ವಿದೇಶ

ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆಗೆ ಅಂತರಾಷ್ಟ್ರೀಯ ಕೋರ್ಟ್ ತಡೆ, ಭಾರತಕ್ಕೆ ಜಯ

Srinivas Rao BV
ಹೇಗ್: ಮಾಜಿ ನೌಕಾಧಿಕಾರಿ ಕುಲಭೂಷಣ್ ಜಾಧವ್ ಗೆ ಪಾಕಿಸ್ತಾನದಲ್ಲಿ ವಿಧಿಸಲಾಗಿರುವ ಗಲ್ಲು ಶಿಕ್ಷೆಗೆ ಅಂತಾರಾಷ್ಟ್ರೀಯ ನ್ಯಾಯಾಲಯ ತಡೆ ನೀಡಿದೆ. 
ಜು.17 ರಂದು ಐಸಿಜೆ ಮಹತ್ವದ ಮಧ್ಯಂತರ ಆದೇಶ ನೀಡಿದ್ದು, ಪಾಕಿಸ್ತಾನದಲ್ಲಿರುವ ಕುಲಭೂಷಣ್ ಜಾಧವ್ ಗೆ ರಾಜತಾಂತ್ರಿಕ ನೆರವು ಪಡೆಯುವುದಕ್ಕೆ ಅನುಮತಿ ನೀಡಿದೆ. ಐಸಿಜೆಯ ಈ ತೀರ್ಪು ಪಾಕ್ ವಿರುದ್ಧ ಭಾರತಕ್ಕೆ ಮಹತ್ವದ ಗೆಲುವು ಎಂದು ವಿಶ್ಲೇಷಿಸಲಾಗುತ್ತಿದೆ. 
ಕುಲಭೂಷಣ್ ಜಾಧವ್ ಗೆ ಗೂಢಚಾರಿ ಹಾಗೂ ಉಗ್ರವಾದ ಆರೋಪದ ಮೇಲೆ ಪಾಕಿಸ್ತಾನ ಮಿಲಿಟರಿ ನ್ಯಾಯಾಲಯ ಮರಣದಂಡನೆಯನ್ನು ವಿಧಿಸಿತ್ತು. ಇದು ಭಾರತ ಮತ್ತು ಪಾಕಿಸ್ತಾನ ನಡುವೆ ಶೀತಲ ಸಮರಕ್ಕೆ ನಾಂದಿ ಹಾಡಿತ್ತು.  
ಪಾಕಿಸ್ತಾನ ಕುಲಭೂಷಣ್ ಜಾಧವ್ ಗೆ ವಿಧಿಸಿರುವ ತೀರ್ಪನ್ನು ಪ್ರಶ್ನಿಸಿ ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಮೊರೆ ಹೋಗಿತ್ತು. ಈ ಪ್ರಕರಣದ ವಿಚಾರಣೆ ಐಸಿಜೆಯ ಹೇಗ್ ಕೇಂದ್ರ ಕಚೇರಿಯಲ್ಲಿ ಕಳೆದ ಫೆಬ್ರವರಿ 18ರಂದು ಆರಂಭಗೊಂಡಿದೆ.  
ಜಾಧವ್ ಅವರೊಡನೆ ಸಂವಹನ ನಡೆಸಲು, ಅವರನ್ನು ಭೇಟಿಯಾಗಲು ಪಾಕಿಸ್ತಾನ ಅವಕಾಶ ನೀಡಿಲ್ಲ, ಅಲ್ಲದೆ ಅವರ ಪರವಾಗಿ ಕಾನೂನು ಹೋರಾಟ ನಡೆಸಲೂ ಅವಕಾಅ ನೀಡಿಲ್ಲವೆನ್ನುವುದನ್ನು ನಾವು ಕಂಡುಕೊಂಡಿದ್ದೇವೆ. ಇದು ಅಂತರಾಷ್ಟ್ರೀಯ ಒಪ್ಪಂದವಾದ ವಿಯೆನ್ನಾ ಒಪ್ಪಂದದ ವಿರುದ್ಧವಾಗಿದೆ. ಆ ಒಪ್ಪಂದದ ಕಟ್ಟುಪಾಡುಗಳ ಉಲ್ಲಂಘನೆಯಾಗಿದೆ ಎಂದು ಅಂತರಾಷ್ಟ್ರೀಯ ನ್ಯಾಯಾಲಯ ಹೇಳಿದೆ.
SCROLL FOR NEXT