ವಿದೇಶ

ಪಿಎನ್‌ಬಿ ಹಗರಣ: ಜ.2ಕ್ಕೆ ನ್ಯಾಯಾಲಯಕ್ಕೆ ಹಾಜರಾಗಿ- ನೀರವ್ ಮೋದಿಗೆ ಯುಕೆ ಕೋರ್ಟ್ ನಿರ್ದೇಶನ

Raghavendra Adiga

ಲಂಡನ್: ಸುಮಾರು 2 ಬಿಲಿಯನ್ ಯುಎಸ್ಡಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ವಂಚನೆ ಮತ್ತು ಮನಿ ಲಾಂಡರಿಂಗ್ ಪ್ರಕರಣದ ಆರೋಪ ಹೊತ್ತಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಅವರಿಗೆ ಜನವರಿ 2 ರಂದು ವಿಡಿಯೋಲಿಂಕ್ ಮೂಲಕ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ. 

ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಲಂಡನ್ನಿನ ವಾಂಡ್ಸ್ವರ್ತ್ ಜೈಲಿನಿಂದ 28 ದಿನಗಳ ನಿಯಮಿತ "ಕಾಲ್-ಓವರ್" ಅಪಿಯರೆನ್ಸ್ ಗಾಗಿ ನೀರವ್ ಮೋದಿ ಇಂದು ಹಾಜರಾಗಿದ್ದರು. ಆ ವೇಳೆ ನ್ಯಾಯಾಧೀಶ ಗರೆಥ್ ಬ್ರಾನ್ಸ್ಟನ್ ನೀರವ್ ಮೋದಿ ಹಸ್ತಾಂತರವು ಬರುವ ವರ್ಷ ಮೇ ಮೇ 11 ರಂದು ಪ್ರಾರಂಭವಾಗಲಿದೆ ಮತ್ತು ಐದು ದಿನಗಳಲ್ಲಿ ಪ್ರಕ್ರಿಯೆ ಪೂರ್ಣವಾಗಲಿದೆ ಎಂದು ಪುನರುಚ್ಚರಿಸಿದರು.

2020 ರ ಜನವರಿ 2 ರಂದು ಮೋದಿ ವಿಡಿಯೋಲಿಂಕ್ ಮೂಲಕ ನ್ಯಾಯಾಲಯದಲ್ಲಿ ಹಾಜರಾಗಬೇಕೆಂದು ನ್ಯಾಯಾಧೀಶರು ನಿರ್ದೇಶಿಸಿದ್ದಾರೆ.ಏತನ್ಮಧ್ಯೆ, ಅವರು ಪ್ರತಿ 28 ದಿನಗಳಿಗೊಮ್ಮೆ ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಸೂಚಿಸಲಾಗಿದೆ.

48 ವರ್ಷದ ನೀರವ್ ಮೋದಿ  ಕಳೆದ ತಿಂಗಳು ಮತ್ತೊಂದು ಜಾಮೀನು ಅರ್ಜಿ ಸಲ್ಲಿಸಿದ್ದು ಅದೂ ಸಹ ನ್ಯಾಯಾಲಯದಲ್ಲಿ ತಿರಸ್ಕೃತವಾಗಿತ್ತು.

SCROLL FOR NEXT