ಬ್ರಿಟನ್ ಪಾರ್ಲಿಮೆಂಟ್ ನಲ್ಲಿ ಪ್ರಧಾನಿ ಥೆರೆಸಾ ಮೇ
ನವದೆಹಲಿ: ಬ್ರಿಟೀಷ್ ಆಡಳಿತದ ಸಂಧರ್ಭದಲ್ಲಿ 1919 ರಲ್ಲಿ ಭಾರತದಲ್ಲಿ ನಡೆದ ಜಲಿಯನ್ ವಾಲಾಬಾಗ್ ನಲ್ಲಿ ನಡೆದಿದ್ದ ಸ್ವತಂತ್ರ್ಯ ಹೋರಾಟಗಾರರ ಸಾಮೂಹಿಕ ಹತ್ಯಾಕಾಂಡ ವಿಚಾರಕ್ಕೆ ಸಂಬಂಧಿಸಿದಂತೆ ಬ್ರಿಟನ್ ಪ್ರಧಾನಿ ಥೆರೆಸಾ ಮೇ ಯುಕೆ ಸಂಸತ್ ನಲ್ಲಿ ವಿಷಾಧ ವ್ಯಕ್ತಪಡಿಸಿದ್ದಾರೆ.
ಇದೇ ಏಪ್ರಿಲ್ 13ಕ್ಕೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದು ನೂರು ವರ್ಷ ತುಂಬುತ್ತಿರುವ ಹಿನ್ನಲೆ ಈ ಕುರಿತು ಬ್ರಿಟನ್ ಸಂಸತ್ ನಲ್ಲಿ ವಿಚಾರ ಪ್ರಸ್ತಾಪಿಸಿ ಮಾತನಾಡಿದ ಥೆರೆಸಾ ಮೇ ಅವರು, ಘಟನೆ ಕುರಿತಂತೆ ತೀವ್ರ ವಿಷಾಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಆದರೆ ಬ್ರಿಟೀಷ್ ಆಡಳಿತ ನಡೆಸಿದ್ದ ಈ ಭೀಕರ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಥೆರೆಸಾ ಮೇ ಸಂಪೂರ್ಣ ಕ್ಷಮೆ ಕೋರಲಿಲ್ಲ ಎನ್ನಲಾಗಿದೆ. ಆದರೆ ಪ್ರಮುಖ ವಿರೋಧ ಪಕ್ಷವಾಗಿರುವ ಲೇಬರ್ ಪಕ್ಷದ ನಾಯಕನಾಗಿರುವ ಜೆರೆಮಿ ಕಾರ್ಬೋನ್ ಅವರು ಸಂಪೂರ್ಣ ಕ್ಷಮೆಕೋರಲು ಪ್ರಧಾನಿಗೆ ಆಗ್ರಹಿಸಿದರು.
ಸಂಸತ್ತಿನಲ್ಲಿ ಪ್ರಧಾನಿ ತೆರೇಸಾ ಮೇ ಈ ಘಟನೆ ಕುರಿತಾಗಿ ಮಾತನಾಡುತ್ತಾ 'ಈ ಹಿಂದೆ ಏನಾಯಿತು ಅದರಿಂದ ಆದ ಹಾನಿಗೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ" ಎಂದು ಹೇಳಿದ್ದಾರೆ.
ಏಪ್ರಿಲ್ 13, 1919 ಜಲಿಯನ್ವಾಲಾ ಬಾಗ್ ಹತ್ಯಾಕಾಂಡದಲ್ಲಿ ಬ್ರಿಟಿಷ್ ಸೇನಾಪಡೆಗಳು ಸಾವಿರಾರು ನಿಶ್ಶಸ್ತ್ರ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿ ಬಲಿ ತೆಗೆದುಕೊಂಡಿದ್ದರು.ಈ ಘಟನೆ ಇಂದಿಗೂ ಕೂಡ ಭಾರತದ ಸ್ವಾತಂತ್ರ್ಯಪೂರ್ವ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ಉಳಿದುಕೊಂಡಿದೆ.
ವಸಾಹತುಶಾಹಿ-ಯುಗದ ದಾಖಲೆಗಳು ಹೇಳುವಂತೆ ಈ ಘಟನೆಯಲ್ಲಿ ಅಮೃತಸರದಲ್ಲಿ ಸುಮಾರು 400 ಜನರು ಸಾವನ್ನಪ್ಪಿದರು ಎನ್ನಲಾಗಿದೆ. ಆದರೆ ಭಾರತೀಯ ಅಂಕಿ-ಅಂಶಗಳು ಹೇಳುವಂತೆ ಈ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಹತ್ತಿರವೆಂದರೆ ಸಾವಿರ ಜನರು ಎಂದು ಹೇಳಲಾಗುತ್ತದೆ. ಈ ಹಿಂದೆ ಬ್ರಿಟಿಷ್ ಪ್ರಧಾನ ಮಂತ್ರಿ ಡೇವಿಡ್ ಕ್ಯಾಮೆರಾನ್ 2013 ರಲ್ಲಿ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಇದನ್ನು ತೀವ್ರ ಅವಮಾನಕರ ಎಂದು ಹೇಳಿದ್ದರೆ ಹೊರತು ಕ್ಷಮಾಪಣೆ ಕೋರಿರಲಿಲ್ಲ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos