ಬೀಜಿಂಗ್: ಚೀನಾದ ಫುಝೌ ಮೃಗಾಲಯದಲ್ಲಿ ದಿನಂಪ್ರತಿ ಆರೈಕೆ ಮಾಡುತ್ತಿದ್ದ ಮೃಗಾಲಯದ ಸಿಬ್ಬಂದಿಯನ್ನೇ ಹುಲಿಯೊಂದು ಕೊಂದು ಹಾಕಿದೆ.
ಪ್ರಾಣಿಗಳಿಗೆ ತರಬೇತಿ ನೀಡಲು ಬಳಸುವ ಬೋನಿನೊಳಗೆ ಹುಲಿ ಮತ್ತು ಮೃಗಾಲಯದ ಸಿಬ್ಬಂದಿಯಾದ ವೂ ಇದ್ದರು. ಯಾವಾಗಲೂ ಶಾಂತವಾಗಿ ಇರುತ್ತಿದ್ದ ಹುಲಿ ಅಂದು ಇದ್ದಕ್ಕಿದಂತೆ ವೂ ಮೇಲೆ ದಾಳಿ ಮಾಡಿದೆ. ಕುತ್ತಿಗೆಗೆ ಬಾಯಿ ಹಾಕಿ ಕಚ್ಚಿದ್ದರಿಂದ ವೂ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಈ ವೇಳೆ ವೂ ರಕ್ಷಿಸಲು ಇತರ ಸಿಬ್ಬಂದಿಗಳು ಸಾಕಷ್ಟು ಪ್ರಯತ್ನಿಸಿದರು ಫಲ ನೀಡಲಿಲ್ಲ.
ಇನ್ನು ಫುಜೌ ಸಿಬ್ಬಂದಿಯಾಗಿದ್ದ ವೂ ಹುಲಿ ಮರಿಯಾಗಿದ್ದಾಗಿನಿಂದಲೂ ಅದರ ಆರೈಕೆ ಮಾಡಿದ್ದರು. ದೀರ್ಘ ಕಾಲ ಮಾನವನೊಂದಿಗೆ ಒಡನಾಟದಲ್ಲೇ ಹುಲಿಯನ್ನು ಸಾಕಲಾಗಿತ್ತು. ಆದರೂ ಸಾಕಿದವನನ್ನೇ ಹುಲಿ ಕೊಂದು ಮುಗಿಸಿದೆ.
ವೂ ಮೇಲಿನ ಹುಲಿ ದಾಳಿಯ ದೃಶ್ಯಗಳನ್ನು ಪ್ರವಾಸಿಗರೊಬ್ಬರು ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು ವಿಡಿಯೋ ವೈರಲ್ ಆಗಿದೆ.