ಇಮ್ರಾನ್ ಖಾನ್ 
ವಿದೇಶ

ಪಾಕಿಸ್ತಾನ: ಪ್ರಧಾನಿ ನಿವಾಸದಲ್ಲಿ ನವಾಜ್ ಶರೀಫ್ ಇಟ್ಟುಕೊಂಡಿದ್ದ 8 'ಎಮ್ಮೆಗಳ' ಹರಾಜು !

ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ತೀವ್ರ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದು, ಪ್ರಧಾನಿ ನಿವಾಸದಲ್ಲಿ ಮಾಜಿ ಪ್ರಧಾನಿ ನವಾಜ್ ಶರೀಫ್ ಇಟ್ಟುಕೊಂಡಿದ್ದ 8 ಎಮ್ಮೆಗಳನ್ನು ಮಾರಾಟ ಮಾಡಿ, 23 ಲಕ್ಷ ರೂಪಾಯಿಯನ್ನು ಸಂಪಾದಿಸಿದೆ.

ಇಸ್ಲಾಮಬಾದ್ :ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ತೀವ್ರ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದು, ಪ್ರಧಾನಿ ನಿವಾಸದಲ್ಲಿ ಮಾಜಿ ಪ್ರಧಾನಿ ನವಾಜ್ ಶರೀಫ್  ಇಟ್ಟುಕೊಂಡಿದ್ದ 8 ಎಮ್ಮೆಗಳನ್ನು ಮಾರಾಟ ಮಾಡಿ, 23 ಲಕ್ಷ ರೂಪಾಯಿಯನ್ನು ಸಂಪಾದಿಸಿದೆ.

ಬೃಹತ್ ಪ್ರಮಾಣದ ಸಾಲದಿಂದಾಗಿ  ಇಮ್ರಾನ್ ಖಾನ್  ದೊಡ್ಡ ಮಟ್ಟದ ಆರ್ಥಿಕ ಕೊರತೆ ಅನುಭವಿಸುತ್ತಿದ್ದು, ಕಳೆದ ವಾರ 61 ಸರ್ಕಾರದ ಲಕ್ಸುರಿ ಕಾರುಗಳನ್ನು  ಹರಾಜು ಮಾಡಿತ್ತು. ಇದರಿಂದಾಗಿ 200 ಮಿಲಿಯನ್ ಹಣ ಗಳಿಸಿತ್ತು.

ಬುಲೆಟ್ ಪ್ರೂಪ್ ವಾಹನಗಳು, ನಾಲ್ಕು  ಹೆಲಿಕಾಪ್ಟರ್ ಸೇರಿದಂತೆ 102 ಸರ್ ಪ್ಲಸ್  ಕಾರುಗಳನ್ನು  ಹರಾಜು ಹಾಕುವ ಚಿಂತನೆ ನಡೆಸಲಾಗಿದೆ. ಇಸ್ಲಾಮಾಬಾದಿನಲ್ಲಿ ನಡೆದ ಹರಾಜಿನಲ್ಲಿ ಮೂರು ಎಮ್ಮೆಗಳು ಹಾಗೂ ಐದು ಮರಿಗಳನ್ನು 2, 302, 000 ರೂ. ಗೆ ಹರಾಜು ಹಾಕಲಾಗಿದೆ. ಇವುಗಳನ್ನು ನವಾಜ್ ಷರೀಪ್  ಅವರ ಬೆಂಬಲಿಗರೇ ಕೊಂಡು ಕೊಂಡಿದ್ದಾರೆ ಎಂದು  ಡಾನ್   ಪತ್ರಿಕೆ ವರದಿ ಮಾಡಿದೆ.

8 ಎಮ್ಮೆಗಳಲ್ಲಿ ಒಂದನ್ನು  385,000 ರೂ.ಗೆ  ನವಾಜ್ ಷರೀಪ್ ಬೆಂಬಲಿಗ ಕ್ವಾಲಬ್ ಆಲಿ ಎಂಬವರು ಹರಾಜು ಕೂಗಿದ್ದಾರೆ. ಶರೀಫ್  ಮೇಲಿನ ಅಭಿಮಾನದಿಂದಾಗಿ ಮೂರು ಪಟ್ಟು ಹೆಚ್ಚಿನ ಬೆಲೆ ನೀಡಿ ಕೊಂಡುಕೊಳ್ಳಲಾಗಿದೆ . ನಾಲ್ಕು ಮರಿ ಎಮ್ಮೆಗಳಲ್ಲಿ ಎರಡನ್ನು ಪಿಎಂಎಲ್ -ಎನ್  ಪಕ್ಷದ ಕಾರ್ಯಕರ್ತ ಪಾಖರ್  ವಾರ್ಯಾಚಿ  215, 000 ಹಾಗೂ 270,000ಕ್ಕೆ  ಮತ್ತೊಬ್ಬರು ಮೂರನೇ ಮರಿಯನ್ನು 182,000 ಗೆ ಕೊಂಡುಕೊಂಡಿದ್ದಾರೆ ಎಂದು ಜಿಯೊ ನ್ಯೂಸ್ ವರದಿ ಮಾಡಿದೆ.

68 ವರ್ಷದ ಶರೀಫ್  ಭ್ರಷ್ಟಾಚಾರ ಪ್ರಕರಣದಲ್ಲಿ  10 ವರ್ಷ ಜೈಲುಶಿಕ್ಷೆಗೊಳಗಾಗಿದ್ದರು. ಉನ್ನತ ನ್ಯಾಯಾಲಯ ಶಿಕ್ಷೆಯನ್ನು ರದ್ದುಗೊಳಿಸಿದ ನಂತರ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel