ಬ್ರೆಜಿಲ್: ಬೃಹತ್ ಡ್ಯಾಮ್ ವೊಂದು ಒಡೆದ ಪರಿಣಾಮ 110 ಮಂದಿ ಸಾವನ್ನಪ್ಪಿದ ಭಯಾನಕ ವಿಡಿಯೋ ಸದ್ಯ ವೈರಲ್ ಆಗಿದೆ.
ಕಳೆದ ಜ. 25ರಂದು ಬ್ರೆಜಿಲ್ ನ ಮಿನಾಸ್ ಗಿರೈಸ್ ಪ್ರದೇಶದಲ್ಲಿರುವ ಗಣಿಗಾರಿಕೆಯ ಅಣೆಕಟ್ಟು ಒಡೆದು ಭೀಕರತೆ ಸೃಷ್ಟಿಸಿತ್ತು. ಏಕಾಏಕಿ ಅಣೆಕಟ್ಟು ಒಡೆದ ಪರಿಣಾಮ ಗಣಿಗಾರಿಕೆ ಪ್ರದೇಶಕ್ಕೆ ನೀರು ನುಗ್ಗಿದ ಪರಿಣಾಮ ಸ್ಥಳದಲ್ಲಿದ್ದ 110 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದು 238 ಮಂದಿ ಕಾಣೆಯಾಗಿದ್ದರು. ಈ ಭಯಾನಕ ದೃಶ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸ್ಥಳೀಯ ಮಾಧ್ಯಮವೊಂದು ಈ ವಿಡಿಯೋವನ್ನು ಪ್ರಸಾರ ಮಾಡಿದೆ. ವಿಡಿಯೋದಲ್ಲಿ ನೀರು ನುಗ್ಗುತ್ತಿದ್ದಂತೆ ಸ್ಥಳದಲ್ಲಿದ್ದವರು ಪ್ರಾಣ ಉಳಿಸಿಕೊಳ್ಳಲು ಓಡುತ್ತಿರುವ ಹಾಗೂ ಕಾರು ಲಾರಿಗಳು ಸ್ಥಳದಿಂದ ದೂರ ಹೋಗಲು ಪ್ರಯತ್ನಿಸುತ್ತಿರುವ ದೃಶ್ಯಗಳು ಸೆರೆಯಾಗಿದೆ.