ವಿದೇಶ

ಆರ್ಟಿಕಲ್ 370 ರದ್ದು: ಭಾರತದ ರಾಯಭಾರಿ ಖಡಕ್ ಉತ್ತರಕ್ಕೆ ಪಾಕ್ ಪತ್ರಕರ್ತರು ಕಕ್ಕಾಬಿಕ್ಕಿ, ವಿಡಿಯೋ ವೈರಲ್!

Vishwanath S

ನ್ಯೂಯಾರ್ಕ್: ಆರ್ಟಿಕಲ್ 370 ರದ್ದು ವಿರೋಧಿಸಿದ್ದ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ತೀವ್ರ ಮುಖಭಂಗವಾಗಿದ್ದು ಈ ನಡುವೆ ಭಾರತದ ರಾಯಭಾರಿಯ ಖಡಕ್ ಉತ್ತರಕ್ಕೆ ಪಾಕ್ ಪತ್ರಕರ್ತರು ಕಕ್ಕಾಬಿಕ್ಕಿಯಾಗಿರುವ ವಿಡಿಯೋ ಇದೀಗ ವೈರಲ್ ಆಗಿದೆ. 

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಕುರಿತಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಗೌಪ್ಯ ಸಭೆ ನಡೆಸಲಾಯಿತು. ಈ ವೇಳೆ ಪಾಕಿಸ್ತಾನ ಏಕಾಂಗಿಯಾಗಿ ನಿಲ್ಲುವಂತಾಯಿತು. ಅಲ್ಲದೆ ಈ ಸಭೆಯಲ್ಲಿ  ಪ್ರಮುಖ ಭದ್ರತಾ ಸದಸ್ಯ ರಾಷ್ಟ್ರಗಳು ಇದು ಆತಂಕರಿ ವಿಚಾರ ಎಂದು ಸುಮ್ಮನಾದವು. 

ವಿಶ್ವಸಂಸ್ಥೆಯ ಭಾರತದ ರಾಯಭಾರಿ ಸೈಯದ್ ಅಕ್ಬರುದ್ದೀನ್ ಅವರು ಸುದ್ಧಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ್ದು ಆರ್ಟಿಕಲ್ 370 ರದ್ದು ಇದು ಭಾರತದ ಆಂತರಿಕ ವಿಷಯ. ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿಗೆ ಪೂರಕವಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇದರಿಂದ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಆದರೂ ಚೀನಾ ಈ ವಿಚಾರವನ್ನು ಜಾಗತಿಕ ಮಟ್ಟದಲ್ಲಿ ಪ್ರಸ್ತಾಪಿಸುತ್ತಿದೆ. ಚೀನಾ ಅಭಿಪ್ರಾಯವು ಜಾಗತಿಕ ಅಭಿಪ್ರಾಯವಲ್ಲ ಎಂದು ಹೇಳಿದರು. 

ಅಕ್ಬರುದ್ದೀನ್ ಉತ್ತರಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲೂ ಪಾಕ್ ಪತ್ರಕರ್ತರಿಗೆ ಕೈ ಕುಲುಕಿ ವ್ಯಂಗ್ಯವಾಗಿ ಕುಟುಕಿದ ವಿಡಿಯೋಗೆ ಭಾರತೀಯರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. 

SCROLL FOR NEXT