ನರೇಂದ್ರ ಮೋದಿ-ಡೊನಾಲ್ಡ್ ಟ್ರಂಪ್
ನ್ಯೂಯಾರ್ಕ್: ತಮ್ಮ ಮಾತಿನ ಮೂಲಕ ಮೋಡಿ ಮಾಡಿ ಜನರನ್ನು ಆಕರ್ಷಿಸುವ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಅತೀ ಹೆಚ್ಚು ಫೇಸ್‍ಬುಕ್ ಲೈಕ್ಸ್ ಪಡೆದ ಜಗತ್ತಿನ ನಾಯಕರಲ್ಲಿ ಅಗ್ರಸ್ಥಾನಕ್ಕೇರಿದ್ದು ವಿಶ್ವದಲ್ಲೇ ಪ್ರಭಾವಶಾಲಿ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.
ಪ್ರಧಾನಿ ಮೋದಿ ಅವರ ವೈಯಕ್ತಿಕ ಫೇಸ್ ಬುಕ್ ಖಾತೆಗೆ 43.5 ಮಿಲಿಯನ್ ಲೈಕ್ಸ್ ಹಾಗೂ ಅಧಿಕೃತ ಖಾತೆಗೆ 13.7 ಮಿಲಿಯನ್ ಲೈಕ್ಸ್ ಪಡೆಯುವ ಮೂಲಕ ಫೇಸ್‍ಬುಕ್ ನಲ್ಲಿ ಅತೀ ಹೆಚ್ಚು ಲೈಕ್ಸ್ ಪಡದೆ ಜಗತ್ತಿನ ಅಗ್ರಗಣ್ಯ ನಾಯಕರ ಸಾಲಿನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಗ್ಲೋಬಲ್ ಕಮ್ಯುನಿಕೇಷನ್ ಏಜೆನ್ಸಿ ಬಿಸಿಡಬ್ಲ್ಯೂ ನಡೆಸಿದ ಟಿಪ್ಲೊಮೆಸಿ ಅಧ್ಯಯನದ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಫೇಸ್ ಬುಕ್ ಖಾತೆಯನ್ನು 43.5 ಮಿಲಿಯನ್(4 ಕೋಟಿ 35 ಲಕ್ಷ) ಜನರು ಲೈಕ್ ಮಾಡಿದ್ದಾರೆ. ಅಧಿಕೃತ ಫೇಸ್ ಬುಕ್ ಖಾತೆಯನ್ನು 13.7 ಮಿಲಿಯನ್ ಲೈಕ್ ಮಾಡಿದ್ದಾರೆ.
ಪ್ರಧಾನಿ ಮೋದಿ ನಂತರದ ಸ್ಥಾನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದ್ದಾರೆ. ಇವರ ಖಾತೆಯನ್ನು 23 ಮಿಲಿಯನ್ ಜನರು ಲೈಕ್ ಮಾಡಿದ್ದಾರೆ. ಈ ಮೂಲಕ ಅಮೆರಿಕ ಅಧ್ಯಕ್ಷ ಟ್ರಂಪ್ ವಿಶ್ವ ನಾಯಕರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics