು ಐನ್ಸ್ಟೈನ್  ಸಾಪೇಕ್ಷತೆ ಸಿದ್ಧಾಂತದ ವಿರೋಧಾಭಾಸವನ್ನು ಪರಿಹರಿಸುತ್ತದೆ,  ಗ್ರಹಗಳಂತಹ ದೊಡ್ಡ ವಸ್ತುಗಳ ಚಲನೆಯನ್ನು ನಿಯಂತ್ರಿಸುವ ಗುರುತ್ವಾಕರ್ಷಣೆಯ ನಿಯಮಗಳನ್ನು ಮತ್ತು ಕ್ವಾಂಟಮ್ ಮೆಕ್ಯಾನಿಕ್ಸ್ ಸಿದ್ಧಾಂತವನ್ನು ವಿವರಿಸುವ ಈ ತತ್ವವು ಹಾಕಿಂಗ್ ಅವರ ಮಹತ್ವದ ಕೊಡುಗೆಯಾಗಿದೆ.
ಹಾಕಿಂಗ್ ಅವರ ಈ ಸಂಶೋಧನೆ ಒಂದು ಧಾರ್ಮಿಕ ಹುಡುಕಾಟವಾಗಿದ್ದು "ಇದು ಎಲ್ಲರ ಸಿದ್ದಾಂತ, ದೇವರ ಮನಸ್ಸನ್ನು ತಿಳಿಯಲು ಪ್ರಯತ್ನಿಸುವ ತತ್ವ": ಎಂದು ಹಾಕಿಂಗ್ ಹೇಳಿದ್ದರು.
"ಇದು ಸಂಪೂರ್ಣ ಸ್ಥಿರ ಸಿದ್ದಾಂತದೆಡೆಗಿನ ಮೊದಲ ಹೆಜ್ಜೆ ಮಾತ್ರವೇ ಆಗಿದೆ. ನಮ್ಮ ಸುತ್ತಲಿನ ಘಟನೆಗಳನ್ನು ಕುರಿತು ಸಂಪೂರ್ಣ ಅರಿವನ್ನು ಹೊಂದುವುದು ನಮ್ಮ ಗುರಿಯಾಗಿದೆ".ನಮ್ಮ ಅಸ್ತಿತ್ವದ ಬಗೆಗೆ ಹಾಕಿಂಗ್ ಎ ಬ್ರೀಫ್ ಹಿಸ್ಟರಿ ಆಫ್ ಟೈಮ್ "ನಲ್ಲಿ ವಿವರಿಸುತ್ತಾರೆ.
ಆದರೆ ನಂತರದ ವರ್ಷಗಳಲ್ಲಿ ಅವರು ತಾವು ವಿವರಿಸಿದ್ದ ಏಕೀಕೃತ ಸಿದ್ಧಾಂತವು ಅಸ್ತಿತ್ವದಲ್ಲಿಲ್ಲ ಎಂದು ಸಾರಿದ್ದರು. 2001 ರಲ್ಲಿ "ದಿ ಯುನಿವರ್ಸ್ ಇನ್ ಎ ನಟ್ಷೆಲ್" ಎಂಬ ಹೊತ್ತಿಗೆಯನ್ನು ಹೊರತಂದ ಹಾಕಿಂಗ್ ಅದರಲ್ಲಿ ಸೂಪರ್ ಗುರುತ್ವಾಕರ್ಷಣೆ, ನಗ್ನ ಏಕತ್ವ ಮತ್ತು 11 ಆಯಾಮದ ಬ್ರಹ್ಮಾಂಡದ ಸಾಧ್ಯತೆ.ಕುರಿತು ಹಾಕಿಂಗ್ ವಿವರಿಸಿದ್ದಾರೆ.
