ವಿದೇಶ

ಪಾಕ್ ಅಮೆರಿಕದಿಂದ ಸಹಾಯ ಪಡೆಯುತ್ತೆ, ಆದರೆ ನಮಗಾಗಿ ಏನನ್ನೂ ಮಾಡುವುದಿಲ್ಲ: ಟ್ರಂಪ್ ಅಸಮಾಧಾನ

Srinivas Rao BV
ಪಾಕಿಸ್ತಾನಕ್ಕೆ ಆರ್ಥಿಕ ಸಹಕಾರ ನೀಡುವ ವಿಚಾರದಲ್ಲಿ ಕಠಿಣ ನಿಲುವು ತೆಗೆದುಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಪಾಕಿಸ್ತಾನದ ವಿರುದ್ಧ ಗುಡುಗಿದ್ದಾರೆ. 
ಪಾಕಿಸ್ತಾನಕ್ಕೆ ಅಮೆರಿಕ ಬಿಲಿಯನ್ ಗಟ್ಟಲೆ ಆರ್ಥಿಕ ಸಹಕಾರ ನೀಡಿತ್ತು. ಆದರೆ ಪಾಕಿಸ್ತಾನ ಮಾತ್ರ ಒಸಾಮ ಬಿನ್ ಲಾಡೆನ್ ತನ್ನ ಆಶ್ರಯದಲ್ಲಿದ್ದಾನೆಂದು ಎಂದಿಗೂ ಸುಳಿವನ್ನು ನೀಡಲಿಲ್ಲ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಸೇನಾ ಸಹಕಾರಕ್ಕಾಗಿ ಪಾಕಿಸ್ತಾನಕ್ಕೆ ನೀಡಲಾಗುತ್ತಿದ್ದ ಮಿಲಿಯನ್ ಗಟ್ಟಲೆ ಆರ್ಥಿಕ ನೆರವನ್ನು ನಿಲ್ಲಿಸುವುದಕ್ಕೆ ಡೊನಾಲ್ಡ್ ಟ್ರಂಪ್ ಆಡಳಿತ ನಿರ್ಣಯ ತೆಗೆದುಕೊಂಡಿದ್ದು, ತಮ್ಮ ಆಡಳಿತದ ನಿರ್ಧಾರವನ್ನು ಟ್ರಂಪ್ ಸಮರ್ಥನೆ ಮಾಡಿಕೊಂಡಿದ್ದಾರೆ. 
ಅಮೆರಿಕಾದಿಂದ ಸಿಗುತ್ತಿದ್ದ ಆರ್ಥಿಕ ನೆರವಿನಿಂದ ಪಾಕಿಸ್ತಾನ ಎಂದಿಗೂ ಭಯೋತ್ಪಾದನೆ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಿಲ್ಲ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅಮೆರಿಕ ಪಾಕಿಸ್ತಾನಕ್ಕೆ ನೀಡುತ್ತಿದ್ದ ಆರ್ಥಿಕ ನೆರವಿಗೆ ಕತ್ತರಿ ಹಾಕಿದೆ. ಈ ಬೆನ್ನಲ್ಲೇ ಟ್ವೀಟ್ ಮಾಡಿರುವ ಟ್ರಂಪ್, ಅಮೆರಿಕದಿಂದ ಬಿಲಿಯನ್ ಡಾಲರ್ ಗಟ್ಟಲೆ ಹಣ ಪಡೆಯುವ ಪಾಕಿಸ್ತಾನಿಯರು ನಮಗಾಗಿ ಏನನ್ನೂ ಮಾಡುವುದಿಲ್ಲ. ಬಿನ್ ಲಾಡೆನ್ ಹಾಗೂ ಅಫ್ಘಾನಿಸ್ತಾನದ ವಿಷಯದಲ್ಲಿ ಇದು ಸಾಬೀತಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. 
SCROLL FOR NEXT