ದುರಂತದ ನಂತರದ ಚಿತ್ರ 
ವಿದೇಶ

ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪನ- ಸುನಾಮಿ: ಮೃತರ ಸಂಖ್ಯೆ 1,234ಕ್ಕೆ ಏರಿಕೆ!

ಭೂಕಂಪನ ಹಾಗೂ ಸುನಾಮಿ ಅಪ್ಪಳಿಸಿರುವ ಇಂಡೋನೇಷ್ಯಾದ ಸುಲಾವೆಸಿ ದ್ವೀಪದಲ್ಲಿ ಮೃತಪಟ್ಟವರ ಸಂಖ್ಯೆ 1 ಸಾವಿರದ 234ಕ್ಕೆ ಏರಿಕೆ ಆಗಿದೆ.

ಜಕಾರ್ತ :  ಭೂಕಂಪನ ಹಾಗೂ ಸುನಾಮಿ  ಅಪ್ಪಳಿಸಿರುವ ಇಂಡೋನೇಷ್ಯಾದ ಸುಲಾವೆಸಿ  ದ್ವೀಪದಲ್ಲಿ ಮೃತಪಟ್ಟವರ ಸಂಖ್ಯೆ 1 ಸಾವಿರದ 234ಕ್ಕೆ ಏರಿಕೆ ಆಗಿದೆ.

ಸುನಾಮಿಯಿಂದ ಉಂಟಾಗಿರುವ ಹಾನಿ ಸಂಬಂಧ ಇಂಡೋನೇಷ್ಯಾ ರಾಷ್ಟ್ರೀಯ ವಿಪತ್ತು ನಿರ್ವಹಣಾ ಏಜೆನ್ಸಿ ಹೊಸದಾದ ಅಂಕಿ ಅಂಶವನ್ನು ಬಿಡುಗಡೆ ಮಾಡಿದೆ ಎಂದು ಅಲ್ ಜಜೀರಾ  ವರದಿ ಮಾಡಿದೆ. ಎರಡು ದಿನಗಳ ಹಿಂದಷ್ಟೇ ಸುನಾಮಿಯಿಂದ  832 ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು.

500 ಮಂದಿ ಗಾಯಗೊಂಡಿದ್ದು, 16. 372 ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು  ಏಜೆನ್ಸಿ ತಿಳಿಸಿದೆ.

ಇಂಡೋನೇಷ್ಯಾದ ದ್ವೀಪ ಪ್ರದೇಶವಾಗಿರುವ ಸುಲಾವಾಸಿಯಲ್ಲಿ ಎರಡು ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.7 ಹಾಗೂ 6.1 ರಷ್ಚು ದಾಖಲಾಗಿದೆ. ಶುಕ್ರವಾರ  ಸುನಾಮಿಯಿಂದಾಗಿ ಅಪಾರ  ಪ್ರಮಾಣದ ಜೀವ ಹಾಗೂ ಆಸ್ತಿಪಾಸ್ತಿ ನಷ್ಟ ಉಂಟಾಗಿತ್ತು.

ಸಾಧ್ಯವಾದಷ್ಟು ಎಲ್ಲ ರೀತಿಯ ನೆರವು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಇಂಡೋನೇಷ್ಯಾ  ಅಧ್ಯಕ್ಷ ಜೊಕೊ ವಿಡೊಡೊ ಅವರಿಗೆ ಭರವಸೆ ನೀಡಿದ್ದಾರೆ. ಈ ಮಧ್ಯೆ  ಭಾರತೀಯ ನೌಕ ಮತ್ತು ವಾಯುಪಡೆಯಿಂದ ಮೂರು ಹಡಗುಗಳು ಮತ್ತು ಎರಡು ವಿಮಾನಗಳಲ್ಲಿ ಪರಿಹಾರ ಸಲಕರಣೆಗಳನ್ನು ರವಾನಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್