ವಿದೇಶ

ಶ್ರೀಲಂಕಾ ಉಗ್ರ ದಾಳ: ಹಿಂದೂ ಮಹಾಸಾಗರದಲ್ಲಿ 10 ಸಾವಿರ ಸೈನಿಕರ ನಿಯೋಜನೆ

Srinivasamurthy VN
ಕೊಲಂಬೋ: ಶ್ರೀಲಂಕಾದಲ್ಲಿ ಮತ್ತೆ ಉಗ್ರ ಹಾವಳಿ ಮುಂದುವರೆದಿರುವಂತೆಯೇ ಹಿಂದೂ ಮಹಾಸಾಗರದಲ್ಲಿ ಸುಮಾರು 10 ಸಾವಿರ ಸೈನಿಕರನ್ನು ನಿಯೋಜಿಸಲಾಗಿದ್ದು, ಲಂಕಾದಲ್ಲಿ ಅವಿತಿರುವ ಉಗ್ರರು ಯಾವುದೇ ಕಾರಣಕ್ಕೂ ಪರಾರಿಯಾಗದಂತೆ ಎಚ್ಚರಿಕೆ ವಹಿಸಲಾಗಿದೆ.
ಶ್ರೀಲಂಕಾ ನೌಕಾದಳದ ಅಧಿಕಾರಿಗಳು ಈಗಾಗಲೇ ದ್ವೀಪರಾಷ್ಟ್ರದ ಶಂಕಿತ ಸಮುದ್ರ ಮಾರ್ಗಗಳಲ್ಲಿ ತೀವ್ರ ಶೋಧಕಾರ್ಯಾಚರಣೆ ನಡೆಸುತ್ತಿದ್ದು, ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮೂಲಗಳ  ಪ್ರಕಾರ ಶ್ರೀಲಂಕಾದಲ್ಲಿ ಈಗಾಗಲೇ ಸುಮಾರು 76 ಮಂದಿ ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರ ಪೈಕಿ ಸಿರಿಯಾ ಮತ್ತು ಈಜಿಪ್ಟ್ ನಿವಾಸಿಗಳೂ ಕೂಡ ಸೇರಿದ್ದಾರೆ ಎನ್ನಲಾಗಿದೆ. 
ಈ ಬಗ್ಗೆ ಮಾಹಿತಿ ನೀಡಿರುವ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು, ಕೆಲ ಶ್ರೀಲಂಕಾದ ಮೂಲದ ಯುವಕರು 2013ರಿಂದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಸಂಪರ್ಕ ಹೊಂದಿದ್ದಾರೆ. ಈ ಎಲ್ಲ ಶಂಕಿತರ ಮೇಲೆ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದು, ಪೊಲೀಸರು ಅವರನ್ನು ಬಂಧಿಸುವ ಕುರಿತು ಕ್ರಮ ಕೈಗೊಂಡಿದ್ದಾರೆ.
140 ಶಂಕಿತರ ಮೇಲೆ ಲಂಕಾ ಅಧಿಕಾರಿಗಳ ಹದ್ದಿನಕಣ್ಣು
ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟ ನಡೆದ ಬಳಿಕ ಅಧಿಕಾರಿಗಳು ಶಂಕಿತರಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಶಂಕೆಯ ಮೇರೆಗೆ ಸುಮಾರು 140 ಮಂದಿಯ ಮೇಲೆ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
SCROLL FOR NEXT