ವಿದೇಶ

ಶ್ರೀಲಂಕಾದಲ್ಲಿ ಮತ್ತೊಂದು ಉಗ್ರ ದಾಳಿ..?; ಕೊಲಂಬೋ ಹೊರವಲಯದಲ್ಲಿ ಮತ್ತೊಂದು ಸ್ಫೋಟ

Srinivasamurthy VN
ಕೊಲಂಬೋ: 359 ಮಂದಿಯ ಮಾರಣಹೋಮಕ್ಕೆ ಕಾರಣವಾದ ಸರಣಿ ಬಾಂಬ್ ಸ್ಱೋಟ ಪ್ರಕರಣದಿಂದ ಶ್ರೀಲಂಕಾ ಚೇತರಿಸಿಕೊಳ್ಳುವ ಮುನ್ನವೇ ಅಂತಹುದೇ ಮತ್ತೊಂದು ಸ್ಫೋಟವಾದ ಕುರಿತು ವರದಿಯಾಗಿದೆ.
ಶ್ರೀಲಂಕಾ ರಾಜಧಾನಿ ಕೊಲಂಬೋದಿಂದ 40 ಕಿಮೀ ದೂರದಲ್ಲಿರುವ ಪುಗೋಡಾ ಎಂಬ ನಗರದಲ್ಲಿ ಸ್ಫೋಟದ ಸದ್ದು ಕೇಳಿದ್ದು, ಉಗ್ರದಾಳಿ ಇರಬಹುದು ಎಂದು ಶಂಕಿಸಲಾಗಿದೆ. ಕಸದ ತೊಟ್ಟಿಯೊಂದರಲ್ಲಿ ಸ್ಫೋಟ ಸಂಭವಿಸಿದ್ದು, ಖಾಲಿ ಜಾಗವಾಗಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಏಪ್ರಿಲ್ 21 ರಂದು ಶ್ರೀಲಂಕಾದಲ್ಲಿ ಎಂಟು ಕಡೆ ನಡೆದ ಸರಣಿ ಬಾಂಬ್ ಸ್ಫೋಟದ ಬಳಿಕೆ ಎಲ್ಲೆಲ್ಲೂ ಟಾಸ್ಕ್ ಫೋರ್ಸ್ ಪರಿಶೀಲನೆ ನಡೆಸುತ್ತಿದ್ದು, ನಿನ್ನೆ(ಬುಧವಾರ)ಯೂ ಬೈಕ್ ವೊಂದರಲ್ಲಿ ಅನುಮಾನಾಸ್ಪದ ವಸ್ತು ಪತ್ತೆಯಾದ ಹಿನ್ನೆಲೆಯಲ್ಲಿ ಬೈಕ್ ಅನ್ನೇ ಸ್ಫೋಟಿಸಲಾಗಿತ್ತು. ಭಾನುವಾರ ನಡೆದ ಉಗ್ರದಾಳಿಯಲ್ಲಿ 350 ಕ್ಕೂ ಹೆಚ್ಚು ಜನ ಮೃತರಾಗಿದ್ದು, 500 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಉಗ್ರದಾಳಿಯ ಹೊಣೆಯನ್ನು ಐಸಿಸ್ ಉಗ್ರ ಸಂಘಟನೆ ಹೊತ್ತಿದ್ದು, ಚರ್ಚ್ ಮತ್ತು ಹೊಟೇಲ್ ಗಳನ್ನೇ ಮುಖ್ಯ ಗುರಿಯನ್ನಾಗಿಸಿಕೊಂಡಿತ್ತು ಎನ್ನಲಾಗಿದೆ.
SCROLL FOR NEXT