ವಾಷಿಂಗ್ಟನ್: ಭಾರತ ವಿಶ್ವದ ಅತಿ ಹೆಚ್ಚು ತೆರಿಗೆದಾರ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಮೆರಿಕಾದ ಪ್ರಖ್ಯಾತ ಹಾರ್ಲೆ ಡೇವಿಡ್ಸನ್ ಸೇರಿ ಅನೇಕ ಉತ್ಪನ್ನಗಳಿಗೆ ಶೇ.100 ರಷ್ಟು ಸುಂಕವನ್ನು ಹೇರಿದ್ದ ಭಾರತದ ಕ್ರಮಕ್ಕೆ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೆಚ್ಚಿನ ಸುಂಕವು ನ್ಯಾಯೋಚಿತವಲ್ಲ, ಎಂದಿರುವ ಟ್ರಂಪ್ "ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯಿಂದ ನನಗೆ ಕರೆ ಬಂದಿದ್ದು ಭಾರತವು ವಿಶ್ವದಲ್ಲೇ ಅತಿ ಹೆಚ್ಚು ತೆರಿಗೆದಾರ ರಾಷ್ಟ್ರಗಳಲ್ಲಿ ಒಂದಾಗಿದೆ. ಆ ರಾಷ್ಟ್ರವು ನಮಗೆ 100 ಶೇ. ತೆರಿಗೆ ವಿಧಿಸಿದೆ" ಎಂದರು. ನ್ಯಾಷನಲ್ ರಿಪಬ್ಲಿಕನ್ ಕಾಂಗ್ರೆಸಿನಲ್ ಕಮಿಟಿಯ ವಾರ್ಷಿಕ ಸ್ಪ್ರಿಂಗ್ ಡಿನ್ನರ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
"ಅಮೆರಿಕಾದ ವಸ್ತುಗಳಿಗೆ ಅಧಿಕ ತೆರಿಗೆ ವಿಧಿಸುವ ರಾಷ್ಟ್ರಗಳಲ್ಲಿ ಭಾರತವೂ ಒಂದು, ಇದು ನಮಗೆ ಬೇಸರ ಉಂಟುಮಾಡಿದೆ.ಹಿಂದೊಮ್ಮೆ ನಾನು ಈ ವಿಚಾರದ ಬಗ್ಗೆ ಮಾತನಾಡಿದರೂ ಭಾರತ ಎಚ್ಚೆತ್ತುಕೊಂಡಿಲ್ಲ. ಒಂದೊಮ್ಮೆ ಹೀಗೇ ಮುಂದುವರಿದರೆ ನಾವು ಸಹ ಭಾರತದ ಸರಕುಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಿಅಬೇಕಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಚೀನಾ ಜೊತೆಗಿನ ವ್ಯಾಪಾರ ಮಾತುಕತೆಗಳು ಚೆನ್ನಾಗಿ ನಡೆಯುತ್ತಿವೆ ಎಂದಿರುವ ಟ್ರಂಪ್ ಭಾರತದೊಡನೆ ಸಹ ತೆರ್ಗೆ ದ್ರ ಸಮರಕ್ಕೆ ಇಳಿಯುವ ಸೂಚನೆ ನೀಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos