ವಿದೇಶ

ಸಿಪಿಇಸಿ ವಿದ್ಯುತ್ ಯೋಜನೆಯಲ್ಲಿ ಪಾಕಿಸ್ತಾನಕ್ಕೆ ಇಲ್ಲ ಆಸಕ್ತಿ: ಪಟ್ಟಿಯಿಂದ ಹೊರಗಿಡುವಂತೆ ಮಿತ್ರರಾಷ್ಟ್ರ ಚೀನಾಕ್ಕೆ ಮನವಿ

Srinivas Rao BV
ಇಸ್ಲಾಮಾಬಾದ್: ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನ ಸಿಪಿಸಿ ವಿದ್ಯುತ್ ಯೋಜನೆಯಲ್ಲಿ ಆಸಕ್ತಿ ಇಲ್ಲ ಎಂದು ಹೇಳಿದೆ.  ಸ್ವತಃ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಈ ಬಗ್ಗೆ ಹೇಳಿಕೆ ನೀಡಿದ್ದು, ಮುಂದಿನ ಕೆಲವು ವರ್ಷಗಳಿಗಾಗುವಷ್ಟು ವಿದ್ಯುತ್ ಉತ್ಪಾದನೆಗೆ ಅನುಕೂಲ ಇರುವುದರಿಂದ ಸಿಪಿಇಸಿಯ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಯಿಂದ ಹೊರಬರಲು ಪಾಕ್ ನಿರ್ಧರಿಸಿದೆ. 
ಸಿಪಿಇಸಿ ಅಡಿಯಲ್ಲಿ ಬರುವ ವಿದ್ಯುತ್ ಉತ್ಪಾದನೆ ಯೋಜನೆಯಲ್ಲಿ ಪಾಕಿಸ್ತಾನಕ್ಕೆ ಆಸಕ್ತಿಯಿಲ್ಲ ಎಂಬ ವಿಷಯವನ್ನು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಚೀನಾಗೆ ಈಗಾಗಲೇ ಅಧಿಕೃತವಾಗಿ ತಲುಪಿಸಿದ್ದಾರೆ ಎಂದು ಪಾಕಿಸ್ತಾನದ ಡಾನ್ ಪತ್ರಿಕೆ ವರದಿ ಮಾಡಿದ್ದು ಸಿಪಿಇಸಿಯಿಂದ ಈ ಯೋಜನೆಯನ್ನು ಕೈಬಿಡುವಂತೆ ಮನವಿ ಮಾಡಿದೆ ಎಂದು ಹೇಳಿದೆ. 
SCROLL FOR NEXT