ಸೇಲಂ: ಈಕೆ ರೋಸ್ ಮೇರಿ ಬೆಂಥ್ಲೆ, ಈಜುಗಾರ್ತಿ, ಐದು ಮಕ್ಕಳ ಬೆಳೆಸಿದ ತಾಯಿ, ಈಕೆಯ ಪತಿ ನಡೆಸುವ ಜಾನುವಾರುಗಳ ಆಹಾರದ ಮಾರಾಟ ಅಂಗಡಿ (ಫೀಡ್ ಸ್ಟೋರ್) ನಲ್ಲಿ ಸಹ ಅವರಿಗೆ ಸಹಾಯ ಮಾಡುತ್ತಿದ್ದರು. ಕಡೆಗೆ ಅವರು ಸಾಯುವಾಗ ಇವರ ವಯಸ್ಸು ಕೇವಲ 99 ಮಾತ್ರ. ಇದಷ್ಟೇ ಆಗಿದ್ದರೆ ಅಂತಹದೇನೂ ವಿಶೇಷವಿರಲಿಲ್ಲ. ಆದರೆ ಆಕೆ ಸಾವನ್ನಪ್ಪಿದ ಬಳಿಕ ತಿಳಿದು ಬಂದ ವಿಚಾರವೆಂದರೆ ಆಕೆಯ ದೇಹದ ಒಳಭಾಗದಲ್ಲಿದ್ದ ಅಂಗಗಳೆಲ್ಲವೂ (ಹೃದಯ ಹೊರತಾಗಿ) ತಪ್ಪಾದ ಸ್ಥಳದಲ್ಲಿ ನೆಲೆಯಾಗಿದ್ದವ. ಈ ವಾರ ನಡೆದಿದ್ದ ದೇಹರಚನೆಕ್ರರ ಸಮ್ಮೇಳನ (ಅನಾಟೋಮಿಸ್ಟ್ಸ್ ಕಾನ್ಫರೆನ್ಸ್) ನಲ್ಲಿ ವೃದ್ದ ಮಹಿಳೆಯ ದೇಹದಲ್ಲಿನ ಈ ಕೌತುಕದ ಕುರಿತು ವದರಿ ಮಂಡಿಸಲಾಗಿದೆ. ದೇಹದ ಎಲ್ಲಾ ಒಳಭಾಗದಲ್ಲಿರುವ ಅಂಗಗಳು ತಪ್ಪಾದ ಸ್ಥಾನದಲ್ಲಿದ್ದೂ ಸಹ ಆಕೆ ದೀರ್ಘಕಾಲ ಬದುಕಿದ್ದದ್ದು ಅಚ್ಚರಿದಾಯಕವಾಗಿದೆ ಎಂದು ಸಮಾವೇಶದಲ್ಲಿ ಅಭಿಪ್ರಾಯಪಡಲಾಗಿದೆ.
ಒರೆಗಾನ್ ಹೆಲ್ತ್ ಆಂಡ್ ಸೈನ್ಸ್ ಯೂನಿವರ್ಸಿಟಿ ಪ್ರಕಾರ, ಲೆವೊಕಾರ್ಡಿಯಾ ಎಂದು ಕರೆಯಲಾಗುವ ಸ್ಥಿತಿಯನ್ನು ಹೊಂದಿರುವ ಜನರು ಸಾಮಾನ್ಯವಾಗಿ ಮಾರಣಾಂತಿಕ ಹೃದಯದ ಕಾಯಿಲೆಗಳು ಮತ್ತು ಇತರ ಅಸಹಜತೆಯಿಂದ ಬಳಲುತ್ತಿರುತ್ತಾರೆ.
ಪೋರ್ಟ್ ಲ್ಯಾಂಡ್ ವಿವಿನಲ್ಲಿ ಕಳೆದ ವರ್ಷ ಕ್ಯಾಮೆರಾನ್ ವಾಕರ್ಸ್ ಶವವೊಂದರ ಪರಿಶೀಲನೆ ನಡೆಸುವಾಗ ರಕ್ತನಾಳಗಳು ಭಿನ್ನವಾಗಿರುವುದನ್ನು ಗಮನಿಸಿ ಹೃದಯದ ಪರೀಕ್ಷೆ ನಡೆಸಿದ್ದಾರೆ. ಆದರೆ ಶವದ ಕಿಬ್ಬೊಟ್ಟೆಯ ಭಾಗ ತೆರೆದಾಗ , ಎಲ್ಲ ಅಂಗಗಳು ತಪ್ಪು ಭಾಗದಲ್ಲಿ ನೆಲೆಯಾಗಿರುವುದು ಕಂಡಿದೆ. ಆದರೆ ಅಸಹಜವಾಗಿ ನೆಲೆಯಾಇದ್ದ ರಕ್ತನಾಳಗಳು ಸಹ ಹೃದಯಕ್ಕೆ ರಕ್ತ ಪಂಪ್ ಆಗುವುದಕ್ಕೆ ಅನುಕೂಲ ಕಲ್ಪಿಸಿದ್ದವು.
