ವಿದೇಶ

ನೇಪಾಳ ತನ್ನ ಪ್ರದೇಶವನ್ನು ಭಾರತದ ವಿರುದ್ಧ ಬಳಸಲು ಅವಕಾಶ ನೀಡುವುದಿಲ್ಲ- ಪ್ರಧಾನಿ ಕೆ. ಪಿ. ಶರ್ಮಾ ಒಲಿ

ನೇಪಾಳವು ಭಾರತದ ಆಸಕ್ತಿಗಳಿಗೆ ಒತ್ತು ನೀಡಲಿದ್ದು, ತನ್ನ ಪ್ರದೇಶವನ್ನು ಭಾರತದ ವಿರುದ್ಧ ಬಳಸಲು ಅವಕಾಶ ನೀಡುವುದಿಲ್ಲ ಎಂದು ನೇಪಾಳ ಪ್ರಧಾನಮಂತ್ರಿ ಕೆ. ಪಿ. ಶರ್ಮಾ ಒಲಿ ಭಾರತದ ಪ್ರಧಾನಿ ನರೇಂದ್ರಮೋದಿ ಅವರಿಗೆ ಭರವಸೆ ನೀಡಿದ್ದಾರೆ.

ಕಠ್ಮಂಡು : ನೇಪಾಳವು ಭಾರತದ ಆಸಕ್ತಿಗಳಿಗೆ ಒತ್ತು ನೀಡಲಿದ್ದು, ತನ್ನ ಪ್ರದೇಶವನ್ನು ಭಾರತದ ವಿರುದ್ಧ ಬಳಸಲು ಅವಕಾಶ ನೀಡುವುದಿಲ್ಲ ಎಂದು ನೇಪಾಳ ಪ್ರಧಾನಮಂತ್ರಿ ಕೆ. ಪಿ. ಶರ್ಮಾ ಒಲಿ ಭಾರತದ  ಪ್ರಧಾನಿ ನರೇಂದ್ರಮೋದಿ ಅವರಿಗೆ ಭರವಸೆ ನೀಡಿದ್ದಾರೆ.

ನರೇಂದ್ರಮೋದಿ ಅವರ ಎರಡು ದಿನಗಳ ನೇಪಾಳ ಪ್ರವಾಸ ಮುಗಿದಿದ್ದು, ಸುದ್ದಿಗಾರರಿಗೆ ವಿವರ ಒದಗಿಸಿದ  ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ, ನೇಪಾಳ ಪ್ರಧಾನಿಯಿಂದ ಮಹತ್ವಪೂರ್ಣವಾದ ಹೇಳಿಕೆ ಹೊರಬಂದಿದ್ದು, ಅವರೊಂದಿಗಿನ ಚರ್ಚೆ ತೃಪ್ತಿದಾಯಕವಾಗಿತ್ತು ಎಂದು ಹೇಳಿದ್ದಾರೆ.

ಸಿಕ್ಕಿಂ, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ  ಮತ್ತು ಉತ್ತರ ಖಂಡ್ ಜಿಲ್ಲೆಗಳನ್ನೊಳಗೊಂಡಂತೆ  ಪೂರ್ವ, ದಕ್ಷಿಣ ಮತ್ತು ಪಶ್ಚಿಮದಲ್ಲಿ  1, 850 ಕಿಲೋ ಮೀಟರ್ ಗಡಿ ಪ್ರದೇಶ ನೇಪಾಳದೊಂದಿಗೆ ಹಂಚಿಕೆಯಾಗಿದೆ.

ಕುಟುಂಬದ ಸಂಬಂಧಗಳು ಮತ್ತು ಸಂಸ್ಕೃತಿಯನ್ನು ಹಂಚಿಕೊಳ್ಳುವ ಗಡಿಯುದ್ದಕ್ಕೂ ಇರುವ ಜನರ ಸ್ವತಂತ್ರ ಚಳುವಳಿಯ ದೀರ್ಘ ಸಂಪ್ರದಾಯವಿದೆ. ಉಭಯ ದೇಶಗಳ ಪ್ರವಾಸಿಗರಿಗೆ  ವೀಸಾಗಳ ಅಗತ್ಯವಿಲ್ಲ.

ನಿನ್ನೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರಮೋದಿ, ದ್ವಿಪಕ್ಷೀಯ ಬಾಂಧವ್ಯ ವೃದ್ದಿಯಲ್ಲಿ ನೇಪಾಳ ಮತ್ತು ಭಾರತದ ಮುಕ್ತ ಗಡಿ ಪ್ರದೇಶವನ್ನು ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ

ಸಮಾಜ ವಿರೋಧಿ ಶಕ್ತಿಗಳು ಇದನ್ನು ದುರ್ಬಳಕೆ ಮಾಡಿಕೊಳ್ಳಲು ಅವಕಾಶ ನೀಡುವುದಿಲ್ಲ ಗಡಿಯಲ್ಲಿನ ಅಪರಾಧ  ನಿಯಂತ್ರಿಸಲು ರಕ್ಷಣಾ ಮತ್ತು ಭದ್ರತಾ ವ್ಯವಸ್ಥೆಯನ್ನು ಸದೃಢಗೊಳಿಸಲು ಜಂಟಿಯಾಗಿ ಪ್ರಯತ್ನಿಸಲು ಪರಸ್ಪರ ಸಮ್ಮತಿ ಸೂಚಿಸಲಾಗಿದೆ ಎಂದು ಅವರು ಹೇಳಿದ್ದರು.

