ವಿದೇಶ

ಯುಎಇ ಸರ್ಕಾರದಿಂದ ಪ್ರವಾಸಿಗರಿಗೆ ಉಚಿತ ಮೊಬೈಲ್, ಸಿಮ್ ಕಾರ್ಡ್ ವಿತರಣೆ

Lingaraj Badiger
ದುಬೈ: ಸಂಯುಕ್ತ ಅರಬ್‌ ಸಂಸ್ಥಾನ(ಯುಎಇ)ಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಯಾವುದೇ ದಾಖಲೆಗಳನ್ನು ಪಡೆಯದೇ ಉಚಿತವಾಗಿ ಮೊಬೈಲ್ ಫೋನ್ ಮತ್ತು ಸಿಮ್ ಕಾರ್ಡ್ ಗಳನ್ನು ಕಾಣಿಕೆಯಾಗಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಶುಕ್ರವಾರ ಮಾಧ್ಯಮಗಳು ವರದಿ ಮಾಡಿವೆ.
ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ ಅಂಡ್ ಸಿಟಿಜನ್ಶಿಪ್ ಅಬುಧಬಿಯಲ್ಲಿ ಈ ಘೋಷಣೆ ಮಾಡಿದ್ದು, ಸಿಮ್ ಕಾರ್ಡ್ ಗಳಲ್ಲಿ ಮೂರು ನಿಮಿಷಗಳ ಉಚಿತ ಅಂತರಾಷ್ಟ್ರೀಯ ಕರೆಗಳು, 20 ಜಿಬಿ ಡೇಟಾ ಹಾಗೂ ಮೆಸೇಜ್ ಸೌಲಭ್ಯ ಹೊಂದಿರಲಿವೆ. ಈ ಪ್ರವಾಸಿ ಸ್ನೇಹಿ ಸಿಮ್ ಕಾರ್ಡ್ ಗಳು ಒಂದು ತಿಂಗಳು ವ್ಯಾಲಿಡಿಟಿಇದ್ದು, ಒಂದು ವೇಳೆ ಪ್ರವಾಸಿಗರು ತಮ್ಮ ವೀಸಾ ಅವಧಿ ವಿಸ್ತರಣೆ ಮಾಡಿಕೊಂಡರೇ ಸಿಮ್ ವ್ಯಾಲಿಡಿಟಿಯೂ ವಿಸ್ತರಣೆಯಾಗಲಿದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.
ಯುಎಇಗೆ ಆಗಮಿಸುವ ಪ್ರವಾಸಿಗರು ಪಾಸ್ ಪೋರ್ಟ್ ನಿಯಂತ್ರಣ ಅಧಿಕಾರಿಯಿಂದ ಸಿಮ್ ಕಾರ್ಡ್ ಮತ್ತು ಮೊಬೈಲ್ ಅನ್ನು ಕಾಣಿಕೆಯಾಗಿ ಪಡೆಯಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
SCROLL FOR NEXT