ವಿದೇಶ

ಬೆದರಿಕೆಗಳಿಗೆ ಹೆದರುವುದಿಲ್ಲ, ಅಮೆರಿಕಾ ಕಂಪನಿಗಳು ಹೊರಹೋದರೆ ಇತರರು ತುಂಬುತ್ತಾರೆ: ಚೀನಾ

Srinivasamurthy VN

ಬೀಜಿಂಗ್: ಚೀನಾ ವಸ್ತುಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸುವ ಅಮೆರಿಕದ ನಿರ್ಧಾರದ ವಿರುದ್ಧ  ಚೀನಾ ಸೋಮವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಬೆದರಿಕೆಗಳು ಏನೂ ಫಲಿತಾಂಶ ನೀಡಲಾರವು ಎಂದು ಹೇಳಿದೆ. 

ವಿದೇಶಾಂಗ  ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಇಲ್ಲಿಗೆ ಭೇಟಿ ನೀಡಿದ ಸುದ್ದಿಗಾರರೊಂದಿಗೆ ಮಾತನಾಡಿ, ಇತ್ತೀಚಿನ  ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಮೆರಿಕ ಕಂಪೆನಿಗಳು ಚೀನಾದಿಂದ ಹಿಂದೆ ಸರಿದರೆ ಬೇರೊಬ್ಬರು ಅದನ್ನು ತುಂಬುತ್ತಾರೆ ಎಂದು ಹೇಳಿದ್ದಾರೆ. 

ಹೆಚ್ಚುವರಿ ಸುಂಕದ ಬಗ್ಗೆ ಇತ್ತೀಚಿಗೆ ಎರಡೂ ದೇಶಗಳು ನಿರ್ಧಾರಗಳನ್ನು ತೆಗೆದುಕೊಂಡ ನಂತರ ಅಮೆರಿಕದಿಂದಲೇ ಹೆಚ್ಚಿನ ಬೆದರಿಕೆಗಳು ಕೇಳಿ ಬರುತ್ತಿವೆ. ಹೆಚ್ಚುವರಿ ಸುಂಕಗಳು ರಾಜಕೀಯ ಘೋಷಣೆಗಳಾಗಿ ಬದಲಾಗಿವೆ ಎಂದು ಅವರು ಹೇಳಿದ್ದಾರೆ.

SCROLL FOR NEXT