ಜೋ ವಿಲ್ಸನ್ 
ವಿದೇಶ

ಮೋದಿ  ಕ್ರಮ  ಕೊಂಡಾಡಿದ ಅಮೆರಿಕ ಕಾಂಗ್ರೆಸ್ ಸದಸ್ಯ ಜೋ ವಿಲ್ಸನ್

ಜಮ್ಮು ಕಾಶ್ಮಿರಕ್ಕೆ ನೀಡಲಾಗಿದ್ದ  ವಿಶೇಷ ಸ್ಥಾನಮಾನ ವಾಪಸ್  ತೆಗೆದುಕೊಂಡ ಕ್ರಮವನ್ನು ಅಮೆರಿಕ ಕಾಂಗ್ರೆಸ್ ಸದಸ್ಯ ಜೋ ವಿಲ್ಸನ್ ಬೆಂಬಲಿಸಿದ್ದು,  ಉತ್ತಮ ಆಡಳಿತ ಮತ್ತು ಸಾಮಾಜಿಕ-ಆರ್ಥಿಕ ಬೆಳವಣಿಗೆ ಇದು ಕಾರಣವಾಗಲಿದೆ ಎಂದು ಹಾಡಿ ಹೊಗಳಿದ್ದಾರೆ

ವಾಷಿಂಗ್ಟನ್:  ಜಮ್ಮು ಕಾಶ್ಮಿರಕ್ಕೆ ನೀಡಲಾಗಿದ್ದ  ವಿಶೇಷ ಸ್ಥಾನಮಾನ ವಾಪಸ್  ತೆಗೆದುಕೊಂಡ ಕ್ರಮವನ್ನು ಅಮೆರಿಕ ಕಾಂಗ್ರೆಸ್ ಸದಸ್ಯ ಜೋ ವಿಲ್ಸನ್ ಬೆಂಬಲಿಸಿದ್ದು,  ಉತ್ತಮ ಆಡಳಿತ ಮತ್ತು ಸಾಮಾಜಿಕ-ಆರ್ಥಿಕ ಬೆಳವಣಿಗೆ ಇದು ಕಾರಣವಾಗಲಿದೆ ಎಂದು ಹಾಡಿ ಹೊಗಳಿದ್ದಾರೆ. ಇದಕ್ಕಾಗಿ ಅವರಿಗೆ ಭಾರತೀಯ ರಾಯಭಾರಿ ಹರ್ಷ್ ವರ್ಧನ್ ಶ್ರೀಂಗ್ಲಾ ಅವರು ಧನ್ಯವಾದ ಹೇಳಿದ್ದಾರೆ. 

ಕೇಂದ್ರ ಹೊಸ ಚಿಂತನೆ, ಹೊಸ ಮಾದರಿ. ಹೊಸ ಕ್ರಮ ಅಭಿವೃದ್ದಿಗೆ ಪೂರಕ ಎಂದು ವಿಲ್ಸನ್ ಹೇಳಿರುವುದನ್ನು ಭಾರತ ಮುಕ್ತ ಕಂಠದಿಂದ ಸ್ವಾಗತಿಸಿದೆ. 

"ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನಲ್ಲಿ ಕಾಂಗ್ರೆಸ್ ಸದಸ್ಯ ಜೋ ವಿಲ್ಸನ್ ಈ ವಿಷಯ ಕುರಿತು ಮಾತಾಡಿ,   ಮತ್ತು ಭಾರತ-ಅಮೆರಿಕ  ಸಂಬಂಧಗಳ ಸುಧಾರಣೆಗೆ  ಬಲವಾದ ಬೆಂಬಲ  ವ್ಯಕ್ತಪಡಿಸಿದ್ದಾರೆ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಉತ್ತಮ ಆಡಳಿತ, ಅಭಿವೃದ್ಧಿ ಮಾಡಲು  ಭಾರತದ ಇತ್ತೀಚಿನ ಪ್ರಯತ್ನಕ್ಕೆ ಬೆಂಬಲ ನೀಡಿರುವುದಕ್ಕಾಗಿ ಅವರಿಗೆ ಧನ್ಯವಾದಗಳು ಎಂದು  ಅವರು ಟ್ವೀಟ್ ಮಾಡಿದ್ದಾರೆ.

370 ನೇ ವಿಧಿಯನ್ನು ರದ್ದುಗೊಳಿಸುವ  ಸರ್ಕಾರದ ನಿರ್ಧಾರವು ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸಲು, ಭ್ರಷ್ಟಾಚಾರದ ವಿರುದ್ಧ ಹೋರಾಡಲು ಮತ್ತು ಧಾರ್ಮಿಕ ತಾರತಮ್ಯವನ್ನು ಕೊನೆಗಾಣಿಸಲು  ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನ ಬೆಂಬಲಿಸುವುದಾಗಿಯೂ ಹೇಳಿದ್ದಾರೆ.

ಭಾರತ ಆಗಸ್ಟ್ 5 ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡು ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆ ಮಾಡಿತ್ತು . 

ವಿಲ್ಸನ್ ಅವರ ಇತ್ತೀಚಿನ ಭಾರತ ಭೇಟಿಯನ್ನು ಭಾರತೀಯ ರಾಯಬಾರಿ ಉಲ್ಲೇಖಿಸಿ  ಹೊಸ ಕ್ರಮಗಳನ್ನು ಶ್ಲಾಘಿಸಿದ್ದಾರೆ. 

ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವ ವ್ಯವಸ್ಥೆ  ಭಾರತದಲ್ಲಿ  ಯಶಸ್ವಿಯಾಗುವುದನ್ನು ನೋಡುವ ಅಮೆರಿಕನ್ನರ  ಬೆಂಬಲಕ್ಕೆ ಕೃತಜ್ಞರಾಗಿರುವುದಾಗಿ ಹೇಳಿದ್ದಾರೆ. 

"ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸ್ವಾತಂತ್ರ್ಯ ದಿನಾಚರಣೆ ಮಾಡಿದ ಭಾಷಣ ಸ್ಪೂರ್ತಿದಾಯಕವಾಗಿತ್ತು ಎಂದು ವಿಲ್ಸನ್ ಮೋದಿಯವರ ಕ್ರಮವನ್ನು ಹಾಡಿ ಹೊಗಳಿದ್ದಾರೆ. 

ಸೆಪ್ಟೆಂಬರ್ ನಲ್ಲಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ಮೋದಿಯವರನ್ನು ಹೌಡಿ ಮೋದಿ ಸ್ವಾಗತಿಸಲು  ಹೂಸ್ಟನ್  ಭೇಟಿಯಾಗಿರುವುದು ಉತ್ತಮ ಬೆಳವಣಿಗೆ ಯಾಗಿದೆ  ಎಂದು ಹೇಳಿದ್ದಾರೆ. 

ವಿಲ್ಸನ್ ಅವರು ಭಾರತದೊಂದಿಗೆ ದೀರ್ಘಕಾಲ ಸಂಬಂಧ ಹೊಂದಿದ್ದು,  ಭಾರತದ ಹಿತಾಸಕ್ತಿಗಳಿಗೆ ಸಂಬಂಧಿಸಿದ ವಿಷಯ ಬಗ್ಗೆ ಮಾತನಾಡುತ್ತಿರುವುದು  ಭಾರತದ ಬಗ್ಗೆ ಅವರಿಗೆ ಇರುವ ನಿಜವಾದ ಕಾಳಜಿ ತೋರುತ್ತಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT