ವಿದೇಶ

ನಮ್ಮ ಮೇಲೆ ದಾಳಿಗೆ ಭಾರತದಿಂದ ಮತ್ತೆ ಯೋಜನೆ: ಪಾಕ್

Srinivas Rao BV
ಇಸ್ಲಾಮಾಬಾದ್: ನಮ್ಮ ಮೇಲೆ ದಾಳಿ ನಡೆಸಲು ಭಾರತ ಮತ್ತೆ ಯೋಜನೆ ರೂಪಿಸಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹ್ಮೂದ್ ಖುರೇಷಿ ಆರೋಪಿಸಿದ್ದಾರೆ. 
ಪಾಕಿಸ್ತಾನಕ್ಕೆ ಸಿಕ್ಕಿರುವ ಗುಪ್ತಚರ ಮಾಹಿತಿಯ ಪ್ರಕಾರ ಏ.16-20 ರ ನಡುವೆ ಪಾಕ್ ಮೇಲೆ ಮತ್ತೊಮ್ಮೆ ದಾಳಿ ನಡೆಸಲು ಭಾರತ ಯೋಜನೆ ರೂಪಿಸಿದೆ. ಹೊಸ ದಾಳಿ ನಡೆಯುವ ಸಾಧ್ಯತೆ ಇದೆ. ಪಾಕಿಸ್ತಾನದ ವಿರುದ್ಧ ತನ್ನ ಆಕ್ರಮಣವನ್ನು ಸಮರ್ಥಿಸಿಕೊಳ್ಳಲು ಹಾಗೂ ಪಾಕಿಸ್ತಾನದ ಮೇಲೆ ರಾಜತಾಂತ್ರಿಕ ಒತ್ತಡವನ್ನು ಮತ್ತಷ್ಟು ಹೆಚ್ಚಿಸುವುದಕ್ಕೆ ದಾಳಿಯ ಉದ್ದೇಶವಾಗಿರಲಿದೆ ಎಂದು ಖುರೇಷಿ ಆರೋಪಿಸಿದ್ದಾರೆ.
SCROLL FOR NEXT