ವಿದೇಶ

ಪಾಕ್ ಮಾಜಿ ಪ್ರಧಾನಿ ನವಾಜ್ ಶರೀಫ್ ಪತ್ನಿ ನಿಧನ

Raghavendra Adiga
ಲಂಡನ್: ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ನವಾಜ್ ಶರೀಫ್ ಪತ್ನಿ ಬೇಗಂ ಕುಲ್‌ಸೂಮ್‌ ನವಾಜ್‌ (68) ಮಂಗಳವಾರ ಲಂಡನ್ನಿನಲ್ಲಿ ನಿಧನರಾದರು.
ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬೇಗಂ ಕುಲ್‌ಸೂಮ್‌ ಕೆಲವು ತಿಂಗಳಿನಿಂದ ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು. 
ಬೇಗಂ ಕುಲ್‌ಸೂಮ್‌ ನಿಧನದ ವಾರ್ತೆಯನ್ನು ಪಿಎಂಎಲ್‌ಎನ್‌ ಅಧ್ಯಕ್ಷರಾದ  ಶಹಬಾಜ್‌ ಷರೀಫ್ ಟ್ವೀಟ್ ಮೂಲಕ ಖಚಿತಪಡಿಸಿದ್ದು ಲಂಡನ್ನಿನ ಹಾರ್ಲೆ ಸ್ಟ್ರೀಟ್‌ ಕ್ಲಿನಿಕ್‌ ನಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ ಎನ್ನುವುದಾಗಿ ಅವರು ಟ್ವಿಟ್ ಮಾಡಿದರು.
ಪಾಕ್ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರನ್ನು ಬೇಗಂ 1971ರಲ್ಲಿ ವಿವಾಹವಾಗಿದ್ದರು.
ಬೇಗಂ ಕುಲ್‌ಸೂಮ್‌ ಪತಿ ನವಾಜ್ ಶರೀಫ್ ಮತ್ತು ನಾಲ್ವರು ಮಕ್ಕಳಾದ ಹಸನ್, ಹುಸೇನ್, ಮೇರಿಯಮ್ ಮತ್ತು ಅಸ್ಮಾ ಅವರುಗಳನ್ನು ಅಗಲಿದ್ದಾರೆ. ಇವರಲ್ಲಿ ಪತಿ ನವಾಜ್ ಶರೀಫ್ ಹಾಗೂ ಪುತ್ರಿ ಮೇರಿಯಮ್  ಏವನ್‌ ಫೀಲ್ಡ್‌ ಪ್ರಾಪರ್ಟಿ ಪ್ರಕರಣದ ಆರೋಪಿಗಳಾಗಿ ಪಾಕಿಸ್ತಾನದ ರಾವಲ್ಪಿಂಡಿ ಜೈಲಿನಲ್ಲಿದ್ದಾರೆ.
SCROLL FOR NEXT