ವಿದೇಶ

2019 ಲೋಕಸಭೆ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ: ಭಾರತದ ಇತಿಹಾಸದಲ್ಲೇ ಅತಿ ವೆಚ್ಚದಾಯಕ

Shilpa D
ವಾಷಿಂಗ್ಟನ್: 2019ರ ಲೋಕಸಭೆ ಚುನಾವಣೆ ಭಾರತದ ಇತಿಹಾಸದಲ್ಲೇ ಅತ್ಯಂತ ವೆಚ್ಚದಾಯಕವಾದ ಚುನಾವಣೆಯಾಗಲಿದೆ ಎಂದು ಅಮೆರಿಕಾ ಮೂಲದ ಚುನಾವಣಾ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಪ್ರಜಾಪ್ರಭುತ್ವ ಅತ್ಯಂತ ದೊಡ್ಡ ದೇಶವಾಗಿರುವ ಭಾರತದಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆ ಅತಿ ದುಬಾರಿಯಾಗಲಿದೆ. 543 ಲೋಕಸಭೆ ಕ್ಷೇತ್ರಗಳಿಗೆ  ಭಾರತೀಯ ಚುನಾವಣಾ ಆಯೋಗ ಅತಿ ಶೀಘ್ರದಲ್ಲೇ ಚುನವಾಣೆ ಘೋಷಿಸಲಿದೆ.
2016 ರಲ್ಲಿ ನಡೆದ ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ 6.5 ಬಿಲಿಯನ್ ಡಾಲರ್ ಹಣ ಖರ್ಚಾಗಿತ್ತು,  2014ರ ಭಾರತದ ಲೋಕಸಭೆ ಚುನಾವಣೆಯಲ್ಲಿ  5 ಸಾವಿರ ಮಿಲಿಯನ್ ಹಣ ವೆಚ್ಚವಾಗಿತ್ತು.  ಆದರೆ ಈ ಬಾರಿಯ ಲೋಕಸಭೆ ಚುನಾವಣೆ ಪ್ರಪಂಚದಲ್ಲಿ ಅತ್ಯಂತ ದುಬಾರಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಬಿಜೆಪಿ ಮತ್ತು ವಿರೋಧ ಪಕ್ಷಗಳ ನಡುವಿನ  ಅನಿಶ್ಚಿತತೆಯಿಂದಾಗಿ ಎರಡು ಬಣದವರು ಹೆಚ್ಚಿನ ಹಣ ಖರ್ಚು ಮಾಡಲಿದ್ದಾರೆ  ಕಾರ್ನಿಜಿ ಎಂಡೋಮೆಂಟ್ ಫಾರ್ ಇಂಟರ್‌ನ್ಯಾಷನಲ್ ಪೀಸ್'ನ ದಕ್ಷಿಣ ಏಶ್ಯಾ ವಿಭಾಗದ ನಿರ್ದೇಶಕ ಮಿಲನ್ ವೈಷ್ಣವ್ ತಿಳಿಸಿದ್ದಾರೆ.
ಪ್ರತಿ ವರ್ಷ ಚುನಾವಣೆಗಾಗಿ ಖರ್ಚು ಮಾಡುವ ಹಣದ ಪ್ರಮಾಣ ಹೆಚ್ಚಾಗುತ್ತಿದೆ. ಹೀಗಾಗಿ ಈ ಬಾರಿಯ ಚುನಾವಣೆಯು ಕೂಡ ಅತ್ಯಂತ ದುಬಾರಿಯಾಗಲಿದೆ ಎಂದು ತಿಳಿಸಿದ್ದಾರೆ.
SCROLL FOR NEXT