ವಿದೇಶ

ನೇಪಾಳದಲ್ಲಿ ಭಾರೀ ಚಂಡಮಾರುತ: 27 ಸಾವು, 400ಕ್ಕೂ ಹೆಚ್ಚು ಮಂದಿಗೆ ಗಾಯ

Raghavendra Adiga
ಕಠ್ಮಂಡು: ಭಾನುವಾರ ಸಂಜೆ ಭಾರಿ ಚಂಡಮಾರುತ ಸೃಷ್ಟಿಯಾಗಿದ್ದ ಪರಿಣಾಮ ನೇಪಾಳದಲ್ಲಿ ಸುರಿದ ಗುಡುಗು ಸಹಿತ ಭಾರೀ ಮಳೆಯಿಂದಾಗಿ .ಕನಿಷ್ಠ 27 ಮಂದಿ ಮೃತಪಟ್ಟಿದ್ದಾರೆ ಮತ್ತು 400 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಭಾಗದ ಬಾರಾ ಜಿಲ್ಲೆ ಹಾಗೂ ಪರ್ಸಾ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿ ಸಾವು ನೋವು ಸಂಭವಿಸಿದೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ. ಪರ್ಸಾದಲ್ಲಿ ಇನ್ನೂ ಮಳೆ ನಿಂತಿಲ್ಲವಾಗಿ ಸಾವಿನ ಸಂಖ್ಯೆ ಹೆಚ್ಚಬಹುದೆಂದು ಪರ್ಸಾ ಜಿಲ್ಲಾ ಪೋಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಕನಿಷ್ಠ 27 ಜನರು ಸಾವನ್ನಪ್ಪಿದ್ದು 400 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದ್ದು ಚಂಡಮಾರುತವು ಕಠ್ಮಂಡುವಿನಿಂದ ಸುಮಾರು 128 ಕಿಲೋಮೀಟರ್ ದೂರದಲ್ಲಿರುವ ಬಾರಾ ಜಿಲ್ಲೆಯಲ್ಲಿ ತನ್ನ ರುದ್ರನರ್ತನ ತೋರಿದೆ.
ಪ್ರಧಾನಿ ಕೆ. ಪಿ. ಶರ್ಮಾ ಒಲಿ ಚಂಡಮಾರುತ, ಮಳೆಯ ಕಾರಣ ಜೀವ ಕಳೆದುಕೊಂಡವರ ಕುರಿತು ಸಂತಾಪ ವ್ಯಕ್ತಪಡಿಸಿದ್ದು ರಾಷ್ಟ್ರೀಯ ತುರ್ತು ಪರಿಸ್ಥಿತಿ ನಿರ್ವಹಣಾ ಘಟಕಕ್ಕೆ ಕಾರ್ಯಾಚರಣೆಗೆ ಕರೆ ಮಾಡಿದ್ದಾರೆ.
ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಭದ್ರತಾ ಸಿಬ್ಬಂದಿಯನ್ನು ಚಂಡಮಾರುತ ಪೀಡಿತ ಪ್ರದೇಶದಲ್ಲಿ ನೆಲೆಗೊಳಿಸಲಾಗಿದೆ."ಎರಡು ಬೆಟಾಲಿಯನ್ ಗಳನ್ನು  ತಕ್ಷಣವೇ ಇಲ್ಲಿಂ ನಿಯೋಜಿಸಲಾಗಿದೆ.ತ್ತುರ್ತು ನಿಗಾ ಹೆಲಿಕಾಪ್ಟರ್ ಗಳು ಕಾರ್ಯಾಚರಣೆ ನಡೆಸುತ್ತಿದೆ ನಮ್ಮ ಭದ್ರತಾ ಸಂಸ್ಥೆಗಳು ಹವಾಮಾನ ತಿಳಿಯಾಗುವುದನ್ನು ಕಾಯ್ಯುತ್ತಿದೆ." ಪ್ರಧಾನಿಗಳ ಆಪ್ತ ಸಲಹೆಗಾರ ಬಿಷ್ಣು ರಿಮಲ್ ಹೇಳಿದ್ದಾರೆ.
SCROLL FOR NEXT