ವಾಷಿಂಗ್ ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾದಕ ವಸ್ತು ಕಳ್ಳಸಾಗಣೆ ನಿಯಂತ್ರಣ ಕುರಿತ ತಮ್ಮ ಯೋಜನೆಯನ್ನು ಸೋಮವಾರ (ಮಾ.19)ರಂದು ಮಂಡಿಸಲಿದ್ದಾರೆ. ಇದರಲ್ಲಿ ಮಾದಕವಸ್ತು ಕಳ್ಳಸಾಗಣೆದಾರರಿಗೆ ಮರಣದಂಡನೆ ವಿಧಿಸುವ ಅಂಶವೂ ಸೇರಿದೆ.
"ಪ್ರಸಕ್ತ ಜಾರಿಗೆ ತರುತ್ತಿರುವ ಕಾನೂನು ನಿಯಮಗಳಡಿಯಲ್ಲಿ ಮಾದಕವಸ್ತು ಕಳ್ಳ ಸಾಗಣೆದಾರರಿಗೆ ಮರಣದಂಡನೆ ವಿಧಿಸುವ ಪ್ರಸ್ತಾಪವಿದೆ" ಎಂದು ಅಮೆರಿಕಾದ ನ್ಯಾಯಾಂಗ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಆದರೆ ಕಾನೂನು ತಿದ್ದುಪಡಿ ಮಾಡದೆಯೂ ಮಾದಕ ವಸ್ತು ಕಳ್ಳ ಸಾಗಣೆದಾರರಿಗೆ ಮರಣದಂಡನೆ ವಿಧಿಸುವುದು ಹೇಗೆನ್ನುವುದನ್ನು ಅಧಿಕಾರಿಗಳು ವಿವರಿಸಿಲ್ಲ.
ನ್ಯೂ ಹ್ಯಾಂಪ್ ಶೈರ್ ರಾಜ್ಯದಲ್ಲಿ ಉಂಟಾದ ಬಿಕ್ಕಟ್ಟಿನ ತರುವಾಯ ಮ್ಯಾಂಚೆಸ್ಟರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಟ್ರಂಪ್ ತಮ್ಮ ಯೋಜನೆಯ ಕುರಿತು ವಿವರಿಸಿದ್ದರು. ಅಂದಾಜು 2.4 ಮಿಲಿಯನ್ ಅಮೆರಿಕನ್ನರು ನೋವು ನಿವಾರಕಗಳು, ಹೆರಾಯಿನ್ ಗಳಂತಹಾ ಮಾದಕ ವಸ್ತುಗಳಿ ವ್ಯಸನಿಗಳಾಗಿದ್ದಾರೆ. ಹೆರಾಯಿನ್, ಫೆನ್ಟಾನಿಲ್ ಮತ್ತು ನೋವು ನಿವಾರಕಗಳ ಅತಿಯಾದ ಸೇವನೆ ಅಮೆರಿಕನ್ನರಲ್ಲಿ ಕಂಡುಬಂದಿದ್ದು 2016 ರಿಂದ 2017ರಲ್ಲಿ ಇದು ಶೇ.30ರಷ್ಟು ಹೆಚ್ಚಾಗಿದೆ. ಎಂದು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಹೇಳಿಕೆ ನೀಡಿದೆ.
ಜುಲೈ 2016 ರಿಂದ ಸೆಪ್ಟೆಂಬರ್ 2017 ರ ವರೆಗೆ ಒಟ್ಟು 142,557 ಪ್ರಕರಣಗಳು ವರದಿಯಾಗಿದೆ. ಮಾದಕ ವಸ್ತು ವ್ಯಾಪಾರಿಗಳಿಗೆ ಇದಾಗಲೇ ಮರಣದಂಡನೆ ಶಿಕ್ಷೆಯನ್ನು ಟ್ರಂಪ್ ಸರ್ಕಾರ ರೂಪಿಸಿದೆ. ಇದೀಗ ಮಾದಕ ವಸ್ತು ಕಳ್ಳಸಾಗಣೆದಾರರಿಗೆ ಸಹ ಮರಣದಂಡನೆ ಆದೇಶನೀಡಲು ಉದ್ದೇಶಿಸಲಾಗಿದೆ.