ಪಾಕಿಸ್ತಾನವನ್ನು 'ಯುರೋಪ್ ಗಿಂತ ಸ್ವಚ್ಚ ರಾಷ್ಟ್ರ'ವನ್ನಾಗಿಸುತ್ತೇನೆ:ಇಮ್ರಾನ್ ಖಾನ್ ಪ್ರತಿಜ್ಞೆ 
ವಿದೇಶ

ಪಾಕಿಸ್ತಾನವನ್ನು 'ಯುರೋಪ್ ಗಿಂತ ಸ್ವಚ್ಚ ರಾಷ್ಟ್ರ'ವನ್ನಾಗಿಸುತ್ತೇನೆ: ಇಮ್ರಾನ್ ಖಾನ್ ಪ್ರತಿಜ್ಞೆ

ಪಾಕಿಸ್ತಾನವನ್ನು "ಯುರೋಪ್ ಗಿಂತಲೂ ಸ್ವಚ್ಚ" ರಾಷ್ಟ್ರವನ್ನಾಗಿ ಮಾಡುತ್ತೇನೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪ್ಪ್ರತಿಜ್ಞೆ ಮಾಡಿದ್ದಾರೆ. ದೇಶದಲ್ಲಿನ ನೈರ್ಮಲ್ಯ.....

ಇಸ್ಲಾಮಾಬಾದ್: ಪಾಕಿಸ್ತಾನವನ್ನು "ಯುರೋಪ್ ಗಿಂತಲೂ ಸ್ವಚ್ಚ" ರಾಷ್ಟ್ರವನ್ನಾಗಿ ಮಾಡುತ್ತೇನೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪ್ಪ್ರತಿಜ್ಞೆ ಮಾಡಿದ್ದಾರೆ. ದೇಶದಲ್ಲಿನ ನೈರ್ಮಲ್ಯ ಗುಣಮಟ್ಟವನ್ನು ಸುಧಾರಿಸುವ ಆಂದೋಲನಕ್ಕೆ ಅಚಾಲನೆ ನಿಡಿದ ಇಮ್ರಾನ್ ಖಾನ್ ಈ ಹೇಳಿಕೆ ನಿಡಿದ್ದಾರೆ.
ಇಸ್ಲಾಮಾಬಾದ್ನಲ್ಲಿರುವ ಮಾಡೆಲ್ ಕಾಲೇಜ್ ಫಾರ್ ಗರ್ಲ್ಸ್ ನಲ್ಲಿ 'ಕ್ಲೀನ್ ಆಂಡ್ ಗ್ರೀನ್ ಪಾಕಿಸ್ತಾನ್’ ಡ್ರೈವ್ ನಲ್ಲಿ ಅವರು ಭಾಗವಹಿಸಿದ್ದಾರೆ ರೇಡಿಯೋ ಪಾಕಿಸ್ತಾನ ವರದಿ ಮಾಡಿದೆ.
ದೇಶದ ಭವಿಷ್ಯದೊಂದಿಗೆ ಸಂಪರ್ಕ ಹೊಂದಿರುವ ಇಂತಹಾ ಅಭಿಯಾನದಲ್ಲಿ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಯುವಜನರು ಭಾಗವಹಿಸಬೇಕು ಎಂದು ಖಾನ್ ಒತ್ತಾಯಿಸಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಪಾಕಿಸ್ತಾನವನ್ನು ಯುರೋಪ್ ಗಿಂತ ಸ್ವಚ್ಚ ರಾಷ್ಟ್ರವಾಗಿ ಮಾಡುವ ಪಣದೊಟ್ಟಿದ್ದಾರೆ. 
"ಇದು ಸಂಭವಿಸಬೇಕಾದರೆ ನಾವು ನಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳುವ ಅಗತ್ಯವಿದೆ. "ಪರಿಸರವನ್ನು ರಕ್ಷಿಸಲು ಮತ್ತು ಜಾಗತಿಕ ತಾಪಮಾನವನ್ನು ತಗ್ಗಿಸಲು ತೋಟಗಾರಿಕೆಯು ಅತ್ಯಗತ್ಯವಾಗಿದೆ." ಇಮ್ರಾನ್ ಖಾನ್ ಹೇಳಿದ್ದಾರೆ.
ಜಾಗತಿಕ ತಾಪಮಾನ ಏರಿಕೆ ವಿಚಾರದಲ್ಲಿ ಪಾಕಿಸ್ತಾನ ಏಳನೇ ದುರ್ಬಲ ರಾಷ್ಟ್ರವಾಗಿ ಗುರುತಿಸಲ್ಪಟ್ಟಿದೆ, ಲಾಹೋರ್ ನಂತಹಾ ಮಹಾನಗರಗಳಲ್ಲಿ ಮಾಲಿನ್ಯ ಮಟ್ಟವು ಅತ್ಯಂತ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ.
ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ನಮ್ಮ ಸರ್ಕಾರ ಒಂದು ಶತಕೋಟಿ ಮರಗಳನ್ನು ನೆಟ್ಟಿದೆ ಎಂದು ಅವರು ಹೇಳಿದ್ದು ಸರ್ಕಾರವು ದೇಶಾದ್ಯಂತ 10 ಬಿಲಿಯನ್ ಮರಗಳನ್ನು ನೆಡುವ ಗುರಿಯನ್ನು ಹೊಂದಿದೆ ಎಂದರು.
ಸ್ವಚ್ಛತೆ ಅಭಿಯಾನದ ಅಂಗಆಗಿ  ಒಳಚರಂಡಿ ಮತ್ತು ನೈರ್ಮಲ್ಯ ವ್ಯವಸ್ಥೆಗಳ ಸುಧಾರಣೆ ಕೇವಲ ನಗರಗಳಿಗಷ್ಟೇ ಸೀಮಿತವಾಗಿಲ್ಲ. ಅವು ಕೊಳೆಗೇರಿಗಳು ಮತ್ತು ಹಳ್ಳಿಗಳಲ್ಲಿ ಸಹ ಸುಧಾರಣೆಗೊಳ್ಳಬೇಕಿದೆ.ಘನ ತ್ಯಾಜ್ಯ ವಿಲೇವಾರಿಗಾಗಿ ಹಳ್ಳಿಗಳಿಂದ ತಹಶೀಲ್ ಮಟ್ಟದವರೆಗೆ ಡಂಪಿಂಗ್  ಯಾರ್ಡ್ ಗಳನ್ನು ಗುರುತಿಸಲಾಗುತ್ತದೆ ಎಂದು ಖಾನ್ ಹೇಳಿದ್ದಾರೆ. ಪಾಕಿಸ್ತಾನವನ್ನು ಶುದ್ಧ ಹಾಗೂ ಹಸಿರನ್ನಾಗಿಸಲು ವಿದ್ಯಾರ್ಥಿಗಳುಪ್ರಯತ್ನಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

42 ಎಸೆತ, 102 ರನ್: ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆಯೇ ಉಡೀಸ್‌ ಮಾಡಿದ ಶ್ರೇಯಸ್ ಅಯ್ಯರ್‌!

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