ವಿದೇಶ

ಭಾರತೀಯ ನಾಗರಿಕ ವಿಮಾನ ನಿರ್ಬಂಧದಿಂದ ಪಾಕ್ ಗೆ ಕೋಟ್ಯಂತರ ರೂ. ನಷ್ಟ

Lingaraj Badiger
ಕರಾಚಿ: ಪಾಕಿಸ್ತಾನದ ಬಾಲಕೋಟ್ ನ ಉಗ್ರ ತಾಣದ ಮೇಲೆ ಭಾರತೀಯ ವಾಯುಪಡೆ ವೈಮಾನಿಕ ದಾಳಿ ನಡೆಸಿದ ನಂತರ ಪಾಕ್ ತನ್ನ ವಾಯು ಪ್ರದೇಶವನ್ನು ಭಾರತದ ನಾಗರಿಕ ವಿಮಾನಗಳಿಗೆ ನಿರ್ಬಂಧಿಸಿದ್ದರಿಂದ ಸುಮಾರು 8.5 ಕೋಟಿ ಅರಬ್ ಮೌಲ್ಯದ ರೂ. ನಷ್ಟವಾಗಿದೆ ಎಂದು ಅಲ್ಲಿನ ನಾಗರಿಕ ವಿಮಾನಯಾನ ಪ್ರಾಧಿಕಾರ (ಸಿಎಸ್ಎಸ್) ತಿಳಿಸಿದೆ.
ಪಾಕಿಸ್ತಾನದ ವಾಯುಯಾನ ಸಚಿವ ಗುಲಾಮ್ ಸರ್ವರ್ ಖಾನ್, ಸಿಎಸ್ಎಸ್ ಪ್ರಧಾನ ಕಚೇರಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ''ವಾಯುಯಾನ ಮುಚ್ಚಿದ್ದರಿಂದ ನಮ್ಮ ಉದ್ಯಮಕ್ಕೆ ದೊಡ್ಡ ನಷ್ಟವಾಗಿದೆ. ಆದರೆ, ನಿರ್ಬಂಧದಿಂದಾಗಿ ಪಾಕಿಸ್ತಾನಕ್ಕಿಂತ ಭಾರತವು ಹೆಚ್ಚು ತೊಂದರೆ ಎದುರಿಸಬೇಕಾಯಿತು. ಪಾಕ್ ಗಿಂತ ಭಾರತ ಎರಡು ಪಟ್ಟು ಹೆಚ್ಚು ನಷ್ಟ ಅನುಭವಿಸಿದೆ. ಆದರೆ, ಇಂತಹ ಪರಿಸ್ಥಿತಿಯಲ್ಲಿ ಎರಡು ದೇಶಗಳಿಗೆ ಸೌಹಾರ್ದತೆಯ ಅಗತ್ಯವಿದೆ'' ಎಂದರು.
ಪಾಕಿಸ್ತಾನ ಅಂತಾರಾಷ್ಟ್ರೀಯ ವಾಯುಯಾನ (ಪಿಐಎ) ಪರಿಸ್ಥಿತಿಯನ್ನು ಉಲ್ಲೇಖಿಸಿದ ಅವರು, ಸರ್ಕಾರಿ ವಿಮಾನಯಾನ ಸಂಸ್ಥೆಗಳನ್ನು ಪುನರುಜ್ಜೀವನಗೊಳಿಸುವುದು ಇಮ್ರಾನ್ ಖಾನ್ ಸರ್ಕಾರದ ಉದ್ದೇಶವಾಗಿದೆ. ಪಿಐಎ ಅನ್ನು ಹಂತ ಹಂತವಾಗಿ ಹೆಚ್ಚಿಸಿ, 2025 ರವರೆಗೆ 14 ಹೊಸ ವಿಮಾನಗಳನ್ನು ಸೇರಿಸಲಾಗುವುದು ಎಂದರು.
SCROLL FOR NEXT