ಪಾಕ್ ವಿರುದ್ಧ ಮುನಿಸು: ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದ್ದು ಎಂದ ಚೀನಾ! 
ವಿದೇಶ

ಪಾಕ್ ವಿರುದ್ಧ ಮುನಿಸು: ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದ್ದು ಎಂದ ಚೀನಾ!

ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಭಾರತದ ಭಾಗ ಎಂದು ತೋರಿಸುವ ನಕಾಶೆಯೊಂದನ್ನು ಚೀನಾ ಸರ್ಕಾರಿ ಮಾದ್ಯಮವೊಂದು ಪ್ರಸಾರ ಮಾಡಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.

ಬೀಜಿಂಗ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಭಾರತದ ಭಾಗ ಎಂದು ತೋರಿಸುವ ನಕಾಶೆಯೊಂದನ್ನು ಚೀನಾ ಸರ್ಕಾರಿ ಮಾದ್ಯಮವೊಂದು ಪ್ರಸಾರ ಮಾಡಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.
ಇತ್ತೀಚೆಗೆ ಪಾಕಿಸ್ತಾನದ ಕರಾಚಿಯಕ್ಕುಇನ ಚೀನಾ ರಾಯಭಾರ ಕಛೇರಿ ಮೇಲೆ ಭಯೋತ್ಪಾದಕ ದಾಳಿ ನಡೆಇದ್ದು ಆ ಸಂಬಂಧ ವರದಿ ಪ್ರಸಾರ ಮಾಡುವ ಸಮಯದಲ್ಲಿ ಚೀನಾ ಸರ್ಕಾರಿ ಸ್ವಾಮ್ಯದ ಸಿಜಿಟಿಎನ್‌ ಸುದ್ದಿವಾಹಿನಿ ಪಿಓಕೆಯನ್ನು ಭಾರತದ ಭಾಗ ಎಂದು ತೋರಿಸುವ ನಕ್ಷೆ ಯನ್ನು ಪ್ರಸಾರ ಮಾಡಿದೆ.
ಜಮ್ಮು ಕಾಶ್ಮೀರ ನಖ್ಷೆಯೊಡನೆ ಪಾಕ್ ಆಕ್ರಮಿತ ಕಾಶ್ಮೀರವನ್ನೂ ತೋರಿಸಿ ಇದು ಭಾರತ ಆಡಳಿತ ಪ್ರದೇಶ ಎಂದು ಸುದ್ದಿ ವಾಹಿನಿ ಹೇಳಿದೆ.
ಚೀನಾ ರಾಯಭಾರಿ ಕಛೇರಿ ಮೇಲಿನ ದಾಳಿಯ ವೇಳೆ ತನ್ನ ನಾಗರಿಕರ ರಕ್ಷಣೆಗೆ ಪಾಕಿಸ್ತಾನ ವಿಫಲವಾಗಿದ್ದು ಈ ಸಂಬಂಧ ಚೀನಾ ಪಾಕ್ ವಿರುದ್ಧ ಮುನಿಸಿಕೊಂಡಿದೆ ಎನ್ನಲಾಗುತ್ತಿದೆ.
ಡಿಸೆಂಬರ್ ೧೦ಕ್ಕೆ ಭಾರತ-ಚೀನಾ ಸೇನಾ ಸಮರಾಭ್ಯಾಸವಿದೆ, ಅಲ್ಲದೆ ಕರ್ತಾರ್ ಪುರ್ ಕಾರಿಡಾರ್ ಸಂಬಂಧ ಸಹ ಚರ್ಚೆ ನಡೆಯುತ್ತಿದೆ. ಈ ವೇಳೆ ಚೀನಾ ಪಿಓಕೆಯನ್ನು ಭಾರತದ ಭಾಗವೆಂದು ತೋರಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ.
ಇನ್ನು ಸಿಜಿಟಿಎನ್ ನಲ್ಲಿ ಇದಾಗಲೇ ಸಿದ್ದವಾಗಿರುವ ನಕಾಶೆಗಳಿರುತ್ತದೆ. ಅದನ್ನು ಬದಲಿಸಲು ವಾಹಿನಿ ಸಿಬ್ಬಂದಿಗಳಿಗೆ ಸಾಧ್ಯವಿಲ್ಲ ಎನ್ನಲಾಗಿದೆ.ಉನ್ನತಾಧಿಕಾರಿಗಳ ಸೂಚನೆ ಇಲ್ಲದೆ ಪ್ರೊಡಕ್ಷನ್ ಸಿಬ್ಬಂದಿಗಳು ಈ ಸಂಬಂಧ ನಿರ್ಧಾರ ಕೈಗೊಳ್ಳುವಂತಿಲ್ಲ ಎಂದು ಮೂಲಗಳು ಹೇಳಿದೆ.
ಇನ್ನೂ ವಿಶೇಷವೆಂದರೆ ಚೀನಾ ತನ್ನ ರಾಷ್ಟ್ರೀಯ, ಅಂತರಾಷ್ಟ್ರೀಯ ನೀತಿ ಬದಲಾಯಿಸುವ ಮುನ್ನ ದೇಶದ ಅಧಿಕೃತ ಮಾದ್ಯಮಗಳಲ್ಲಿ ಇದನ್ನು ಪ್ರಾಯೋಗಿಕವಾಗಿ ಬಳಸುತ್ತಾರೆ.ಆದರೆ ಈಗ ಮಾಡಿದ ಬದಆವಣೆ ಅದೇನೂ ಅಧಿಕೃತ ಎನ್ನಲಾಗುವುದಿಲ್ಲ  ಆದರೆ ಚೀನಾ ಈ ಹಿಂದೆ ಎಂದೂ ಈ ರೀತಿಯಾಗಿ ಪಿಓಕೆಯನ್ನು ಭಾರತದ್ದೆಂದು ತೋರಿಸುವ ನಕ್ಷೆ ಪ್ರಸಾರ ಮಾಡಿರಲಿಲ್ಲ ಎಂಬ ಅಂಶ ಗಮನಾರ್ಹ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

IPL 2026: MI vs RCB; ವಾಂಖೆಡೆ ಕ್ರೀಡಾಂಗಣದಲ್ಲಿ ಇತಿಹಾಸ ಬರೆದ ಬೆಂಗಳೂರು, ಅತ್ಯಧಿಕ ಮೊತ್ತ!

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

SCROLL FOR NEXT