ಸಂಗ್ರಹ ಚಿತ್ರ 
ವಿದೇಶ

ಪಾಕ್ ಯುವಕನಿಂದ ಟ್ವಿಟ್ಟರ್ ​ನಲ್ಲಿ ಫೇಕ್​ ವಿಡಿಯೋ; ಮತ್ತೆ ವೈರಲ್ ಆಯ್ತು ಬೆಂಗಳೂರು ಏರ್ ಷೋ ದುರಂತದ ವಿಡಿಯೋ

ಪಾಕಿಸ್ತಾನದ ಯುವಕನೋರ್ವ ಬೆಂಗಳೂರು ಏರ್ ಶೋ ದುರಂತದ ವಿಡಿಯೋ ಅಪ್ಲೋಡ್ ಮಾಡಿ ಇದು ಪಾಕ್ ವಾಯುಸೇನೆ ಹೊಡೆದುರುಳಿಸಿದ ಭಾರತೀಯ ಪೈಲಟ್ ಎಂದು ಹೇಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ನಗೆಪಾಟಲಿಗೆ ಈಡಾಗಿದ್ದಾನೆ.

ನವದೆಹಲಿ: ಪಾಕಿಸ್ತಾನದ ಯುವಕನೋರ್ವ ಬೆಂಗಳೂರು ಏರ್ ಶೋ ದುರಂತದ ವಿಡಿಯೋ ಅಪ್ಲೋಡ್ ಮಾಡಿ ಇದು ಪಾಕ್ ವಾಯುಸೇನೆ ಹೊಡೆದುರುಳಿಸಿದ ಭಾರತೀಯ ಪೈಲಟ್ ಎಂದು ಹೇಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ನಗೆಪಾಟಲಿಗೆ ಈಡಾಗಿದ್ದಾನೆ.
ಹೌದು... ಭಾರತೀಯ ವಾಯುಸೇನೆ ಏರ್ ಸ್ಟ್ರೈಕ್ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಮುಜುಗರಕ್ಕೀಡಾಗಿರುವ ಪಾಕಿಸ್ತಾನ ಮುಜುಗರ ತಪ್ಪಿಸಿಕೊಳ್ಳಲು ಮತ್ತು ತಾನೂ ಕೂಡ ಭಾರತದಷ್ಟೇ ಬಲಿಷ್ಠ ಎಂದು ತೋರಿಸಿಕೊಳ್ಳಲು ಹೋಗಿ ಅಕ್ಷರಶಃ ನಗೆಪಾಟಲಿಗೀಡಾಗುತ್ತಿದೆ. ಇದೇ ಕಾರಣಕ್ಕೆ ಇಂದು ಭಾರತೀಯ ಪೋಸ್ಟ್ ಗಳ ಮೇಲೆ ವಾಯುದಾಳಿ ಮಾಡುವ ರೀತಿ ಬಿಂಬಿಸಿ ಖಾಲಿ ಸ್ಥಳದಲ್ಲಿ ಬಾಂಬ್ ಹಾಕಿ ಹಿಂದುರಿಗಿತ್ತು. ಅಲ್ಲದೆ ತಾನೂ ಕೂಡ ಭಾರತದ 2 ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದಾಗಿ ಘೋಷಣೆ ಮಾಡಿತ್ತು.
ಆದರೀಗ ಪಾಕಿಸ್ತಾನ ಸೇನೆ ವಶದಲ್ಲಿ ಕೇವಲ ಓರ್ವ ಪೈಲಟ್ ಮಾತ್ರ ಇದ್ದು 2ನೇ ಪೈಲಟ್ ಸುದ್ದಿ ಫೇಕ್ ಎಂದು ಸಾಬೀತಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದ ವಿಡಿಯೋಗಳನ್ನು ಮುಂದಿಟ್ಟುಕೊಂಡು ಪಾಕ್ ಅಧಿಕಾರಿಗಳು ಹೇಳಿಕೆ ನೀಡುತ್ತಿದ್ದಾರೆ ಎಂದು ಮತ್ತೆ ಸಾಬೀತಾಗಿದೆ. 
ಇದಕ್ಕೆ ಇಂಬು ನೀಡುವಂತೆ ಪಾಕಿಸ್ತಾನದ ಯುವಕನೋರ್ವ ಬೆಂಗಳೂರು ಏರ್ ಶೋ ವೇಳೆ ಸಂಭವಿಸಿದ್ದ ವಿಮಾನಗಳ ದುರಂತದ ವಿಡಿಯೋವನ್ನು ಅಪ್ಲೋಡ್ ಮಾಡಿ ಪಾಕಿಸ್ತಾನ ಸೇನೆ ಭಾರತದ ಯುದ್ಧ ವಿಮಾನವನ್ನು ಹೊಡೆದುರುಳಿಸಿ ಪೈಲಟ್ ನನ್ನು ಬಂಧಿಸಿದೆ ಎಂದು ಹೇಳಿದ್ದ. ವಖಾರ್ ರಿಜ್ವಿ ಎಂಬ ಟ್ವಿಟರ್ ಖಾತೆದಾರ ಈ ವಿಡಿಯೋ ಅಪ್ಲೋಡ್ ಮಾಡಿದ್ದ. ಆದರೆ ಈ ವಿಡಿಯೋಗೆ ಖಡಕ್ಕಾಗಿಯೇ ಭಾರತೀಯರು ತಿರುಗೇಟು ನೀಡಿದ್ದು, ಪಾಕಿಸ್ತಾನೀಯರು ಯಾವಾಗ ಕನ್ನಡ ಮಾತನಾಡಲು ಕಲಿತರು. ಮಾಡಲು ಕೆಲಸವಿಲ್ಲದೇ ಬಹುಶಃ ಕಲಿತರಬಹುದು ಎಂದು ಟ್ವೀಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋವನ್ನು ಹಂಚಿಕೊಂಡಿರುವ ಪಾಕಿಸ್ತಾನಿಯರ ಟ್ವೀಟ್ ಗಳು ಇದೀಗ ಟ್ವಿಟ್ಟರ್​ನಲ್ಲಿ ಟ್ರೆಂಡ್​ ಆಗಿದೆ. ಅಂದಹಾಗೆ, ಆ ವಿಡಿಯೋವನ್ನು ಭಾರತೀಯರೇ ಹೆಚ್ಚು ರೀಟ್ವೀಟ್​ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CJP ಪ್ರತಿಭಟನೆಯಲ್ಲಿ ಭಾಗಿ: ನಟ Imran Khanಗೆ ಮುಂಬೈ ಪೊಲೀಸರಿಂದ 'Leave India' ನೋಟಿಸ್, ಅ.28ರೊಳಗೆ ಭಾರತ ತೊರೆಯುವಂತೆ ಗಡುವು..!