ಮಂಗಳವಾರ ದೂರವಾಣಿಯ ಮೂಲಕ ಸಂಬಾಷಿಸಿದ ವಾಕರ್ "ಖಂಡಿತವಾಗಿಯೂ ಕುತೂಹಲ ಮೂಡಿಸಬಲ್ಲ ವರದಿ, " ವೈದ್ಯಕೀಯ ವಿಸ್ಮಯ" ಎಂದು ಹೇಳಿದ್ದಾರೆ. ಅಂಗರಚನಾಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ವಾಕರ್ ಹೇಳಿದಂತೆ ಅವರಿಗೆ ರೋಸ್ ಮೇರಿ ಅವರ ಕುಟುಂಬದ ಬಗ್ಗೆ ತಿಳಿದಿಲ್ಲ, ಆದರೆ ಪ್ರತಿ 22,000 ಜನನದ ನಂತರ ಮಾತ್ರ ಇಂತಹಾ ಅಸಹಜ ಶಿಶುವೊಂದು ಜನ್ಮಿಸುತ್ತದೆ ಎಂದು ಒರೆಗಾನ್ ಹೆಲ್ತ್ ಆಂಡ್ ಸೈನ್ಸ್ ಯೂನಿವರ್ಸಿಟಿ ಹೇಳುತ್ತದೆ ಎನ್ನುತ್ತಾರೆ.
ಆದರೆ ರೋಸ್ ಮೇರಿ ತಾವು ಸಹಜವಾದ ಜೀವನವನ್ನೇ ಅನುಭವಿಸಿದ್ದರು. ಆಕೆ ಏಕೈಕ ತೊಂದರೆ ಎಂದರೆ ಸಂಧಿವಾತವಾಗಿತ್ತು. ಅದು ಆಗಾಗ ಮರುಕಳಿಸುತ್ತಿತ್ತು ಎಂದು ಅವಳ ಮಗಳು ಲೂಯೀಸ್ ಐಲೀ ಹೇಳಿದ್ದಾರೆ. ಇನ್ನು ರೋಸ್ ಮೇರಿ ಐವತ್ತನೇ ವಯಸ್ಸಿನವರಾಗಿದ್ದ ವೇಳೆ ಅಪೆಂಡಿಕ್ಸ್ ನೋವಿಗೆ ತುತ್ತಾಗಿದ್ದರು. ಆಗ ವೈದ್ಯರು ಅಪೆಂಡಿಕ್ಸ್ ಗಡ್ಡೆ ತೆಗೆಯಲು ನಿರ್ಧರಿಸಿದ್ದರು. ಆದರೆ ಗಡ್ಡೆಯ ಪತ್ತೆ ಅವರಿಗೆ ಸಾಧ್ಯವಾಗಿಲ್ಲ.ಇನ್ನು ಪಿತ್ತಕೋಶ ಶಸ್ತ್ರಚಿಕಿತ್ಸೆ ನಡೆದು ಅದನ್ನು ತೆಗೆದು ಹಾಕುವ ವೇಳೆಗೆ ಸಹ ಪಿತ್ತಕೋಶ ಸಾಮಾನ್ಯವಾಗಿ ದೇಹದ ಯಾವ ಭಾಗದಲ್ಲಿರುವುದು ಆ ಭಾಗದಲ್ಲಿರದೆ ವಿರುದ್ಧ ದಿಕಿನಲ್ಲಿತ್ತು.
ರೋಸ್ ಮೇರಿ ದೇಹವನ್ನು ಒಎಚ್ ಎಸ್ ಯು ಗೆ ದಾನ ಮಾಡಲು ಅವರ ಕುಟುಂಬವು ಒಪ್ಪಿದೆ.ಭವಿಷ್ಯದ ವೈದ್ಯರು ತಮ್ಮ ಭವಿಷ್ಯದ ರೋಗಿಗಳನ್ನು ವ್ಯಕ್ತಿಗಳಂತೆ ಸಂಬೋಧಿಸುವ ದೃಷ್ಟಿಯಿಂದ, ದೊಡ್ಡ ಅಂಗರಚನಾ ಬದಲಾವಣೆ ಮಾತ್ರವಲ್ಲದೆ ಸೂಕ್ಷ್ಮ ಅಂಗರಚನಾ ಬದಲಾವಣೆಗಳಿಗೆ ಸಹ ಮನ ಕೊಡುವ ಪ್ರಾಮುಖ್ಯತೆಯ ಬಗ್ಗೆ ಮಾತನಾಡಲು ಇದು ನಮಗೆ ಒಂದು ಅವಕಾಶವನ್ನು ನೀಡಿತು" ಎಂದು ವಾಕರ್ ಹೇಳಿದ್ದಾರೆ. ಇನ್ನು ಇಂತಹಾ ಸ್ಥಿಯ್ತಿಯಲ್ಲಿರುವ ಜನರು ಎಷ್ಟು ಕಾಲ ಬದುಕಿದ್ದಾರೆಂದು ಅವರು ಸಂಶೋಧಿಸಿದ್ದಾರೆ, ಅದರ ಪ್ರಕಾರ ಒಬ್ಬ ವ್ಯಕ್ತಿ ಗರಿಷ್ಟ 73 ವರ್ಷ ಬದುಕಿರುವುದು ಇದುವರೆಗಿನ ದಾಖಲೆಯಾಗಿತ್ತು. ಆದರೆ ರೋಸ್ ಮೇರಿ ಇದಕ್ಕೆ 26 ವರ್ಷ ಹೆಚ್ಚು ಕಾಲ ಬದುಕಿದ್ದಾರೆ.ಆಕೆಯ ಪತಿ, ಜೇಮ್ಸ್, ಸುಮಾರು 15 ವರ್ಷಗಳ ಹಿಂದೆ ನಿಧನರಾದರು.