"ಭವಿಷ್ಯ ಜೀವನದಲ್ಲಿ ಉತಮ ವ್ಯಕ್ತಿಗಳು ಗೆಲ್ಲುತ್ತಾರೆ, ಮುಂದಿನ ದಿನಗಳಲ್ಲಿ ಅವರು ಮುಂಚೂಣಿಗೆ ಬರುತ್ತಾರೆ ಎನ್ನುವ ನಂಬಿಕೆ ಗಟ್ಟಿಯಾಗಿಸಿಕೊಳ್ಳುವುದಕ್ಕೆ ದೇವರ ಅಸ್ತಿತ್ವದಲ್ಲಿ ನಂಬಿಕೆ  ಅಗತ್ಯ" ಹಾಕಿಂಗ್ ಹೇಳಿದ್ದರು.
"ಬ್ರಹ್ಮಾಂಡ ಏಕೆ ಅಸ್ತಿತ್ವದಲ್ಲಿದೆ? ಈ ಪ್ರಶ್ನೆಗೆ ಉತ್ತರ ನೀಡುವ ವಿಧಾನ ನನಗೆ ತಿಳಿದಿಲ್ಲ. ಒಂದು ವೇಳೆ ನನಗೆ ಅದು ತಿಳಿದದ್ದಾದರೆ ಅದೇ ನನ್ನನ್ನು ನುಂಗಿ ಹಾಕಲಿದೆ" 1991 ರಲ್ಲಿ ಹಾಕಿಂಗ್ ಹೇಳಿದ ಮಾತುಗಳಿವು.
ಹಾಕಿಂಗ್ ತಾವು ’ದಿ ಸಿಂಪ್ಸನ್ಸ್’ ಮತ್ತು ’ಸ್ಟಾರ್ ಟ್ರೆಕ್’ ಎನ್ನುವ ಕಿರುತೆರೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು. ಹಾಕಿಂಗ್ ಅವರ 60 ನೇ ಜನ್ಮದಿನವನ್ನು 2002ರಲ್ಲಿ ಆಚರಿಸಲಾಗಿತ್ತು. ಅದರಲ್ಲಿ ಪ್ರಖ್ಯಾತ ಯು2 ಗಿಟಾರ್ ವಾದಕ ದಿ ಎಡ್ಜ್  ಭಾಗವಹಿಸಿದ್ದರು.
ಹಾಕಿಂಗ್ ಅವರ ಆರಂಭಿಕ ಜೀವನವನ್ನಾಧರಿಸಿದ ಚಲನಚಿತ್ರ ’ದಿ ಥಿಯರಿ ಆಫ್ ಎವೆರಿಥಿಂಗ್"(2014) ನಲ್ಲಿ ಎಡ್ಡಿ ರೆಡ್ಮೈನೇ ವಿಜ್ಞಾನಿ ಯ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರಕ್ಕಾಗಿ ಅವರು ಉತ್ತಮ ನಟ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದರು. ಈ ಚಿತ್ರದಲ್ಲಿ ಹಾಕಿಂಗ್ ಅವರ ಮಹತ್ವದ ಸಾಧನೆಗಳ ಕುರಿತಂತೆ ತೋರಿಸಲಾಗಿದೆ.
ಒಟ್ಟಾರೆ  ಹಾಕಿಂಗ್ ಅವರ ಸಾಧನೆಗಳು, ಅವರ ಅನಾರೋಗ್ಯದ ನಡುವೆಯೂ ದೀರ್ಘಕಾಲದ ಬದುಕು ಕೆಲವರಿಗೆ ಸ್ಪೂರ್ತಿ ತುಂಬಬಲ್ಲದೆ. ವಿಕಲಾಂಗರಾದರೂ ಸಹ ಬದುಕುವ ಸ್ಪೂರ್ತಿ, ಆತ್ಮವಿಶ್ವಾಸವಿದ್ದರೆ ಸಾವನ್ನೂ ಮುಂದೂಡಲು ಸಾಧ್ಯ ಎನ್ನುವುದಕ್ಕೆ ಸ್ಟೀಫನ್ ಹಾಕಿಂಗ್ ಜೀವನ ಸಾಕ್ಷಿಯಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ ನೆರವೇರಿಸಿದ್ದು ಹೇಗೆ?: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ; ಈ ಅದ್ಭುತ Video ನೋಡಿ..

SCROLL FOR NEXT