ಭಾರತೀಯರ ಸಾಮೂಹಿಕೆ ಹತ್ಯೆಗೆ ಸಂಚು: ರೈಫಲ್ ಹಿಡಿದು ಅಮೆರಿಕದ ಹಿಂದೂ ದೇವಸ್ಥಾನಕ್ಕೆ ನುಗ್ಗಿದ್ದ ಶೂಟರ್; ಕೊನೆ ಕ್ಷಣದಲ್ಲಿ ಗನ್ ಜಾಮ್, ಆರೋಪಿ ಬಂಧನ..!

ಶೃಂಗೇರಿ ಮತ ಎಣಿಕೆ Video ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ..!

ಕೇರಳಂ: ಮಿನಿ ಕೂಪರ್ ಕಾರು ಅಪಘಾತದಲ್ಲಿ ಮೂವರ ಸಾವು, ತಡರಾತ್ರಿಯಲ್ಲಿ ಹಿಂದೂ ಯುವತಿಯರು ಹೊರಗೆ ಹೋಗಿದ್ಯಾಕೆ? ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ

ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಆದಾಯ ಹಂಚಿಕೆ: GST ಮಂಡಳಿಗೆ ರಾಜ್ಯ ಸರ್ಕಾರ ಪ್ರಸ್ತಾವನೆ