ವಿದೇಶ

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು :ಪ್ರಾಂತೀಯ ಮಂಡಳಿ ಚುನಾವಣೆಗೆ ರಾಜಪಕ್ಸ ಕರೆ !

Nagaraja AB

ಕೊಲಂಬೊ:  ಶ್ರೀಲಂಕಾದಲ್ಲಿ ರಾಜಕೀಯ ಬಿಕ್ಕಟ್ಟು ತೀವ್ರ ಸ್ವರೂಪ ಪಡೆದುಕೊಂಡಿರುವಂತೆಯೇ ನೂತನವಾಗಿ ನೇಮಕವಾಗಿರುವ ಪ್ರಧಾನಮಂತ್ರಿ ಮಹಿಂದಾ ರಾಜಪಕ್ಸ ಪ್ರಾಂತೀಯ ಮಂಡಳಿ ಹಾಗೂ ಸಂಸತ್ ಚುನಾವಣೆಗೆ ಕರೆ ನೀಡಿದ್ದಾರೆ.

ಚುನಾವಣೆ ಜನತೆಗೆ ಮತ ಚಲಾಯಿಸಲು ಅವಕಾಶ ನೀಡುವುದರಿಂದ  ಪ್ರಸ್ತುತು ಎದುರಿಸುತ್ತಿರುವ ಆರ್ಥಿಕ, ರಾಜಕೀಯ ಹಾಗ ಸಾಮಾಜಿಕ ಸಮಸ್ಯೆಗಳು ಬಗೆಹರಿಯಲಿವೆ  ಎಂದು ಅವರು ಹೇಳಿದ್ದಾರೆ.

ದ್ವೇಷದ ರಾಜಕೀಯ ಬಿಟ್ಟುಬಿಡುವುದಾಗಿ ಜನತೆಗೆ ಭರವಸೆ ನೀಡಿರುವ ರಾಜಪಕ್ಸ, ಹಂಗಾಮಿ ಸರ್ಕಾರ ಸ್ಥಾಪನೆಯಿಂದ ದೇಶದಲ್ಲಿನ ಎಲ್ಲ ಜನರ ಮಾನವ ಹಕ್ಕುಗಳು ಸಂರಕ್ಷಿಸಲ್ಪಡುತ್ತವೆ. ಕಾನೂನು ಸುವ್ಯವಸ್ಥೆ ಉತ್ತಮವಾಗಿರುತ್ತದೆ. ಎಲ್ಲ ಧರ್ಮದವರು ಮತ ಚಲಾಯಿಸುವುದು ಅಗತ್ಯವಾಗಿದೆ ಎಂದು ಅವರು ಒತ್ತಾಯಿಸಿದ್ದಾರೆ.

ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಹಾಗೂ ಮಾಜಿ ರಕ್ಷಣಾ ಕಾರ್ಯದರ್ಶಿ ಕೊಲೆ ಸಂಚು ಆರೋಪ ಸಂಬಂಧ ಪ್ರತಿಕ್ರಿಯಿಸಿದ ರಾಜಪಕ್ಸ, ಈ ಪಿತ್ತೂರಿ ನಡೆಸಿದವರ ವಿರುದ್ಧ  ಕ್ರಮ ಕೈಗೊಳ್ಳಲಾಗುವುದು ಎಂದರು.

ಹಿಂದಿನ ಸರ್ಕಾರ ಪತನಗೊಂಡ ಕಾರಣ ನೂತನ ಸರ್ಕಾರ ರಚನೆ ನಿಟ್ಟಿನಲ್ಲಿ ತಮ್ಮನ್ನು ಪ್ರಧಾನಮಂತ್ರಿ ಸ್ಥಾನಕ್ಕೆ ನೇಮಕ ಮಾಡಲಾಗಿದೆ ಎಂದು ತಿಳಿಸಿದ ರಾಜಪಕ್ಸ, ದುಬಾರಿ ಜೀವನ ವೆಚ್ಚ ನಿರ್ವಹಣೆಯಿಂದ ಜನರು ಹತಾಶರಾಗಿದ್ದಾರೆ. ಬಡ್ಡಿದರ ಹೆಚ್ಚಳದಿಂದ ಸಾಮಾನ್ಯ ಜನರು ಹಾಗೂ ವ್ಯಾಪಾರಸ್ಥರ ಮೇಲೆ ತೀವ್ರ ಪರಿಣಾಮ ಉಂಟಾಗಿದೆ ಎಂದು ಅವರು ಹೇಳಿದರು.

ಈ ಮಧ್ಯೆ  ರಾಜಕೀಯ ಬಿಕ್ಕಟ್ಟು ಸಮಸ್ಯೆ ಎದುರಿಸುತ್ತಿರುವ ಶ್ರೀಲಂಕಾ ಜನತೆಯ ಅಭಿವೃದ್ದಿಗೆ ನೆರವು ಮುಂದುವರೆಸುವುದಾಗಿ ಭಾರತದ ವಿದೇಶಾಂಗ್ಯ ವ್ಯವಹಾರಗಳ ಸಚಿವಾಲಯ ಭರವಸೆ ನೀಡಿದೆ.

SCROLL FOR NEXT