ಸಂಗ್ರಹ ಚಿತ್ರ 
ವಿದೇಶ

ಇಮ್ರಾನ್ ಖಾನ್ ನಮ್ಮನ್ನು ಕಾಪಾಡಿ: ಸಿಖ್ ಯುವತಿಯನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ!

ಮುಸ್ಲಿಂ ಯುವಕನೊಂದಿಗೆ ಮದುವೆ ಮಾಡಿಸಲು ಬಲವಂತವಾಗಿ ಸಿಖ್ ಯುವತಿಯನ್ನು ಇಸ್ಲಾಂ ಮತಾಂತರ ಮಾಡಲಾಗಿದ್ದು ನಮಗೆ ಸಹಾಯ ಮಾಡಿದ ಎಂದು ಸಂತ್ರಸ್ತ ಯುವತಿಯ ಪೋಷಕರು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬೇಡಿಕೊಂಡಿದ್ದಾರೆ.

ಲಾಹೋರ್: ಮುಸ್ಲಿಂ ಯುವಕನೊಂದಿಗೆ ಮದುವೆ ಮಾಡಿಸಲು ಬಲವಂತವಾಗಿ ಸಿಖ್ ಯುವತಿಯನ್ನು ಇಸ್ಲಾಂ ಮತಾಂತರ ಮಾಡಲಾಗಿದ್ದು ನಮಗೆ ಸಹಾಯ ಮಾಡಿದ ಎಂದು ಸಂತ್ರಸ್ತ ಯುವತಿಯ ಪೋಷಕರು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬೇಡಿಕೊಂಡಿದ್ದಾರೆ.

ಲಾಹೋರ್ ನ ನನ್ಕಾನ ಸಾಹೀಬ್ ಪ್ರದೇಶದಲ್ಲಿ ಕೆಲ ದಿನಗಳ ಹಿಂದೆ ಗುರುದ್ವಾರ ತಂಬು ಸಾಹೀಬ್ ನ ಪಾದ್ರಿ ಭಗವಾನ್ ಸಿಂಗ್ ರ 19 ವರ್ಷದ ಜಗಜೀತ್ ಕೌರ್ ಎಂಬಾಕೆ ನಾಪತ್ತೆಯಾಗಿದ್ದಳು. ಆಕೆಯನ್ನು ಗನ್ ಪಾಯಿಂಟ್ ನಲ್ಲಿ ಇಸ್ಲಾಂಗೆ ಮತಾಂತರ ಮಾಡಿ ಮುಸ್ಲಿಂ ಯುವಕನೊಂದಿಗೆ ಮದುವೆ ಮಾಡಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. 

ತಮ್ಮ ಮಗಳನ್ನು ಬಿಡಿಸಿಕೊಡದಿದ್ದರೆ ನಾವು ಪಂಜಾಬ್ ಗೌವರ್ನರ್ ಮನೆ ಮುಂದೆ ಕುಟುಂಬ ಸಮೇತರಾಗಿ ಸ್ವಯಂ ಪ್ರೇರಿತರಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಇದರ ಜೊತೆಗೆ ತಮ್ಮ ಪುತ್ರಿ ಸುರಕ್ಷಿತವಾಗಿ ಹಿಂದಿರುಗುವಂತೆ ಮಾಡಿ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮತ್ತು ಪಾಕಿಸ್ತಾನ ಮುಖ್ಯ ನ್ಯಾಯಾಧೀಶ ಆಸೀಫ್ ಸಯೀದ್ ಅವರಿಗೆ ಮನವಿ ಮಾಡಿದ್ದಾರೆ. 

ಜಗಜೀತ್ ಕೌರ್ ಸಹೋದರ ಸುರೀಂದರ್ ಸಿಂಗ್ ಕೆಲ ಆಗುಂತಕರು ಮನೆಗೆ ಬಂದು ತಮ್ಮನ್ನು ಹಿಂಸಿಸಿ ಬಲವಂತವಾಗಿ ತನ್ನ ಸಹೋದರಯನ್ನು ಹೆದರಿಸಿ ಇಸ್ಲಾಂಗೆ ಮತಾಂತರ ಮಾಡಿದರು ಎಂದು ದೂರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!