ವಿದೇಶ

ಮಲಾಲಾಗೆ ವಿಶ್ವಸಂಸ್ಥೆಯಿಂದ ಮತ್ತೊಂದು ಮಹತ್ವದ ಗೌರವ

Nagaraja AB

ನ್ಯೂಯಾರ್ಕ್:  ನೊಬೆಲ್  ಶಾಂತಿ   ಪ್ರಶಸ್ತಿ  ಪುರಸ್ಕೃತೆ   ಪಾಕಿಸ್ತಾನದ ಕಿರಿಯ ಮಾನವ ಹಕ್ಕುಗಳ ಹೋರಾಟಗಾರ್ತಿ  ಮಲಾಲಾ ಯೂಸಫ್ ಝೈ  ಮತ್ತೊಂದು  ಮಹತ್ವದ  ಗೌರವಕ್ಕೆ  ಭಾಜನರಾಗಿದ್ದಾರೆ. 

ಜಗತ್ ಪ್ರಸಿದ್ದ  ಟೀನೆಜ್  ಯುವತಿಯೆಂದು  ಆಕೆಯನ್ನು  ಪರಿಗಣಿಸಲಾಗಿದೆ. ೨೧ ನೇ ಶತಮಾನದ ಎರಡನೇ ದಶಕದಲ್ಲಿ,   ಪ್ರಸಿದ್ದ  ಟೀನೇಜರ್ ಆಗಿ ಮಲಾಲಾ  ಆಯ್ಕೆಯಾಗಿದ್ದು, ೨೦೧೦ ರಿಂದ ೨೦೧೯ ರ ಮಧ್ಯ ಕಾಲದಲ್ಲಿ  ಮಲಾಲಾ ಗೆ   ದೊರೆತ  ಮಾನ್ಯತೆ ಆಧಾರದ ಮೇಲೆ ವಿಶ್ವಸಂಸ್ಥೆ   ಈ  ಗೌರವವನ್ನು  ನೀಡಿದೆ. 

ಈ ಸಂಬಂಧ ವಿಶ್ವಸಂಸ್ಥೆ  ಗುರುವಾರ ಹೇಳಿಕೆ ನೀಡಿದೆ. ಪಾಕಿಸ್ತಾನದಲ್ಲಿ ಬಾಲಕಿಯರ ಶಿಕ್ಷಣಕ್ಕಾಗಿ ಮಲಾಲಾ ನಡೆಸಿರುವ  ಹೋರಾಟವನ್ನುವಿಶ್ವಸಂಸ್ಥೆ   ಸ್ಮರಿಸಿದೆ.   

ಪುಟ್ಟ ವಯಸ್ಸಿನಿಂದಲೂ ಮಲಾಲಾ ಬಾಲಕಿಯರ ಶಿಕ್ಷಣದ ಬಗ್ಗೆ ಮಾತನಾಡಿದ್ದಾರೆ ಮತ್ತು ತಾಲಿಬಾನ್ ವಿರುದ್ಧ ಹೋರಾಡಿದ್ದಾರೆ. ಈ ಪ್ರಯತ್ನಗಳಿಗಾಗಿ  ಆಕೆಗೆ ೨೦೧೪ ರಲ್ಲಿ ನೊಬೆಲ್  ಶಾಂತಿ ಪುರಸ್ಕಾರ, ೨೦೧೭ ರಲ್ಲಿ  ವಿಶ್ವಸಂಸ್ಥೆ  ಕಿರಿಯ ಶಾಂತಿದೂತೆ ಎಂದೂ ಹೆಸರಿಸಲಾಗಿತ್ತು

SCROLL FOR NEXT