ಚಾಬಹರ್ ಬಂದರು 
ವಿದೇಶ

ಪಾಕ್, ಚೀನಾಗೆ ಭಾರಿ ಹಿನ್ನಡೆ: ತಿಂಗಳಲ್ಲೇ ಇರಾನ್ ಚಾಬಹರ್ ಬಂದರು ನಿಯಂತ್ರಣ ಭಾರತಕ್ಕೆ!

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಮತ್ತು ಚೀನಾ ದೇಶಗಳಿಗೆ ಭಾರಿ ಹಿನ್ನಡೆಯಾಗಿದ್ದು, ಪಾಕ್, ಚೀನಾ ವಿರೋಧದ ನಡುವೆಯೇ ಇರಾನ್ ತನ್ನ ಚಾಬಹರ್ ಬಂದರು ನಿಯಂತ್ರಣವನ್ನು ಭಾರತಕ್ಕೆ ಹಸ್ತಾಂತರ ಮಾಡಲಿದೆ.

ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಮತ್ತು ಚೀನಾ ದೇಶಗಳಿಗೆ ಭಾರಿ ಹಿನ್ನಡೆಯಾಗಿದ್ದು, ಪಾಕ್, ಚೀನಾ ವಿರೋಧದ ನಡುವೆಯೇ ಇರಾನ್ ತನ್ನ ಚಾಬಹರ್ ಬಂದರು ನಿಯಂತ್ರಣವನ್ನು ಭಾರತಕ್ಕೆ ಹಸ್ತಾಂತರ ಮಾಡಲಿದೆ.
ಈ ಹಿಂದೆ ಭಾರತ ಮತ್ತು ಇರಾನ್ ಮಾಡಿಕೊಂಡಿದ್ದ ಚಾಬಹರ್ ಒಪ್ಪಂದದ ಅನ್ವಯ ಇನ್ನೊಂದು ತಿಂಗಳಲ್ಲಿ ಚಾಬಹರ್ ಬಂದರು ನಿಯಂತ್ರಣ ಭಾರತದ ಪಾಲಾಗಲಿದೆ. ಈ ಬಗ್ಗೆ ಭಾರತಕ್ಕೆ ಆಗಮಿಸಿರುವ ಇರಾನ್ ನ ಸಚಿವ ಅಬ್ಬಾಸ್ ಅಖೌಂಡಿ ಅವರು ಗುರುವಾರ ಹೇಳಿದ್ದಾರೆ. 
ನೀತಿ ಆಯೋಗದ ಆಹ್ವಾನದ ಮೇರೆಗೆ ಮೊಬಿಲಿಟಿ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಅಖೌಂಡಿ ಭಾರತಕ್ಕೆ ಆಗಮಿಸಿದ್ದು, ಈ ವೇಳೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿಚರ್ಚೆ ನಡೆಸಿದರು. ಈ ವೇಳೆ ಚಾಬಹರ್ ಬಂದರು ನಿಯಂತ್ರಣವನ್ನು ಭಾರತಕ್ಕೆ ನೀಡಲು ನಾವು ಸಿದ್ಧರಿದ್ದೇವೆ. ಇನ್ನೊಂದು ತಿಂಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಒಪ್ಪಂದದ ಅನ್ವಯ ನಾವು ಕೂಡ ಭಾರತದ ಒಂದು ಬಂದರನ್ನು ಕಳೆದ ಒಂದೂವರೆ ವರ್ಷದಿಂದ ಬಳಕೆ ಮಾಡಿಕೊಳ್ಳುತ್ತಿದ್ದೆವೆ ಎಂದು ಅಖೌಂಡಿ ತಿಳಿಸಿದರು.
ಭಾರತದ ಪಶ್ಚಿಮ ಕರಾವಳಿಯಿಂದ ಚಾಬಹರ್ ಬಂದರು ನಿಯಂತ್ರಣ ಸುಲಭ ಸಾಧ್ಯ. ಅಲ್ಲದೆ ಈ ಬಂದರಿನ ಮೇಲೆ ನಿಯಂತ್ರಣ ಸಾಧಿಸಿದರೆ ಪಾಕಿಸ್ತಾನ ಮತ್ತು ಚೀನಾ ದೇಶಗಳಿಗೆ ಭಾರತ ದೊಡ್ಡ ಮಟ್ಟದಲ್ಲಿ ತಿರುಗೇಟು ನೀಡಿದಂತಾಗುತ್ತದೆ. ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರಾಬಲ್ಯ ಕೂಡ ಹೆಚ್ಚಿದಂತಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕೇವಲ ಬಂದರು ಮಾತ್ರವಲ್ಲದೇ ಭಾರತ ಇರಾನ್ ನ ಬ್ಯಾಂಕಿಂಗ್ ವಲಯದಲ್ಲೂ ಭಾರಿ ಪ್ರಮಾಣದ ಹೂಡಿಕೆ ಮಾಡಿದ್ದು, ಇದಕ್ಕೆ ಇರಾನ್ ನ ಸೆಂಟ್ರಲ್ ಬ್ಯಾಂಕ್ ಕೂಡ ಅನುಮೋದನೆ ನೀಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ ಹೈಕಮಾಂಡ್ ಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ: CM ಪುತ್ರ ಯತೀಂದ್ರ ಸ್ಫೋಟಕ ಹೇಳಿಕೆ; Video

CM ಕುರ್ಚಿಗಾಗಿ ಬಣ ಬಡಿದಾಟ: ಸಿದ್ದರಾಮಯ್ಯ vs ಡಿಕೆಶಿ 'ಹೈಡ್ರಾಮ' ಈಗ ದೆಹಲಿಗೆ ಶಿಫ್ಟ್; ಎಲ್ಲರ ಚಿತ್ತ ಹೈಕಮಾಂಡ್ ನತ್ತ!

ಅಸ್ಸಾಂ ವಿಧಾನಸಭೆಯಲ್ಲಿ ಬಹುಪತ್ನಿತ್ವ ನಿಷೇಧ ಮಸೂದೆ ಅಂಗೀಕಾರ; ಬುಡಕಟ್ಟು ಜನಾಂಗಕ್ಕೆ ವಿನಾಯಿತಿ

ಹವಾಯಿ ದ್ವೀಪದಲ್ಲಿ ಮತ್ತೆ ಸ್ಫೋಟಿಸಿದ ಜ್ವಾಲಾಮುಖಿ: ಬರೊಬ್ಬರಿ 400 ಅಡಿ ಎತರಕ್ಕೆ ಚಿಮ್ಮಿದ ಲಾವಾರಸ, ರಣರೋಚಕ ವಿಡಿಯೋ

'ಸಿಎಂ ಸ್ಥಾನದಿಂದ ಸಿದ್ದರಾಮಯ್ಯರ ಕೆಳಗಿಳಿಸಿದರೆ ನಿಮಗೇ ಅಪಾಯ': ಕಾಂಗ್ರೆಸ್ ಗೆ ಅಹಿಂದ ಸಮುದಾಯಗಳ ಖಡಕ್ ಎಚ್ಚರಿಕೆ

SCROLL FOR NEXT