ವಿದೇಶ

ಶ್ರೀಲಂಕಾ ಸ್ಫೋಟದಲ್ಲಿ 138 ಮಿಲಿಯನ್ ಸಾವು.....!: ಟ್ರಂಪ್ ಟ್ವೀಟ್ ಎಡವಟ್ಟು

Lingaraj Badiger
ವಾಷಿಂಗ್ಟನ್: ಶ್ರೀಲಂಕಾದ ಕೊಲಂಬೊದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ 138 ದಶಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂದು ಟ್ವೀಟ್ ಮಾಡುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಡವಟ್ಟು ಮಾಡಿಕೊಂಡಿದ್ದಾರೆ.
ಸರಣಿ ಬಾಂಬ್ ದಾಳಿ ಖಂಡಿಸಿ ಟ್ವೀಟ್ ಮಾಡುವ ಭರದಲ್ಲಿ ಅಮೆರಿ ಅಧ್ಯಕ್ಷರು, ದಾಳಿಯಲ್ಲಿ ಸತ್ತವರ ಸಂಖ್ಯೆಯನ್ನು 138 ಮಂದಿ ಎಂದು ಬರೆಯುವ ಬದಲು 138 ದಶಲಕ್ಷ ಎಂದು ಟ್ವೀಟ್ ಮಾಡಿದ್ದಾರೆ.
ಈಗ ಆ ಟ್ವೀಟ್ ಅನ್ನು ಡಿಲಿಟ್ ಮಾಡಲಾಗಿದೆಯಾದರೂ ಅದರ ಸ್ಕ್ರೀನ್ ಶಾಟ್ ಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ. ಅಳಿಸಿ ಹಾಕಿರುವ ಟ್ವೀಟ್  ನಲ್ಲಿ ಕನಿಷ್ಠ 138 ಮಿಲಿಯನ್ ಜನರು ಸಾವನ್ನಪ್ಪಿದ್ದಲ್ಲದೇ 600 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಉಲ್ಲೇಖಿಸಿದ್ದರು. ಈಗ ಈ ಟ್ವೀಟ್ ನ್ನು ಅಳಿಸಿ ಹಾಕಿ ಇನ್ನೊಂದು ಟ್ವೀಟ್ ಮಾಡಿರುವ ಟ್ರಂಪ್, ಉಗ್ರರ ಆತ್ಮಹತ್ಯಾ ದಾಳಿಯನ್ನು ಖಂಡಿಸಿದ್ದಾರೆ ಅಲ್ಲದೆ ಅಮೆರಿಕ ಯಾವುದೇ ರೀತಿಯ ಸಹಾಯ ಮಾಡಲು ಸಿದ್ದ ಎಂದು ಹೇಳಿದ್ದಾರೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಹ ಈ ದಾಳಿಯನ್ನು ಖಂಡಿಸಿದ್ದು, "ಇಂತಹ ದುಷ್ಕೃತ್ಯಕ್ಕೆ ನಮ್ಮ ಪ್ರದೇಶದಲ್ಲಿ ಯಾವುದೇ ಅವಕಾಶವಿಲ್ಲ, ಭಾರತ ದೇಶವು ಇಂತಹ ಸಮಯದಲ್ಲಿ ಶ್ರೀಲಂಕಾ ಜನರೊಂದಿಗೆ ಬೆಂಬಲವಾಗಿ ನಿಲ್ಲಲಿದೆ. ದಾಳಿಯಲ್ಲಿ ಮೃತಪಟ್ಟವರಿಗೆ ಮತ್ತು ಗಾಯಗೊಂಡಿರುವವರೆಗೆ ನನ್ನ ಸಂತಾಪ ಮತ್ತು ಪ್ರಾರ್ಥನೆಗಳು" ಎಂದು ಟ್ವೀಟ್ ಮಾಡಿದ್ದಾರೆ.
SCROLL FOR NEXT