ಭೂಕಂಪನದಿಂದ ತತ್ತರಿಸಿರುವ ಪಲು ನಗರ
ಪಲು: ಇಂಡೊನೇಷ್ಯಾದ ಸುಲಾವೇಸಿ ದ್ವೀಪದ ಪಲು ನಗರದಲ್ಲಿ ಶುಕ್ರವಾರ ಸಂಭವಿಸಿದ ಪ್ರಬಲ ಭೂಕಂಪ ಮತ್ತು ಸುನಾಮಿಯ ಹೊಡೆತಕ್ಕೆ ಸಿಲುಕಿ ಸುಮಾರು 400 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಸುಲಾವೆಸಿ ದ್ವೀಪದಲ್ಲಿ ಭೂಮಿ ಕಂಪಿಸಿದ್ದು, ರಿಕ್ಟರ್ಮಾಪನದಲ್ಲಿ 7.5 ತೀವ್ರತೆ ದಾಖಲಾಗಿದೆ.
ಭೂಕಂಪನದಿಂದ ಸಮುದ್ರ ನೀರು ದ್ವೀಪವನ್ನು ಆವರಿಸಿದ್ದು, ಸುನಾಮಿಯ ಪರಿಸ್ಥಿತಿ ನಿರ್ಮಾಣವಾಗಿದೆ. ಸುಮಾರು 400 ಸಾವು ಸಂಭವಿಸಿರುವುದ್ದು, ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಆಸ್ಪತ್ರೆಗಳು ಗಾಯಾಳುಗಳಿಂದ ತುಂಬಿ ಹೋಗಿವೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.
ಜನನಿಬಿಡ ಪ್ರದೇಶಗಳಲ್ಲಿ, ರಸ್ತೆ ಬದಿಗಳಲ್ಲಿ ಶವಗಳ ಸಾಲು ಕಂಡು ಬರುತ್ತಿದೆ. ಇನ್ನು ಭೂಕಂಪನ ವೇಳೆ ಸಮುದ್ರ ಅಲೆಗಳು 5 ಅಡಿಗಳಷ್ಟು ಎತ್ತರದವರೆಗೂ ಅಪ್ಪಳಿಸಿವೆ.
ಸುಲಾವೆಸಿ ದ್ವೀಪದಲ್ಲಿ ಮೂರುವರೆ ಲಕ್ಷ ಜನ ನೆಲೆಸಿದ್ದಾರೆ. ಬೀಚ್ಫೆಸ್ಟಿವಲ್ಸಂಭ್ರಮದಲ್ಲಿದ್ದ ನಾಗರಿಕರು ಸಾವಿನ ಮನೆ ಸೇರಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.