ಸಂಗ್ರಹ ಚಿತ್ರ 
ವಿದೇಶ

ತಾಲಿಬಾನಿ ಉಗ್ರರ ದಾಳಿಯಾದ 6 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ವಾಪಸ್ ಆದ ಮಲಾಲಾ

ತಾಲಿಬಾನಿ ಉಗ್ರರಿಂದ ದಾಳಿಗೊಳಗಾದ 6 ವರ್ಷಗಳ ಬಳಿಕ ಹೆಣ್ಣುಮಕ್ಕಳ ಶಿಕ್ಷಣ ಹೋರಾಟಗಾರ್ತಿ ಮಲಾಲಾ ಯೂಸುಫ್ಜೈ ಪಾಕಿಸ್ತಾನಕ್ಕೆ ಬುಧವಾರ ವಾಪಸ್ ಆಗಿದ್ದಾರೆ.

ಇಸ್ಲಾಮಾಬಾದ್: ತಾಲಿಬಾನಿ ಉಗ್ರರಿಂದ ದಾಳಿಗೊಳಗಾದ 6 ವರ್ಷಗಳ ಬಳಿಕ ಹೆಣ್ಣುಮಕ್ಕಳ ಶಿಕ್ಷಣ ಹೋರಾಟಗಾರ್ತಿ ಮಲಾಲಾ ಯೂಸುಫ್ಜೈ ಪಾಕಿಸ್ತಾನಕ್ಕೆ ಬುಧವಾರ ವಾಪಸ್ ಆಗಿದ್ದಾರೆ.
ಬುಧವಾರ ಪಾಕಿ್ಸ್ತಾನದ ಬೆನಜಿರ್ ಭುಟ್ಟೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಲಾಲಾ ಮತ್ತು ಆಕೆಯ ಪೋಷಕರು ಆಗಮಿಸಿದ್ದು, ಅವರನ್ನು ಭಾರಿ ಭದ್ರತೆಯೊಂದಿಗೆ ಮನೆಗೆ ಕಳುಹಿಸಲಾಗಿದೆ. ಮಲಾಲಾ ಮತ್ತು ಆಕೆಯ ಕುಟುಂಬಸ್ಥರಿಗೆ ವ್ಯಾಪಕ ಭದ್ರತೆ ನೀಡಲಾಗಿದೆ.
ಮೂಲಭೂತವಾದಿ ತಾಲಿಬಾನಿ ಉಗ್ರರ ಕಪಿಮುಷ್ಟಿಯಲ್ಲಿರುವ ಸ್ವಾತ್ ಕಣಿವೆಯಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹೋರಾಟ ನಡೆಸುತ್ತಿದ್ದ ಮಲಾಲಾ, ರಹಸ್ಯವಾಗಿ ಅಂತಾರಾಷ್ಟ್ರೀಯ ಸುದ್ದಿವಾಹಿನಿಗೆ ತನ್ನ ದೇಶದ ಮೂಲಭೂತವಾದಿ ಸಂಪ್ರದಾಯದ ಕುರಿತು ಲೇಖನಗಳನ್ನು ಬರೆದು ಕಳುಹಿಸುತ್ತಿದ್ದಳು. ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ತನ್ನ 11ನೇ ವಯಸ್ಸಿನಲ್ಲೇ ಹೋರಾಟ ನಡೆಸುತ್ತಿದ್ದ ಮಲಾಲಾ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ 2012ರಲ್ಲಿ ಸ್ವಾತ್ ಕಣಿವೆಯಲ್ಲಿ ಶಾಲೆಗೆ ಹೋಗುತ್ತಿದ್ದ ಆಕೆಯ ಮೇಲೆ ತಾಲಿಬಾನಿ ಉಗ್ರರು ಗುಂಡಿನ ದಾಳಿ ನಡೆಸಿದ್ದರು.
ಮಲಾಲಾಳ ತಲೆ ಮತ್ತು ದೇಹಕ್ಕೆ ಗುಂಡುಗಳು ಹೊಕ್ಕು ಆಕೆ ಬದುಕುವುದೇ ಅನುಮಾನವಾಗಿತ್ತು. ಪಾಕಿಸ್ತಾನದ ಆಸ್ಪತ್ರೆಯಲ್ಲಿ ಮಲಾಲಾಗೆ ಚಿಕಿತ್ಸೆ ಮುಂದುವರೆದಿತ್ತು. ಇದೇ ಹೊತ್ತಿನಲ್ಲಿ ಮಲಾಲಾ ಪರ ವ್ಯಾಪಕ ಪ್ರತಿಭಟನೆಗಳು ನಡೆದ ಹಿನ್ವಲೆಯಲ್ಲಿ ಏರ್ ಲಿಫ್ಟ್ ಮೂಲಕ ಪಾಕಿಸ್ತಾನ ಸರ್ಕಾರ ಆಕೆಯನ್ನು ಲಂಡನ್ ಗೆ ರವಾನೆ ಮಾಡಿ ಅಲ್ಲಿ ಆಕೆಗೆ ಚಿಕಿತ್ಸಾ ವ್ಯವಸ್ಥೆ ಮಾಡಿತ್ತು.  ಬಳಿಕ ಚೇತರಿಸಿಕೊಂಡಿದ್ದ ಮಲಾಲಾ ಲಂಡನ್ ನಲ್ಲೇ ತನ್ನ ಶಾಲಾ ವಿದ್ಯಾಭ್ಯಾಸ ಮುಗಿಸಿದ್ದು, ಘಟನೆ ನಡೆದ ಆರು ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ವಾಪಸ್ ಆಗಿದ್ದಾಳೆ.
ತನ್ನ ಹೋರಾಟದಿಂದಲೇ ವಿಶ್ವವ್ಯಾಪಿ ಖ್ಯಾತಿ ಗಳಿಸಿದ್ದ ಮಲಾಲಾಗೆ 2014ರಲ್ಲಿ ನೊಬೆಲ್ ಶಾಂತಿ ಪುರಸ್ಕಾರ ನೀಡಿ ಗೌರವಿಸಲಾಗಿತ್ತು. ಮಲಾಲಾರೊಂದಿಗೆ ಭಾರತದ ಮಕ್ಕಳ ಹಕ್ಕು ಹೋರಾಟಗಾರ ಕೈಲಾಶ್ ಸತ್ಯಾರ್ಥಿ ಅವರೂ ಕೂಡ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಭಾಜನರಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್