ವಿದೇಶ

'ಕಾಶ್ಮೀರ 'ಮಧ್ಯಸ್ಥಿಕೆ' ವಿಷಯವನ್ನು ಕೈಬಿಟ್ಟ ಡೊನಾಲ್ಡ್ ಟ್ರಂಪ್'

Srinivas Rao BV

ವಾಷಿಂಗ್ ಟನ್: ಭಾರತೀಯ ರಾಯಾಭಾರಿ ಅಧಿಕಾರಿ ಹರ್ಷ ವರ್ಧನ್ ಶ್ರಿಂಗ್ಲಾ ಈ ಬಗ್ಗೆ ಮಾಹಿತಿ ನೀಡಿದ್ದು, ಇನ್ನು ಕಾಶ್ಮೀರ ಮಧ್ಯಸ್ಥಿಕೆ ವಿಷಯವನ್ನು ಕೈಬಿಡುವುದಾಗಿ ಹೇಳಿದ್ದಾರೆಂದು ತಿಳಿಸಿದ್ದಾರೆ. 

"ಮಧ್ಯಸ್ಥಿಕೆ ಇಲ್ಲ, ಆದರೆ ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆ ಮೂಲಕವೇ ಸಮಸ್ಯೆ ಬಗೆಹರಿಸಿಕೊಳ್ಳಬೇಕೆಂಬುದು ಅಮೆರಿಕದ  ದಶಕಗಳ ನಿಲುವಾಗಿದೆ". ಅಮೆರಿಕ ಮಧ್ಯಸ್ಥಿಕೆ ವಹಿಸುವುದು ಭಾರತ-ಪಾಕಿಸ್ತಾನದ ಮೇಲೆ ಅವಲಂಬಿಸಿದೆ, ಭಾರತ ಕಾಶ್ಮೀರದ ವಿಷಯದಲ್ಲಿ ಮಧ್ಯಸ್ಥಿಕೆ ಅಗತ್ಯವಿಲ್ಲವೆಂದು ಹೇಳಿದ್ದು, ಆ ವಿಷಯವನ್ನು ಕೈಬಿಡುವುದಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ ಎಂದು ಶ್ರಿಂಗ್ಲಾ  ಫಾಕ್ಸ್ ನ್ಯೂಸ್ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ. 

ಜು.22 ರಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಶ್ವೇತ ಭವನದಲ್ಲಿ ಟ್ರಂಪ್ ಜೊತೆ ಮಾತನಾಡಿದ್ದಾಗ, ಡೊನಾಲ್ಡ್  ಟ್ರಂಪ್ ಕಾಶ್ಮೀರ ವಿಷಯದ ಮಧ್ಯಸ್ಥಿಕೆಯ ಪ್ರಸ್ತಾವನೆಯನ್ನು ಮುಂದಿಟ್ಟಿದ್ದರು. ಟ್ರಂಪ್ ಹೇಳಿಕೆಗೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿತ್ತು.
 

SCROLL FOR NEXT