ವಿದೇಶ

ಟ್ರಂಪ್ ಆಡಳಿತ ತೊರೆದ ಭಾರತೀಯ ಮೂಲದ ಶ್ವೇತಭವನದ ಉಪ ವಕ್ತಾರ ರಾಜ್ ಶಾ

Raghavendra Adiga
ವಾಷಿಂಗ್ಟನ್: ಶ್ವೇತಭವನದ ಪತ್ರಿಕಾ ಕಛೇರಿಯ  ಉನ್ನತ ವಕ್ತಾರರಾಗಿದ್ದ ಭಾರತೀಯ ಮೂಲದ ರಾಜ್ ಶಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಹೊರನಡೆದಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ನ ಆಡಳಿತದಲ್ಲಿ ಅಧಿಕಾರಿಗಳ ನಿರ್ಗಮನವನ್ನು ಸಾರುತ್ತಿದ್ದ ಶಾ ಇದೀಗ ತಾವೇ ಅವರ ಆಡಳಿತದಿಂದ ಹೊರನಡೆದಿದ್ದಾರೆ.
ಅಮೆರಿಕಾದ ಲಾಬಿಂಗ್ ಸಂಸ್ಥೆಗೆ ಸೇರುವ ಸಲುವಾಗಿ ಶಾ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ತ್ತೀಚಿನ ತಿಂಗಳುಗಳಲ್ಲಿ ಹಲವಾರು ಹಿರಿಯ ಅಧಿಕಾರಿಗಳು ತಮ್ಮ ಸ್ಥಾನದಿಂದ ಹೊರನಡೆದಿದ್ದರು.
34 ವರ್ಷದ ಶಾ ಜನವರಿ 2017ರಲ್ಲಿ ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದಂದಿನಿಂದ ಶ್ವೇತಭವನದ ಉಪ ವಕ್ತಾರ ಹಾಗೂ  ರಿಪಬ್ಲಿಕನ್ ನ್ಯಾಷನಲ್ ಕಮಿಟಿಯಲ್ಲಿ ಸಂಶೋಧಕ (ರಿಸರ್ಚರ್) ಆಗಿ ಕಾರ್ಯನಿರ್ವಹಿಸುತ್ತಿದ್ದರು.
ನ್ಯಾಯಮೂರ್ತಿ ಬ್ರೆಟ್ ಎಂ ಕವಾನಾಗ್ ಅವರನ್ನು  ತನ್ನ ಸೆನೆಟ್ ದೃಢೀಕರಣ ವಿಚಾರಣೆಗಾಗಿ ಸಿದ್ದ ಮಾಡುವುದು ಇತ್ತೀಚೆಗೆ ಶಾ ಅವರ  ಪೋರ್ಟ್ಫೋಲಿಯೋಗೆ ಸೇರಿತ್ತು. ಶಾ ಇನ್ನು ಮುಂದೆ ಬಲ್ಲಾರ್ಡ್ ಪಾರ್ಟ್ನರ್ಸ್ ಗೆ ಸೇರಿದ್ದ ಮೀಡಿಯಾ ಗ್ರೂಪ್ಸ್ ನ ಉಸ್ತುವಾರಿ ನೋಡಿಕೊಳ್ಲಲಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಇವರು ರಾಜ್ಯ ಮಾಜಿ ಕಾರ್ಯದರ್ಶಿ,  ಮೆಡೆಲೀನ್ ಆಲ್ಬ್ರೈಟ್ ವಕ್ತಾರ ಜಾಮೀ ರೂಬಿನ್ ಅವರೊಡನೆ  ಕೆಲಸ ಮಾಡಲಿದ್ದಾರೆ ಎಂದು  ಅಧಿಕಾರಿಗಳು ತಿಳಿಸಿದ್ದಾರೆ.
SCROLL FOR NEXT