ಆಂಗ್ ಸಾನ್ ಸೂಕಿ 
ವಿದೇಶ

ರೊಹಿಂಗ್ಯಾ ಹತ್ಯಾಕಾಂಡ: ಮ್ಯಾನ್ಮಾರ್ ನಾಯಕಿ ಸೂಕಿ ಗೌರವ ಪೌರತ್ವ ಹಿಂಪಡೆದ ಕೆನಡಾ ಸರ್ಕಾರ

ನೊಬೆಲ್ ಪ್ರಶಸ್ತಿ ವಿಜೇತೆ, ಮ್ಯಾನ್ಮಾರ್ ಸ್ವಾತಂತ್ರ ಹೋರಾಟಗಾರ್ತಿ ಅಂಗ್ ಸಾನ್ ಸೂಕಿ ಅವರಿಗೆ ತಾನು ಹಿಂದೊಮ್ಮೆ ನೀಡಿದ್ದ ಗೌರವ ಪೌರತ್ವವನ್ನು ಕೆನಡಾ ಸಂಸತ್ತು ಔಪಚಾರಿಕವಾಗಿ ಹಿಂಪಡೆದಿದೆ.

ಟೊರೆಂಟೋ(ಕೆನಡಾ): ನೊಬೆಲ್ ಪ್ರಶಸ್ತಿ ವಿಜೇತೆ, ಮ್ಯಾನ್ಮಾರ್ ಸ್ವಾತಂತ್ರ ಹೋರಾಟಗಾರ್ತಿ ಅಂಗ್ ಸಾನ್ ಸೂಕಿ ಅವರಿಗೆ ತಾನು ಹಿಂದೊಮ್ಮೆ ನೀಡಿದ್ದ ಗೌರವ ಪೌರತ್ವವನ್ನು ಕೆನಡಾ ಸಂಸತ್ತು ಔಪಚಾರಿಕವಾಗಿ ಹಿಂಪಡೆದಿದೆ.
ಮ್ಯಾನ್ಮಾರ್ ನಾಯಕಿ ಸೂಕಿ ಅವರಿಗೆ 2007 ರಲ್ಲಿ ಕೆನಡಾ ಸರ್ಕಾರ ತನ್ನ ಗೌರವ ಪೌರತ್ವ ನೀಡಿದ್ದಿತು.
ಮ್ಯಾನ್ಮಾರ್ ನಲ್ಲಿ ಇತ್ತೀಚೆಗೆ ರೊಹಿಂಗ್ಯಾ ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಸೂಕಿ ಯಾವ ಬಗೆಯ ಕ್ರಮ ಕೈಗೊಳ್ಳುತ್ತಿಲ್ಲ, ಈ ಕಾರಣಕ್ಕೆ ಅವರ ಗೌರವ ಪೌರತ್ವವನ್ನು ಹಿಂಪಡೆಯಲಾಗುತ್ತಿದೆ ಎಂದು ಕೆನಡಾ ಹೇಳಿಕೆಯಲ್ಲಿ ತಿಳಿಸಿದೆ.
ಮ್ಯಾನ್ಮಾರ್ ಮಿಲಿಟರಿ ಸಾವಿರಾರು ರೊಹಿಂಗ್ಯಾ ಮುಸ್ಲಿಮರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಲ್ಲದೆ ಅವರ ಗುಡಿಸಲುಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿತ್ತು. ಹಳ್ಳಿ ಹಳ್ಳಿಗಳನ್ನೇ ಸರ್ವನಾಶ ಮಾಡಿತ್ತು ಎಂದು ಕಳೆದ ತಿಂಗಳು ವಿಶ್ವಸಂಸ್ಥೆಯ ಸತ್ಯ-ಶೋಧನಾ ಕಾರ್ಯಾಚರಣೆಯು ವರದಿಯಲ್ಲಿ ವಿವರಿಸಲಾಗಿತ್ತು.
ಇದು ಮಾನವೀಯತೆಗೆ ಎಸಗಿದ ಮಹಾ ದ್ರೋಹ, ಇದು ನಿಜವಾಗಿಯೂ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ, ಇದನ್ನು ನಾವು ಗುರುತಿಸಬೇಕು ಎಂದು ಸೂಕಿ ಅವರ ಪೌರತ್ವವನ್ನು ಹಿಂತೆಗೆದುಕೊಳ್ಳಲು ಚಳವಳಿ ರೂಪಿಸಿದ್ದ ಸೇನ್ ರತ್ನ ಒಮಿದ್ವರ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

SCROLL FOR NEXT