1950ರ ಭಾರತ- ನೇಪಾಳ ಶಾಂತಿ ಮತ್ತು ಸೌಹಾರ್ದತೆಯ ಒಪ್ಪಂದದಂತೆ ಭಾರತ- ನೇಪಾಳ ಗಡಿ ಪ್ರದೇಶ ಮುಕ್ತವಾಗಿದೆ. ಗಡಿ ಮೂಲಕ ಉಭಯ ದೇಶಗಳ ಪ್ರವಾಸಿಗರು ಮುಕ್ತವಾಗಿ ಸಂಚರಿಸಲು ಇದು ಅವಕಾಶ  ಕಲ್ಪಿಸಿದೆ.

ಉನ್ನತ ಮಟ್ಟದ ನಿಯೋಗದ  ಭೇಟಿಗಳು ಜನರ ಸಂಪರ್ಕವನ್ನು ಬಲಪಡಿಸುತ್ತವೆ ಎಂದು ಪ್ರಧಾನಿ ನರೇಂದ್ರಮೋದಿ ಅವರೊಂದಿಗಿನ ಚರ್ಚೆ ವೇಳೆ ನೇಪಾಳ ಅಧ್ಯಕ್ಷ ಬಿದ್ಯಾ ದೇವಿ ಬಂಡಾರಿ ಹೇಳಿದ್ದಾರೆ. ನರೇಂದ್ರಮೋದಿ ಅವರ ಜನಕಪುರ ಹಾಗೂ ಮುಕ್ತಿನಾಥ್ ಭೇಟಿಯಿಂದಾಗಿ ಪ್ರವಾಸೋದ್ಯಮ  ಅಭಿವೃದ್ದಿಗೂ ಅವಕಾಶ ಲಭಿಸಿದಂತಾಗಿದೆ ಎಂದು ನೇಪಾಳದ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಗೋಖಲೆ ತಿಳಿಸಿದ್ದಾರೆ.

ಈ ವರ್ಷದ ಸೆಪ್ಟೆಂಬರ್ ಒಳಗೆ ಎಲ್ಲಾ ವಿಷಯಗಳ ಬಗ್ಗೆ ಅನೌಪಚಾರಿಕ ಚರ್ಚೆ ನಡೆಸಲು ಸಮಯ ನಿಗದಿಪಡಿಸಲು ಉಭಯ ದೇಶಗಳ ನಾಯಕರು ಸಮ್ಮತಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ನೇಪಾಳದಲ್ಲಿನ ಭಾರತ ಸಹಯೋಗದ ಯೋಜನೆಗಳ ಅನುಷ್ಠಾನದ ಬಗ್ಗೆಯೂ  ಉಭಯ ದೇಶದ ಮುಖಂಡರು ಚರ್ಚಿಸಿದ್ದಾರೆ.  ಎರಡು ತಿಂಗಳಲ್ಲಿ ಎರಡು ರಾಷ್ಟ್ರಗಳ ಮುಖಂಡರ ಭೇಟಿಯಿಂದಾಗಿ ದ್ವಿಪಕ್ಷೀಯ ಬಾಂಧವ್ಯ ವೃದ್ದಿಯಾಗಿದೆ, ಆದರೆ, ಸಾರ್ಕ್  ಬಗ್ಗೆ ಯಾವುದೇ ಚರ್ಚೆಯಾಗಿಲ್ಲ  ಎಂದು ಗೋಖಲೆ ಹೇಳಿದ್ದಾರೆ.

 ಇಸ್ಲಾಮಾಬಾದ್ ನಲ್ಲಿ 2016ರಲ್ಲಿ 19 ನೇ ಸಾರ್ಕ್ ಶೃಂಗಸಭೆ ಏರ್ಪಾಟು ಆಗಿತ್ತು. ಆದರೆ, ಜಮ್ಮು ಮತ್ತು ಕಾಶ್ಮೀರದಲ್ಲಿನ ಉರಿ ಸೇನಾ ನೆಲೆಯ ಮೇಲಿನ ದೊಡ್ಡ ಪ್ರಮಾಣದ ಉಗ್ರ ದಾಳಿ ಹಿನ್ನೆಲೆಯಲ್ಲಿ ಆ ಸಮಿತಿಯಲ್ಲಿ ಭಾರತ ಪಾಲ್ಗೊಂಡಿರಲಿಲ್ಲ.2014 ರಲ್ಲಿ ಕಠ್ಮಂಡುವಿನ ಕೊನೆಯ  ಸಾರ್ಕ್ ಶೃಂಗಸಭೆ ನಡೆದಿತ್ತು.




Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT