ವಿದೇಶ

ಕಾಣೆಯಾದ ಇಂಟರ್ ಪೋಲ್ ಮುಖ್ಯಸ್ಥ ಪೊಲೀಸರ ವಶದಲ್ಲಿ!

Manjula VN
ಬೀಜಿಂಗ್; ಸೆಪ್ಟೆಂಬರ್ 29ರಿಂದ ನಾಪತ್ತೆಯಾಗಿರುವ ಜಾಗಿತ ತನಿಖಾ ಸಂಸ್ಥೆ 'ಇಂಟರ್ ಪೋಲ್' ಮುಖ್ಯಸ್ಥ ಮೆಂಗ್ ಹಾಂಗ್ ವೈ ಅವರನ್ನು ಚೀನಾದಲ್ಲಿ ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಮೆಂಗ್ ಹಾಂಗ್ ವೈ ಅವರು, ಚೀನಾ ಮೂಲದವರಾಗಿದ್ದು, ಈಗ ಫ್ರಾನ್ಸ್ ನಲ್ಲಿ ಕೇಂದ್ರ ಕಚೇರಿ ಹೊಂದಿದ ಇಂಟರ್ ಪೋಲ್ ಮುಖ್ಯಸ್ಥರಾಗಿದ್ದಾರೆ. 
ಸೆ.29 ರಂದು ಸ್ವದೇಶ ಚೀನಾಕ್ಕೆ ಹೋದವರು ಈವರೆಗೂ ಅವರು ಪುನಃ ಫ್ರಾನ್ಸ್'ಗೆ ಮರಳಿರಲಿಲ್ಲ. ಈ ಹಿನ್ನಲೆ ಅವರ ಪತ್ತೆಗಾಗಿ ಫ್ರಾನ್ಸ್ ಪೊಲೀಸರು ಹುಡುಕಾಟ ಆರಂಭಿಸಿದ್ದರು. ಈ ನಡುವೆ, ಹಾಂಕಾಂಗ್'ನ 'ಸೌತ್ ಚೀನಾ ಮಾರ್ನಿಂಗ್ ಪೋಸ್ಟ್' ವರದಿ ಪ್ರಕಟಿಸಿದ್ದು, 'ಹಳೆಯ ಪ್ರಕರಣವೊಂದರ ತನಿಖೆ ಸಂಬಂಧ ಮೆಂಗ್ ಅವರನ್ನು ವಶಕ್ಕೆ ತೆಗೆದುಕೊಂಡಿದ್ದ ಚೀನಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅವರು ಚೀನಾಗೆ ಬಂದಿಳಿಯುತ್ತಿದ್ದಂತೆಯೇ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದೆ. ಆದರೆ, ಅವರು ಎಲ್ಲಿದ್ದಾರೆಂಬ ಬಗ್ಗೆ ತಿಳಿದುಬಂದಿಲ್ಲ.
ಈ ವರದಿಗಳ ಬೆನ್ನಲ್ಲೇ, ತನ್ನ ಮುಖ್ಯಸ್ಥರ ಬಗ್ಗೆ ಇಂಟರ್ ಪೋಲ್, ಚೀನಾ ಸಂರ್ಕಾರದಿಂದ ಮಾಹಿತಿ ಬಯಸಿದೆ. 
SCROLL FOR NEXT