ವಿದೇಶ

ಶ್ರೀಲಂಕಾದಲ್ಲಿ ಮುಂದುವರೆದ ಉಗ್ರ ದಾಳಿ: ಮನೆಯಲ್ಲೇ ಪ್ರಾರ್ಥನೆ ಸಲ್ಲಿಸುವಂತೆ ಧಾರ್ಮಿಕ ಮುಖಂಡರ ಸಲಹೆ!

Srinivasamurthy VN
ಕೊಲಂಬೋ: ಸರಣಿ ಬಾಂಬ್ ಸ್ಫೋಟದಿಂದ ತತ್ತರಿಸಿ ಹೋಗಿರುವ ಶ್ರೀಲಂಕಾದಲ್ಲಿ ಆತಂಕ ಮುಂದುವರೆದಿದ್ದು, ಮುಂಜಾಗ್ರತಾ ಕ್ರಮವಾಗಿ ಪ್ರಾರ್ಥನೆಗಾಗಿ ಮಸೀದಿ ಮತ್ತು ಚರ್ಚೆ ಗಳಿಗೆ ಆಗಮಿಸಿದಂತೆ ಧಾರ್ಮಿಕ ಮುಖಂಡರು ಸಲಹೆ ನೀಡಿದ್ದಾರೆ.
ಶ್ರೀಲಂಕಾದ ಕ್ಯಾಥೋಲಿಕ್ ಚರ್ಚ್ ಗಳ ಒಕ್ಕೂಟ ಹಾಗೂ ಆಲ್ ಸಿಲೋನ್ ಜಮಾಯುತುಲ್ ಉಲ್ಲಮ ಮುಸ್ಲಿಂ ಸಂಘಟನೆ ಇಂತಹುದೊಂದು ಕರೆ ನೀಡಿದ್ದು, ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸುವಂತೆ ಸಲಹೆ ನೀಡಿದೆ. ಲಂಕಾದಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕ ಸಾಮೂಹಿಕ ಪ್ರಾರ್ಥನೆ ಬೇಡ  ಎಂದು ಸಲಹೆ ನೀಡಿದ್ದಾರೆ. 
ಇನ್ನು ಶ್ರೀಲಂಕಾದಲ್ಲಿ ಮತ್ತೆ ಸರಣಿ ಬಾಂಬ್ ಸ್ಫೋಟವಾಗಿದ್ದು, ನಿನ್ನೆ ಕಾಲ್ ಮುನೈನಗರದಲ್ಲಿ ಮೂರು ಕಡೆ ಸರಣಿ ಬಾಂಬ್ ಸ್ಫೋಟ ಸಂಭವಿಸಿ, ಇಬ್ಬರು ಮೃತಪಟ್ಟಿದ್ದರು. ಅಲ್ಲದೆ ಇದೇ ಪ್ರಾಂತ್ಯದಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರರು ನಡುವೆ ಗುಂಡಿನ ಕಾಳಗ ನಡೆಯುತ್ತಿದೆ. ಈಶಾನ್ಯ ಶ್ರೀಲಂಕಾದಲ್ಲಿ ಉಗ್ರರ ಅಡಗುದಾಣಗಳ ಮೇಲೆ ಲಂಕಾ ಸೇನೆ ದಾಳಿ ಮಾಡಿದೆ. ಈ ವೇಳೆ ಇಬ್ಬರು ಶಂಕಿತ ಉಗ್ರರು ಸಾವನ್ನಪ್ಪಿದ್ದಾರೆ.
SCROLL FOR NEXT