ವಿದೇಶ

ತಿರುಗು ಬಾಣವಾಯ್ತು ಭಾರತದ ಮೇಲಿನ ದ್ವೇಷ: ಟೊಮಾಟೊಗೂ ಕಣ್ಣೀರು ಹಾಕುವ ಸ್ಥಿತಿ ಪಾಕ್ ಜನತೆಯದ್ದು!

Srinivas Rao BV

ಆರ್ಟಿಕಲ್ 370 ರದ್ದುಗೊಳಿಸಿದ್ದಕ್ಕೆ ಹತಾಶಗೊಂಡು ಪಾಕಿಸ್ತಾನ ಭಾರತದೊಂದಿಗಿನ ವಾಣಿಜ್ಯ-ವ್ಯಾಪಾರಗಳನ್ನು ರದ್ದುಗೊಳಿಸಿದೆ. ಈಗ ಅದರ ಪರಿಣಾಮ ಪಾಕಿಸ್ತಾನಕ್ಕೆ ಗೋಚರವಾಗುತ್ತಿದೆ. 

ಭಾರತದ ವಿರುದ್ಧ ಅಬ್ಬರಿಸಿ ವ್ಯಾಪಾರ ಸ್ಥಗಿತಗೊಳಿಸಿದ್ದ ಪಾಕಿಸ್ತಾನ ಈಗ ತನ್ನ ತಪ್ಪಿಗೆ ಕಣ್ಣೀರು ಹಾಕುವ ಪರಿಸ್ಥಿತಿ ಎದುರಿಸುತ್ತಿದೆ. ಬೇರೆಲ್ಲಾ ಪ್ರದೇಶಗಳಲ್ಲಿ ಈರುಳ್ಳಿ ಖರೀದಿಸುವಾಗ, ಕತ್ತರಿಸುವಾಗ ಕಣ್ಣೀರು ಬಂದರೆ, ಪಾಕಿಸ್ತಾನದ ಜನತೆ ಟೊಮಾಟೋ ಖರೀದಿಸುವುದಕ್ಕೂ ಕಣ್ಣೀರಿಡುತ್ತಿದ್ದಾರೆ.
 
ರೋಟಿ, ನಾನ್ ಬೆಲೆಯೂ ಏರಿಕೆಯಾಗತೊಡಗಿದ್ದು ಈ ನಡುವೆ ಟೊಮಾಟೋ ದರ ಸಹ ಹೆಚ್ಚಿದೆ. ಪ್ರತಿ ಕೆ.ಜಿ ಟೊಮಾಟೊ ಬೆಲೆ  300 ರೂಪಾಯಿ ಆಗಿದ್ದು, ಇದರೊಟ್ಟಿಗೆ ಈರುಳ್ಳಿ, ಸೇರಿದಂತೆ ಹಸಿ ತರಕಾರಿಗಳ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. 

ಈ ಎಲ್ಲಾ ವಸ್ತುಗಳನ್ನು ಪಾಕಿಸ್ತಾನ ಭಾರತದಿಂದ ಆಮದು ಮಾಡಿಕೊಳ್ಳುತ್ತಿತ್ತು. ಈಗ ಭಾರತದೊಂದಿಗಿನ ವಾಣಿಜ್ಯ-ವ್ಯಾಪಾರಗಳನ್ನು ಕಡಿದುಕೊಂಡಿರುವುದರಿಂದ ಬೆಲೆ ಗಗನಕ್ಕೇರಿದೆ. ಈಗಾಗಲೇ ಆರ್ಥಿಕವಾಗಿ ತೀವ್ರವಾಗಿ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನಕ್ಕೆ ತಾನೇ ಮಾಡಿಕೊಂಡ ಈ ತಪ್ಪಿನಿಂದ ಬಲವಾದ ಪೆಟ್ಟು ಬಿದ್ದಿದೆ. 
 

SCROLL FOR NEXT