ವಿದೇಶ

ಚೀನಾ ಆಮದಿನ ಮೇಲೆ ಹೆಚ್ಚುವರು 200 ಬಿಲಿಯನ್ ಡಾಲರ್ ತೆರಿಗೆ ವಿಧಿಸಲಿರುವ ಟ್ರಂಪ್!

Srinivas Rao BV
ವಿಶ್ವದ ಎರಡು ದೈತ್ಯ ಆರ್ಥಿಕತೆಗಳ ನಡುವೆ ನಡೆಯುತ್ತಿರುವ ಟ್ರೇಡ್ ವಾರ್ ಮತ್ತೊಂದು ಹಂತ ತಲುಪುವ ಸಾಧ್ಯತೆಗಳಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ಆಮದಿನ ಮೇಲೆ 200 ಬಿಲಿಯನ್ ಡಾಲರ್ ಹೆಚ್ಚುವರಿ ತೆರಿಗೆ ವಿಧಿಸುವ ಸಿದ್ಧತೆ ನಡೆಸಿದ್ದಾರೆ. 
ಹ್ಯಾಂಡ್ ಬ್ಯಾಗ್ ನಿಂದ ಹಿಡಿದು ದ್ವಿಚಕ್ರ ವಾಹನಗಳ ಟೈರ್ ವರೆಗೆ ಚೀನಾದಿಂದಲೇ ಆಮದು ಮಾಡಿಕೊಳ್ಳುತ್ತಿದ್ದ ಅಮೆರಿಕ ಸಂಸ್ಥೆಗಳ ಮೇಲೆ ಅಮೆರಿಕ ಅಧ್ಯಕ್ಷರ ಈ ನಿರ್ಧಾರ ಪರಿಣಾಮ ಬೀರಲಿದೆ. ಸೆ.06 ರಂದು ಪಬ್ಲಿಕ್ ಕಮೆಂಟ್ ಅವಧಿ ಪೂರ್ಣಗೊಳ್ಳಲಿದ್ದು, ಆಮದಿನ ಮೇಲೆ ತೆರಿಗೆ ವಿಧಿಸುವ ಸಂಬಂಧ ಟ್ರಂಪ್ ಆಡಳಿತ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ, 
ಒಂದು ವೇಳೆ ಅಮೆರಿಕ ತನ್ನ ಸರಕುಗಳ ಆಮದಿನ ಮೇಲೆ ತೆರಿಗೆ ಹೆಚ್ಚಿಸಿದರೆ ಅಮೆರಿಕದ 60 ಬಿಲಿಯನ್ ಡಾಲರ್ ನಷ್ಟು ಮೌಲ್ಯದ ಸರಕುಗಳ ಮೇಲೆ  ಸುಂಕ ವಿಧಿಸುವುದಾಗಿ ಹೇಳಿದೆ. " ಅಮೆರಿಕ ತನ್ನಲ್ಲಿನ ಬಹುತೇಕ ಉದ್ಯಮಗಳ ವಿರೋಧವನ್ನು ಲೆಕ್ಕಿಸದೇ ಹೊಸ ತೆರಿಗೆ ಕ್ರಮಗಳನ್ನು ಕೈಗೊಂಡರೆ ಚೀನಾ ಸಹ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಚೀನಾದ ವಾಣಿಜ್ಯ ಸಚಿವಾಲಯದ ವಕ್ತಾರರು ಎಚ್ಚರಿಸಿದ್ದಾರೆ. 
SCROLL FOR NEXT