ಇಸ್ಲಾಮ್ ಗೆ ಮರ್ಮಾಘಾತವಾಗಬಲ್ಲ ಮಸೂದೆ ಜಾರಿಗೊಳಿಸಿದ ಚೀನಾ: ಈ ಧರ್ಮದ ಸ್ವರೂಪವೇ ಇನ್ನು ಬದಲು! 
ವಿದೇಶ

ಇಸ್ಲಾಮ್ ಗೆ ಮರ್ಮಾಘಾತವಾಗಬಲ್ಲ ಮಸೂದೆ ಜಾರಿಗೊಳಿಸಿದ ಚೀನಾ: ಈ ಧರ್ಮದ ಸ್ವರೂಪವೇ ಇನ್ನು ಬದಲು!

ತೀವ್ರವಾದಿ ಇಸ್ಲಾಮ್ ನ್ನು ನಿಗ್ರಹಿಸಲು ಈಗಗಾಲೇ ಸಾಕಷ್ಟು ಕ್ರಮ ಕೈಗೊಂಡಿರುವ ಚೀನಾ ಈಗ ಇಸ್ಲಾಮ್ ನ ಸ್ವರೂಪವನ್ನೇ ಬದಲಾಯಿಸುವಂತಹ ಮಸೂದೆಯನ್ನು ಜಾರಿಗೆ ತಂದಿದೆ.

ಬೀಜಿಂಗ್: ತೀವ್ರವಾದಿ ಇಸ್ಲಾಮ್ ನ್ನು ನಿಗ್ರಹಿಸಲು ಈಗಗಾಲೇ ಸಾಕಷ್ಟು ಕ್ರಮ ಕೈಗೊಂಡಿರುವ ಚೀನಾ ಈಗ ಇಸ್ಲಾಮ್ ನ ಸ್ವರೂಪವನ್ನೇ ಬದಲಾಯಿಸುವಂತಹ ಮಸೂದೆಯನ್ನು ಜಾರಿಗೆ ತಂದಿದೆ. 
ಇಸ್ಲಾಮ್ ಧರ್ಮದ ಸ್ವರೂಪವನ್ನು ಚೀನಾಕ್ಕೆ ಹೊಂದುವಂತೆ ಇನ್ನು 5 ವರ್ಷಗಳಲ್ಲಿ ಬದಲಾವಣೆ ಮಾಡುವುದು ಈ ಕಾನೂನಿನ ಉದ್ದೇಶವಾಗಿದ್ದು, ಇದೇ ಗತಿ ಮುಂದಿನ ದಿನಗಳಲ್ಲಿ ಅಲ್ಲಿ ಅಸ್ಥಿತ್ವದಲ್ಲಿರುವ ಟಾವೊ ತತ್ತ್ವ, ಬೌದ್ಧಧರ್ಮ, ಕ್ಯಾಥೊಲಿಕ್, ಮತ್ತು ಪ್ರೊಟೆಸ್ಟೆಂಟ್ ಮತಗಳಿಗೂ ಅನ್ವಯವಾಗಬಹುದು ಎಂದು ಅಲ್ಲಿನ ಸರ್ಕಾರಿ ಮಾಧ್ಯಮಗಳು ವರದಿ ಪ್ರಕಟಿಸಿವೆ. 
ಧಾರ್ಮಿಕ ಅಂಶಗಳನ್ನು ಕಠಿಣವಾಗಿ ನಿಯಂತ್ರಿಸುತ್ತಿರುವ ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್, ಪ್ರಮುಖವಾಗಿ ಉಯ್ಘರ್ ಮುಸ್ಲಿಮರನ್ನು ಹತ್ತಿಕ್ಕಲು ಕ್ರಮಗಳನ್ನು ಕೈಗೊಂಡಿದ್ದರು. ಕ್ಸಿನ್ ಜಿಯಾಂಗ್ ಪ್ರಾಂತ್ಯದಲ್ಲಿರುವ ಉಯ್ಘರ್ ಮುಸ್ಲಿಮರು ಪ್ರತ್ಯೇಕತಾವಾದ ಬಿತ್ತುತ್ತಿದ್ದಾರೆ ಎಂಬ ಕಾರಣಕ್ಕಾಗಿ ಇಸ್ಲಾಮಿಕ್ ಪ್ರತ್ಯೇಕತಾವಾದಿಗಳನ್ನು ಹತ್ತಿಕ್ಕಲು ಮುಸ್ಲಿಮರ ಪವಿತ್ರ ಗ್ರಂಥ ಕುರಾನ್ ವಶಪಡಿಸಿಕೊಂಡು, ರಂಜಾನ್ ಆಚರಣೆ, ನಮಾಜ್ ಮೇಲೆ ನಿರ್ಬಂಧ ವಿಧಿಸಿತ್ತು. 
ಧರ್ಮವನ್ನು ಮಾನಸಿಕ ರೋಗ ಎಂದೇ ಪರಿಗಣಿಸಿ, ಅದನ್ನು ಗುಣಪಡಿಸಬೇಕೆಂಬುದು ಲಗಾಯ್ತಿನಿಂದಲೂ ಪ್ರತಿಪಾದಿಸಿಕೊಂಡು ಬಂದಿದೆ ಚೀನಾ, ಮೊದಲ ಭಾಗವಾಗಿ ಇಸ್ಲಾಮ್ ನ ಸ್ವರೂಪವನ್ನೇ ಬದಲಾವಣೆ ಮಾಡುವಂತಹ ಮಸೂದೆಯನ್ನು ಜಾರಿಗೆ ತಂದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT