ವಿದೇಶ

ಭಾರತೀಯ ಶೈಲಿ ಉಡುಪು ಧರಿಸಿ ನೊಬೆಲ್ ಬಹುಮಾನ ಸ್ವೀಕರಿಸಿದ ಅಭಿಷೇಕ್ ಬ್ಯಾನರ್ಜಿ ದಂಪತಿ

Raghavendra Adiga

ಸ್ಟಾಕ್‌ಹೋಮ್: ಭಾರತೀಯ-ಅಮೇರಿಕನ್ ಅರ್ಥಶಾಸ್ತ್ರಜ್ಞಅಭಿಜಿತ್ ಬ್ಯಾನರ್ಜಿ ಮತ್ತು ಅವರ ಫ್ರೆಂಚ್-ಅಮೆರಿಕನ್ ಪತ್ನಿ ಎಸ್ತರ್ ಡುಫ್ಲೋ ಇನ್ನೋರ್ವ ಅರ್ಥಶಾಸ್ತ್ರಜ್ಞ  ಮೈಕೆಲ್ ಕ್ರೆಮರ್ ಅವರುಗಳಿಗೆ  2019 ರಲ್ಲಿ ಆರ್ಥಿಕ ವಿಜ್ಞಾನದ ನೊಬೆಲ್ ಪ್ರಶಸ್ತಿಯನ್ನು ಮಂಗಳವಾರ ಪ್ರಧಾನ ಮಾಡಲಾಗಿದೆ.

ಜಾಗತಿಕ ಬಡತನವನ್ನು ಹೋಗಲಾಡಿಸುವ ಕಾರ್ಯಕ್ಕಾಗಿ ಲಕ್ಷಾಂತರ ಮಕ್ಕಳಿಗೆ ಪ್ರಾಯೋಗಿಕ ವಿಧಾನದಲ್ಲಿ ಸಹಾಯ ಮಾಡಿದ ಈ ತ್ರಿವಳಿ ಅರ್ಥಶಾಸ್ತ್ರಜ್ಞರ ಸಿದ್ದಾಂತಗಳನ್ನು ಮೆಚ್ಚಿ ಈ ಸಾಲಿನ ನೊಬೆಲ್ ಬಹುಮಾನ ಸಂದಿದೆ.

ಪ್ರಶಸ್ತಿ ಪ್ರಧಾನ ವೇದಿಕೆಗೆ ಅಭಿಜಿತ್ ಬ್ಯಾನರ್ಜಿ ದಂಪತಿಗಳು ಧೋತಿ, ಕುರ್ತಾ, ಹಾಗೂ ಸೀರೆಯನ್ನುಟ್ಟು ಆಗಮಿಸಿದ್ದು ವಿಶೇಷ ಮೆಚ್ಚುಗೆಗೆ ಪಾತ್ರವಾಗಿದೆ. ಸ್ಟಾಕ್‌ಹೋಮ್ ಕನ್ಸರ್ಟ್ ಹಾಲ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭಕ್ಕಾಗಿ ದಂಪತಿಗಳು ಭಾರತೀಯ ಶೈಲಿಯ ಉಡುಪು ಧರಿಸಿ ಬಂದಿದ್ದರು.

 "ವೀಕ್ಷಿಸಿ ಅಭಿಜಿತ್ ಬ್ಯಾನರ್ಜಿ, ಎಸ್ತರ್ ಡುಫ್ಲೋ ಮತ್ತು ಮೈಕೆಲ್ ಕ್ರೆಮರ್ ಅವರು ಇಂದುನೊಬೆಲ್ ಪ್ರೈಜ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಮ್ಮ ಪದಕಗಳನ್ನು ಮತ್ತು ಗೌರವ ಪ್ರಮಾಣಪತ್ರವನ್ನು ಸ್ವೀಕರಿಸಿದ್ದಾರೆ. ಅಭಿನಂದನೆಗಳು! ಜಾಗತಿಕ ಬಡತನವನ್ನು ಹೋಗಲಾಡಿಸುವ ಪ್ರಾಯೋಗಿಕ ವಿಧಾನಕ್ಕಾಗಿ ಅವರಿಗೆ 2019 ರಲ್ಲಿ ಆರ್ಥಿಕ ವಿಜ್ಞಾನ ಪ್ರಶಸ್ತಿಯನ್ನು ನೀಡಲಾಯಿತು" ಎಂದು ನೊಬೆಲ್ ಪ್ರಶಸ್ತಿ ಆಯ್ಕೆ ಸಮಿತಿ ಟ್ವೀಟ್ ಮಾಡಿದೆ.

SCROLL FOR NEXT