ಬಲೂಚಿಸ್ಥಾನದಲ್ಲಿ ಉಲ್ಭಣಗೊಂಡ ಹಿಂಸಾಚಾರ: ಪ್ರಧಾನಿ ಮೋದಿ ದೂಷಿಸಿದ ಪಾಕಿಸ್ತಾನ 
ವಿದೇಶ

ಬಲೂಚಿಸ್ಥಾನದಲ್ಲಿ ಉಲ್ಭಣಗೊಂಡ ಹಿಂಸಾಚಾರ: ಪ್ರಧಾನಿ ಮೋದಿ ದೂಷಿಸಿದ ಪಾಕಿಸ್ತಾನ

ಬಲೂಚಿಸ್ಥಾನದಲ್ಲಿ ಹಿಂಸಾಚಾರ ಉಲ್ಬಣಗೊಳ್ಳುವುದಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಕಾರಣ ಎಂದು ಪಾಕಿಸ್ತಾನ ಆರೋಪ ಮಾಡಿದೆ.

ಇಸ್ಲಾಮಾಬಾದ್: ಬಲೂಚಿಸ್ಥಾನದಲ್ಲಿ ಹಿಂಸಾಚಾರ ಉಲ್ಬಣಗೊಳ್ಳುವುದಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಕಾರಣ ಎಂದು ಪಾಕಿಸ್ತಾನ ಆರೋಪ ಮಾಡಿದೆ. 
ಅಲ್ಲಿನ ಫೆಡರಲ್ ಪ್ಯಾರಾ ಮಿಲಿಟರಿ ಪಡೆಯ ಭಾಗವಾಗಿರುವ ಫ್ರಂಟಿಯರ್ ಕಾರ್ಪ್ಸ್ ಆಫ್ ಬಲೂಚಿಸ್ಥಾನ್ ಪಾಕಿಸ್ತಾನದ ಸೆನೆಟ್ ಗೆ ಪ್ರಾಂತ್ಯದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಬಗ್ಗೆ ಮಾಹಿತಿ ನೀಡಿದೆ. ಡಾನ್ ಪತ್ರಿಕೆ ವರದಿಯ ಪ್ರಕಾರ ಬಲೂಚಿಸ್ಥಾನ ಫ್ರಂಟಿಯರ್ ಕಾರ್ಪ್ಸ್ ಮೇಜರ್ ಜನರಲ್ ನದೀಮ್ ಅಂಜುಮನ್ ನಮ್ಮ ದೇಶದ ಶತ್ರುಗಳು ಬಲೂಚಿಸ್ಥಾನ ಪ್ರಾಂತ್ಯದಲ್ಲಿನ ಹಿಂಸಾಚಾರವನ್ನು ಹೆಚ್ಚಿಸುತ್ತಿದ್ದು, ಆ ಪ್ರಾಂತ್ಯವನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಘೋಷಿಸಲು ವಿಶ್ವಸಂಸ್ಥೆ ಮಧ್ಯಪ್ರವೇಶವನ್ನು ಬಲವಾಗಿ ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ. 
ವಿದೇಶಿ ಮಾಧ್ಯಮಗಳು ಬಾಲಿವುಡ್ ಹಾಗೂ ಹಾಲಿವುಡ್ ಸಿನಿಮಾಗಳನ್ನು ಬಳಸಿಕೊಂದು ಬಲೂಚಿಸ್ಥಾನದಲ್ಲಿ ನಡೆಯುತ್ತಿರುವುದು ಭಯೋತ್ಪಾದನೆ ಎಂದು ಹೇಳುತ್ತಿದೆ.  ಲಿಬಿಯಾ ಹಾಗೂ ಯೆಮೆನ್ ಮಾದರಿಯಲ್ಲಿ ಪರಿಸ್ಥಿಯನ್ನು ಬಳಸಿಕೊಂಡು ಬಲೂಚಿಸ್ಥಾನದಲ್ಲಿ ಅಸ್ಥಿರತೆ ಉಂಟು ಮಾಡಲು ಯತ್ನಿಸಲಾಗುತ್ತಿದೆ ಎಂದು ನದೀಮ್ ಆರೋಪಿಸಿದ್ದಾರೆ. 
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿರುವ ನದೀಮ್, ಭಾರತದ ರಾ ಹಾಗೂ ಅಫ್ಘಾನಿಸ್ತಾನದ ಗುಪ್ತಚರ ಸಂಸ್ಥೆಗಳು ಬಲೂಚಿಸ್ಥಾನದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿವೆ ಎಂದು ಆರೋಪಿಸಿದ್ದಾರೆ.  ಬಲೂಚಿಸ್ಥಾನದಲ್ಲಿ ಭಾರತ ಸರ್ಕಾರದ ಹಸ್ತಕ್ಷೇಪ ಇರುವುದನ್ನು ಅಲ್ಲಿನ ಪ್ರಧಾನಿ ನರೇಂದ್ರ ಮೋದಿಯೇ ಒಪ್ಪಿಕೊಂಡಿದ್ದಾರೆ ಎಂದು ನದೀಮ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಚುನಾವಣಾ ಆಯೋಗದಲ್ಲಿ ಆಂತರಿಕ ಬಿಕ್ಕಟ್ಟು? ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಸಿಡಿದೆದ್ದ ಇಬ್ಬರು ಆಯುಕ್ತರು! ಸುಪ್ರೀಂ ಮಧ್ಯಪ್ರವೇಶಕ್ಕೆ ವಿಪಕ್ಷಗಳ ಆಗ್ರಹ

ಮೀರಾಬಾಯಿ ಚಾನುಗೆ ಬೆಳ್ಳಿ ಪದಕ: 98ರ ಬಳಿಕ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತಕ್ಕೆ ವೇಟ್‌ಲಿಫ್ಟಿಂಗ್‌ನಲ್ಲಿ ಮೊದಲ ಪದಕ!

ಕೊನೆಗೂ ಭಾರತವೇ ಬೇಕಾಯ್ತು: Iran ಸಮಸ್ಯೆಗೆ IMEEC ಒಂದೇ ಪರಿಹಾರ- Donald Trump

ಭೀಕರ ಅಪಘಾತ; ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಮೇಲೆ ಹರಿದ ಪಿಕಪ್ ಕ್ರೇನ್, Video

ಜಪಾನ್ ವಿರುದ್ಧ ಗೋಲ್ಡನ್ ಡಕ್; Unwanted Record ಸೃಷ್ಟಿಸಿದ ಅಭಿಷೇಕ್ ಶರ್ಮಾ: ಈ ದಾಖಲೆ ಮುರಿಯುವುದು ಯಾರಿಗೂ ಅಸಾಧ್ಯ!